RJ Rachana: ಬದುಕಿನ ಪಯಣ ಮುಗಿಸಿದ ಆರ್​ ಜೆ ರಚನಾ

RJ Rachana: ಎದೆ ನೋವು ಕಾಣಿಸಿಕೊಂಡಿದ್ದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ರಚನಾ ಕೊನೆಯುಸಿರೆಳೆದಿದ್ದಾರೆ.

Written by - Zee Kannada News Desk | Last Updated : Feb 22, 2022, 04:29 PM IST
  • ಹೃದಯಘಾತದಿಂದ ನಿಧನರಾದ RJ ರಚನಾ ವಿಧಿವಶ
  • ಜೆಪಿ ನಗರದ ಫ್ಲಾಟ್ ನಲ್ಲಿ ರಚನಾಗೆ ಕಾಣಿಸಿದ್ದ ಎದೆ ನೋವು
  • ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಕೊನೆಯುಸಿರೆಳೆದ ರಚನಾ
RJ Rachana: ಬದುಕಿನ ಪಯಣ ಮುಗಿಸಿದ ಆರ್​ ಜೆ ರಚನಾ  title=
RJ ರಚನಾ

ಬೆಂಗಳೂರು: ರೆಡಿಯೋ ಮಿರ್ಚಿ (Radio Mirchi)ಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿ (RJ)ಯಾಗಿ ಕೆಲಸ ಮಾಡಿದ್ದ ರಚನಾ ಹೃದಯಘಾತದಿಂದ ನಿಧನರಾಗಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಮದುವೆ! ಈ ಬಗ್ಗೆ ನಟ ವಿಜಯ್ ದೇವರಕೊಂಡ ಮೊದಲ ಪ್ರತಿಕ್ರಿಯೆ..

ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ರಚನಾಗೆ (Rachana) ಹೃದಯಾಘಾತ ಸಂಭವಿಸಿದೆ. ಎದೆ ನೋವು ಕಾಣಿಸಿಕೊಂಡಿದ್ದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ರಚನಾ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದರು. ರಚನಾ ಅವರ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. 

ಜನಪ್ರಿಯ ರೆಡಿಯೋ ಜಾಕಿಯಾಗಿದ್ದ ರಚನಾ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ರಕ್ಷಿತ್​ ಶೆಟ್ಟಿ ಅವರ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' (Simple Agi Ondh Love Story) ಸಿನಿಮಾದಲ್ಲಿ ಅಭಿನಯಿಸಿದ್ದರು. ಸಿನಿಮಾದಲ್ಲೂ ರೆಡಿಯೋ ಜಾಕಿ ಪಾತ್ರದಲ್ಲೇ ನಟಿಸಿದ್ದರು.

ಇದನ್ನೂ ಓದಿ: Kruti Shetty: ನಟಿ ಕೃತಿ ಶೆಟ್ಟಿ ಬಗ್ಗೆ ಶುರುವಾಯ್ತು ಹೊಸ ಗಾಸಿಪ್! ಏನಿದು ಆರೋಪ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News