Gandharva First Look: 'ಗಂಧರ್ವ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ರಾಘವೇಂದ್ರ ರಾಜಕುಮಾರ್

Gandharva First Look Released: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಉಮೇಶ್ ಕುಮಾರ್ ಜಿ ಪ್ರಥಮ ನಿರ್ದೇಶನದ "ಗಂಧರ್ವ" ಚಿತ್ರದ ಫಸ್ಟ್ ಲುಕನ್ನು (First Look) ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

Written by - YASHODHA POOJARI | Edited by - Nitin Tabib | Last Updated : Mar 29, 2022, 06:03 PM IST

    ಗಂಧರ್ವ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ರಾಘವೇಂದ್ರ ರಾಜ್ ಕುಮಾರ್

  • ಗೋವಿಂದ್ ರಾಜ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ
  • ಸುಕನ್ಯ ಗಿರೀಶ್ ಈ ಚಿತ್ರದ ನಾಯಕ ನಟಿ
Gandharva First Look: 'ಗಂಧರ್ವ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ರಾಘವೇಂದ್ರ ರಾಜಕುಮಾರ್ title=
Gandharva First Look

Gandharva First Look Released: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಉಮೇಶ್ ಕುಮಾರ್ ಜಿ ಪ್ರಥಮ ನಿರ್ದೇಶನದ "ಗಂಧರ್ವ" ಚಿತ್ರದ ಫಸ್ಟ್ ಲುಕನ್ನು (First Look) ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಕೂಡ ರಾಘಣ್ಣ (Raghavendra Rajkumar) ಅಭಿನಯಿಸುತ್ತಿದ್ದಾರೆ. ಆದರೆ ನಮ್ಮ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರನ್ನು ಈಗಿರುವ ರೀತಿ ತೋರಿಸಲ್ಲ. ಹಿಂದೆ ರಾಘಣ್ಣ ಹೇಗಿದ್ದರೊ ಹಾಗೆ ನೋಡಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ-Viral Photo: ಗುಟ್ಟಾಗಿ ವಿವಾಹವಾಗಿದ್ದಾರೆಯೇ Alia Bhatt-Ranabir Kapoor?

ಗೋವಿಂದ್ ರಾಜ್ (Govind Raj)  ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕನಾಗಿ ಇವರಿಗೆ ಇದು ಮೊದಲ ಚಿತ್ರ.‌ ಹಿಂದೆ ಶಿವಾಜಿ ಸುರತ್ಕಲ್ (Shivaji Suratkal) ಚಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಸುಕನ್ಯ ಗಿರೀಶ್ (Sukanya Girish) ಈ ಚಿತ್ರದ ನಾಯಕಿ. ನಾಗೇಂದ್ರ ಅರಸ್, ಲಕ್ಷ್ಮೀ ಸುಬ್ಬಯ್ಯ, ಕಿರಣ್ ಚಂದ್ರ, ಶಿವರಾಜ್ ಮುತ್ತಣ್ಣ, ಶರಣ್, ಹಿತ್ತೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಇದನ್ನೂ ಓದಿ-KGF2 Trailer: 24 ಗಂಟೆಗಳಲ್ಲಿ 'ಆರ್‌ಆರ್‌ಆರ್‌', 'ರಾಧೆ ಶ್ಯಾಮ್' ದಾಖಲೆಗಳನ್ನು ಪುಡಿ ಪುಡಿ ಮಾಡಿದ ಕೆಜಿಎಫ್‌ 2 ಟ್ರೈಲರ್‌!

ಎನ್ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರೆಡ್ಡಿ ಎನ್ ರಾಥೋಡ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರೋನಾಡ್ ಬಕೇಶ್ ಸಂಗೀತ ನಿರ್ದೇಶನ, ನವೀನ್ ಸೂರ್ಯ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಸಂಕಲನ ಈ ಚಿತ್ರಕ್ಕಿದೆ.  ಸ್ನೇಹದ ಮಹತ್ವ ಸಾರುವ ಹಾಗೂ ಡಿಫರೆಂಟ್ ಲವ್ ಸ್ಟೋರಿಯ ಈ ಚಿತ್ರಕ್ಕೆ ಏಪ್ರಿಲ್ ನಲ್ಲಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ದಾಂಡೇಲಿ, ಹಂಪಿ, ಹೊಸಪೇಟೆ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News