ದುಬೈನಲ್ಲಿ ಪತ್ನಿ, 17 ವರ್ಷದ ಪುತ್ರಿ ಇದ್ದಾಳೆಂಬ ಆರೋಪಕ್ಕೆ ಸಲ್ಮಾನ್ ಖಾನ್ ಗರಂ..!

ಕೆಟ್ಟದಾಗಿ ಟ್ರೋಲ್ ಮಾಡಿದವರ ವಿರುದ್ಧ ಸಲ್ಮಾನ್ ಖಾನ್ ಗರಂ ಆಗಿದ್ದಾರೆ.

Written by - Puttaraj K Alur | Last Updated : Jul 22, 2021, 04:34 PM IST
  • ಸಲ್ಮಾನ್ ಖಾನ್ ಗೆ ದುಬೈನಲ್ಲಿ ಪತ್ನಿ ಮತ್ತು 17 ವರ್ಷದ ಪುತ್ರಿ ಇದ್ದಾಳೆಂದು ಟ್ರೋಲ್ ಮಾಡಲಾಗಿತ್ತು
  • ತಮಗೆ ಯಾವ ಪತ್ನಿಯೂ ಇಲ್ಲ, ಪುತ್ರಿಯೂ ಇಲ್ಲವೆಂದು ಟ್ರೋಲ್ ವಿರುದ್ಧ ಭಾಯಿಜಾನ್ ವಾಗ್ದಾಳಿ
  • ನಾನು ಮುಂಬೈನಲ್ಲಿಯೇ ಇದ್ದೇನೆ ಎಂಬುದು ಇಡೀ ಭಾರತಕ್ಕೆ ಗೊತ್ತಿದೆ ಎಂದ ಸಲ್ಲುಮಿಯಾ
ದುಬೈನಲ್ಲಿ ಪತ್ನಿ, 17 ವರ್ಷದ ಪುತ್ರಿ ಇದ್ದಾಳೆಂಬ ಆರೋಪಕ್ಕೆ ಸಲ್ಮಾನ್ ಖಾನ್ ಗರಂ..! title=
ಟ್ರೋಲ್ ವಿರುದ್ಧ ಸಲ್ಮಾನ್ ಖಾನ್ ಗರಂ

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್, ಮೀಮ್ಸ್, ಜೋಕ್ಸ್ ಗಳ ಕಾರುಬಾರು ಜೋರಾಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳನ್ನೂ ಕೂಡ ಚಿತ್ರ-ವಿಚಿತ್ರವಾಗಿ ಟ್ರೋಲ್ ಮಾಡಲಾಗುತ್ತದೆ. ಇಲ್ಲಸಲ್ಲದ ಆರೋಪ ಮಾಡಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಟ್ರೋಲ್ ಗಳನ್ನು ಹರಿಬೀಡಲಾಗುತ್ತದೆ. ಯಾರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಟ್ರೋಲ್ ಪ್ರಸಿದ್ಧಿಯಾಗಿವೆ. ಇದಕ್ಕೆ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಕೂಡ ಹೊರತಾಗಿಲ್ಲ.

ಸಹೋದರ ಅರ್ಬಾಜ್ ಖಾನ್ ಅವರ ಟಾಕ್ ಶೋ - ಪಿಂಚ್ 2( Pinch 2 Talk Show)ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಸೂಪರ್ ಸ್ಟಾರ್ ಸಲ್ಮಾನ್ ಖಾನ್(Salman Khan) ತಮ್ಮ ವಿರುದ್ಧದ ಅನೇಕ ಗಾಳಿಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪಿಂಚ್ 2 ಟಾಕ್ ಶೋನಲ್ಲಿ ಪಾಲ್ಗೊಳ್ಳುವ ಅತಿಥಿಗಳು ಟ್ರೋಲ್‌ಗಳು ಮತ್ತು ಅವರು ಮಾಡಿರುವ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಬೇಕಾಗುತ್ತದೆ. ಅದೇ ರೀತಿ ಭಾಯಿಜಾನ್ ಕೂಡ ಅನೇಕವುಗಳಿಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲವು ಟ್ರೋಲ್‌ಗಳ ವಿರುದ್ಧ ಗರಂ ಆದರು.

 
 
 
 

 
 
 
 
 
 
 
 
 
 
 

A post shared by Arbaaz Khan (@arbaazkhanofficial)

ಇದನ್ನೂ ಓದಿ: Raj Kundra ಹೊಸ WhatsApp ಚಾಟ್ ನಲ್ಲಿ ಹಲವು ಸಂಗತಿಗಳು ಬಹಿರಂಗ

‘ಎಲ್ಲಿ ಅಡಗಿ ಕುಳಿತಿದ್ಯಾ, ನಿನಗೆ ದುಬೈನಲ್ಲಿ ಪತ್ನಿ ನೂರ್ ಮತ್ತು 17 ವರ್ಷದ ಪುತ್ರಿ ಇದ್ದಾಳೆ ಅಂತಾ ಭಾರತದಲ್ಲಿರುವ ಎಲ್ಲರಿಗೂ ಗೊತ್ತಿದೆ. ಭಾರತೀಯರನ್ನು ಎಲ್ಲಿವರೆಗೂ ಮುರ್ಖರನ್ನಾಗಿ ಮಾಡ್ತೀಯಾ..? ಎಂದು ಸಲ್ಲು ಮೀಯಾ ಬಗ್ಗೆ ಈ ಹಿಂದೆ ಟ್ರೋಲ್ ಮಾಡಲಾಗಿತ್ತು. ಈ  ಟ್ರೋಲ್ ಬಗ್ಗೆ ಅರ್ಬಾಜ್ ಖಾನ್ ತಮ್ಮ ಸಹೋದರನ ಪ್ರತಿಕ್ರಿಯೆ ಕೇಳಿದ್ದಾರೆ. ಈ ವೇಳೆ ತಮ್ಮ ವಿರುದ್ಧದ ವದಂತಿಗಳಿಗೆ ಸಲ್ಮಾನ್ ಖಾನ್ ಗರಂ ಆದರು. ಟ್ರೋಲ್(Troll) ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಈ ರೀತಿ ಟ್ರೋಲ್ ಮಾಡುವವರು ಸುಶಿಕ್ಷಿತರಾಗಿದ್ದಾರೆ. ಇವೆಲ್ಲ ಗಾಳಿಸುದ್ದಿಗಳು. ಅವರು ಯಾರ ಬಗ್ಗೆ ಟ್ರೋಲ್ ಮಾಡಿದ್ದರೋ, ಎಲ್ಲಿ ಪೋಸ್ಟ್ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಅವರ ಟ್ರೋಲ್ ಪೋಸ್ಟ್ ಗಳಿಗೆ ನಾನು ಪ್ರತಿಕ್ರಿಯಿಸಬೇಕಾ..?. ಬ್ರದರ್ ನನಗೆ ಯಾವ ಪತ್ನಿಯೂ ಇಲ್ಲ. ನಾನು ಭಾರತದಲ್ಲಿಯೇ ವಾಸಿಸುತ್ತಿದ್ದೇನೆ, ಮುಂಬೈನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ನಲ್ಲಿ ಚಿಕ್ಕ ವಯಸ್ಸಿನಿಂದಲೇ ಇದ್ದೇನೆ. ಈ ರೀತಿಯ ಟ್ರೋಲ್ ಮಾಡುವವರ ಬಗ್ಗೆ ನಾನು ಏನು ಹೇಳುವುದಿಲ್ಲ. ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂಬುದು ಇಡೀ ಭಾರತಕ್ಕೆ ಗೊತ್ತಿದೆ’ ಅಂತಾ ಸಲ್ಮಾನ್ ಖಾನ್(Salman Khan) ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದೇನು..?

ನೀವು ಕತ್ರಿನಾ ಕೈಫ್ ಅಥವಾ ದಿಶಾ ಪಟಾನಿಯವರಲ್ಲಿ ಯಾರನ್ನು ಸೋಷಿಯಲ್ ಮೀಡಿಯಾ(Social Media) ಸಲಹೆಗಾರರನ್ನಾಗಿ ನೇಮಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ಕತ್ರಿನಾ ಎಂದು ಉತ್ತರಿಸಿದರು. ಏಕೆಂದರೆ ಸೋಷಿಯಲ್ ಮೀಡಿಯಾ ವಿಚಾರದಲ್ಲಿ ಕತ್ರಿನಾಗೆ ಹೆಚ್ಚಿನ ಸಂವೇದನಾಶೀಲತೆ ಇದೆ ಅಂತಾ ಭಾಯಿಜಾನ್ ಹೇಳಿದ್ದಾರೆ.  ಅರ್ಬಾಜ್ ಖಾನ್ ನಡೆಸಿಕೊಡುವ ಪಿಂಚ್ 2 ಟಾಕ್ ಶೋನಲ್ಲಿ ಸಲ್ಮಾನ್ ಖಾನ್ ಅಲ್ಲದೆ ಅನನ್ಯಾ ಪಾಂಡೆ, ಟೈಗರ್ ಶ್ರಾಫ್, ಫರ್ಹಾನ್ ಅಖ್ತರ್, ಕೈರಾ ಅಡ್ವಾಣಿ, ರಾಜಕುಮಾರ್ ರಾವ್ ಮತ್ತು ಫರಾಹ್ ಖಾನ್ ಅತಿಥಿಗಳಾಗಿ ಭಾಗಿಯಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News