Rajinikanth Birthday: 71ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್, ‘ತಲೈವಾ’ಗೆ ಶುಭಾಶಯಗಳ ಮಹಾಪೂರ

ಭಾರತೀಯ ಚಿತ್ರರಂಗದ ‘ಸೂಪರ್​ ಸ್ಟಾರ್​’ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಒಂದು ರೀತಿ ಹಬ್ಬವಿದ್ದಂತೆ.

Written by - Puttaraj K Alur | Last Updated : Dec 12, 2021, 10:48 AM IST
  • ಸೂಪರ್ ಸ್ಟಾರ್ ರಜನಿಕಾಂತ್ ಗೆ 71ನೇ ಹುಟ್ಟುಹಬ್ಬದ ಸಂಭ್ರಮ
  • ವಿವಿಧ ಚಿತ್ರರಂಗದ ಗಣ್ಯರಿಂದ ‘ತಲೈವಾ’ಗೆ ಶುಭಾಶಯಗಳ ಸುರಿಮಳೆ
  • ಸೋಷಿಯಲ್ ಮೀಡಿಯಾದಲ್ಲಿ ‘ರಜನಿ’ಗೆ ಅಭಿಮಾನಿಗಳಿಂದ ಶುಭಾಶಯ
Rajinikanth Birthday: 71ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್, ‘ತಲೈವಾ’ಗೆ ಶುಭಾಶಯಗಳ ಮಹಾಪೂರ title=
71ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್

ನವದೆಹಲಿ: ‘ಸೂಪರ್ ಸ್ಟಾರ್’ ರಜನಿಕಾಂತ್(Rajinikanth)​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ‘ತಲೈವಾ’ (Thalaiva) ಭಾನುವಾರ(ಡಿ.12) 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರುಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕೋಟ್ಯಂತರ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ರಜನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಜನಿಕಾಂತ್ ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ‘ಸೂಪರ್​ ಸ್ಟಾರ್​’ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಒಂದು ರೀತಿ ಹಬ್ಬವಿದ್ದಂತೆ. ತಮ್ಮ ನೆಚ್ಚಿನ ನಟನ ಜನ್ಮದಿನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಹಾರೈಸಿದ್ದು, ದೇವರು ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: Alia Bhatt: ರಣಬೀರ್ ಹೆಸರು ಕೇಳಿ ಇದ್ದಕ್ಕಿದ್ದಂತೆ ನಾಚಿಕೆಪಟ್ಟ ಆಲಿಯಾ ಭಟ್..!

ಸೂಪರ್ ಸ್ಟಾರ್ ರಜನಿಕಾಂತ್ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸ್ಟಾರ್ ಗಿರಿ ಮತ್ತು ಇಮೇಜ್ ಕೇವಲ ತಮಿಳಿಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣದಲ್ಲಿ ತೆಲುಗು, ಕನ್ನಡ ಮತ್ತು ಮಲಯಾಳಂ ಪ್ರೇಕ್ಷಕರಲ್ಲಿಯೂ ‘ತಲೈವಾ’ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂಡಿಯನ್ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನಿಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ನೀಡಿ ಗೌರವಿಸಿದೆ. ಭಾರತೀಯ ಚಿತ್ರರಂಗದಲ್ಲಿ ರಜನಿಕಾಂತ್ ಸೃಷ್ಟಿಸಿರುವ ಹವಾ ಅಷ್ಟಿಷ್ಟಲ್ಲ. ತಮಿಳು ಸಿನಿಮಾ ಇತಿಹಾಸದಲ್ಲಿ ದೊಡ್ಡ ಸಾಧನೆ ಮಾಡಿರುವ ಅವರು, ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ರಜನಿಕಾಂತ್ ಇದುವರೆಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ರಜನಿ ಸಿನಿಮಾಗಳಲ್ಲಿ ಅಭಿಮಾನಿಗಳು ವಿಶೇಷವಾದದ್ದನ್ನು ಕಂಡುಕೊಂಡಿದ್ದಾರೆ. ‘ತಲೈವಾ’ ಸಿನಿಮಾಗಳು ಇಡೀ ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಸಖತ್ ಸದ್ದು ಮಾಡುತ್ತವೆ. ಬಿಡುಗಡೆಗೂ ಮುನ್ನವೇ ರಜನಿ ಸಿನಿಮಾಗಳು ಸಖತ್ ಸೌಂಡ್ ಮಾಡಿ ಗಲ್ಲಾಪೆಟ್ಟಿಗೆ ಧೂಳೆಬ್ಬಿಸಲು ಸಿದ್ಧವಾಗಿರುತ್ತವೆ.  ರಜನಿ​ ಚಿತ್ರಗಳು ರಿಲೀಸ್​ ಆದರೆ ಸಾಕು ಥಿಯೇಟರ್ ಗಳ​ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಬಣ್ಣದ ಲೋಕದಲ್ಲಿ ರಜನಿ ಸೃಷ್ಟಿಸಿದಷ್ಟು ಕ್ರೇಜ್​ ಯಾರೂ ಸೃಷ್ಟಿಸಿಲ್ಲ.

ಇದನ್ನೂ ಓದಿ: ರಾಜಾಮೌಳಿ ಮತ್ತು ಅನುಷ್ಕಾ- ಪ್ರಭಾಸ್ ಮಧ್ಯೆ ಹೊಗೆಯಾಡುತ್ತಿದೆಯೇ ಮನಸ್ಥಾಪ? RRR ಟ್ರೈಲರ್ ರಿಲೀಸ್ ನಂತರ ಆಗಿದ್ದೇನು?

ರಜನಿಕಾಂತ್ ಸಿನಿಮಾಗಳು ಎಲ್ಲಿಯೇ ರಿಲೀಸ್ ಆಗಲಿ ಬಾಕ್ಸಾಫೀಸ್ ನಲ್ಲಿ ದೊಡ್ಡ ಸೌಂಡ್ ಮಾಡುತ್ತವೆ. ನಿರ್ಮಾಪಕ ಮತ್ತು ನಿರ್ದೇಶಕರ ಡಾರ್ಲಿಂಗ್ ಆಗಿರುವ ರಜನಿಯವರ ಕಾಲ್ ಶಿಟ್ ಸಿಗುವುದು ಅಷ್ಟು ಸುಲಭವಲ್ಲ. ಅವರ ಕಾಲ್ ಶಿಟ್ ಪಡೆಯಲು ದೊಡ್ಡ ದೊಡ್ಡ ನಿರ್ದೇಶಕರು, ನಿರ್ಮಾಪಕರೇ ಕ್ಯೂನಲ್ಲಿರುತ್ತಾರೆ. ಹೈ ಬಜೆಟ್, ಲೋ ಬಜೆಟ್ ಹೀಗೆ ಯಾವುದೇ ರೀತಿ ಸಿನಿಮಾ ಮಾಡಿದರೂ ರಜನಿ ವಿಶೇಷ ಪಾತ್ರಗಳಲ್ಲಿ ಮಿಂಚುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ. ಇತ್ತೀಚೆಗಷ್ಟೇ ತೆರೆಕಂಡ ‘ಅಣ್ಣಾತೆ’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸಖತ್ ಕಲೆಕ್ಷನ್ ಮಾಡಿದೆ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಂಡ ಈ ಸಿನಿಮಾ ಭರ್ಜರಿ ಗಳಿಕೆ ಮಾಡುವ ಮೂಲಕ ಈ ವರ್ಷ ರಜನಿಯವರಿಗೆ​ ಯಶಸ್ಸು ತಂದುಕೊಟ್ಟಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News