Ram Charan: ಮಗಳ ಮುದ್ದಾದ ವಿಡಿಯೋ ಹಂಚಿಕೊಂಡ ರಾಮ್‌ಚರಣ್‌, ಸೋ ಕ್ಯೂಟ್‌ ಎಂದ ಫ್ಯಾನ್ಸ್‌!

Ram Charan Upasana Video: ಸೌತ್‌ ಸೂಪರ್ ಸ್ಟಾರ್ ರಾಮ್ ಚರಣ್ ತೇಜ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರ ಕ್ಯೂಟ್‌ ಬೇಬಿ ಕೂಡ ಇದ್ದಾಳೆ. ಈ ವಿಡಿಯೋ ನೋಡಿ ಫ್ಯಾನ್ಸ್‌ ಸಂತಸಗೊಂಡಿದ್ದಾರೆ.   

Written by - Chetana Devarmani | Last Updated : Jul 21, 2023, 08:06 AM IST
  • ಸೌತ್‌ ಸೂಪರ್ ಸ್ಟಾರ್ ರಾಮ್ ಚರಣ್ ತೇಜ
  • ಮುದ್ದಾದ ವಿಡಿಯೋ ಹಂಚಿಕೊಂಡ ರಾಮ್‌ಚರಣ್‌
  • ವಿಡಿಯೋ ನೋಡಿ ಫ್ಯಾನ್ಸ್‌ ದಿಲ್‌ ಖುಷ್‌
Ram Charan: ಮಗಳ ಮುದ್ದಾದ ವಿಡಿಯೋ ಹಂಚಿಕೊಂಡ ರಾಮ್‌ಚರಣ್‌, ಸೋ ಕ್ಯೂಟ್‌ ಎಂದ ಫ್ಯಾನ್ಸ್‌!   title=

Ram Charan Daughter: ತೆಲುಗು ನಟ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ ಅವರು ಮಹಾತೀರ ಚಿತ್ರದ ಮೂಲಕ ಪದಾರ್ಪಣೆ ಮಾಡಿ ಇಂದು ಸೌತ್‌ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರು ನಟಿಸಿದ RRR ಚಿತ್ರವು ಈ ವರ್ಷದ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರು 2012 ರಲ್ಲಿ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಕಾಮಿನೇನಿ ಅವರನ್ನು ವಿವಾಹವಾದರು.

ರಾಮ್ ಚರಣ್ ಜೊತೆ ಮದುವೆಯಾದಾಗ ಉಪಾಸನಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಮಗದೀರ ಚಿತ್ರದ ನಂತರ ರಾಮ್ ಚರಣ್ ಖ್ಯಾತಿ ಉತ್ತುಂಗದಲ್ಲಿದ್ದ ಸಮಯ. ಇವರನ್ನು ಮದುವೆಯಾದ ಉಪಾಸನಾ ಅವರಿಗೆ ಸ್ವಲ್ಪವೂ ಸೂಕ್ತವಲ್ಲ ಎಂದು ಹಲವರು ಹೇಳಿದ್ದರು. ಮದುವೆಯಾಗಿ ಹಲವು ವರ್ಷಗಳಾದರೂ ಅವರು ಇನ್ನೂ ಮಕ್ಕಳಾಗಿಲ್ಲ ಎಂಬ ವಿಚಾರವಾಗಿ ಅನೇಕ ಟೀಕೆಗಳನ್ನು ಎದುರಿಸಿದರು.ಕೆಲವು ವರ್ಷಗಳ ಹಿಂದೆ ಉಪಾಸನವ ಅವರನ್ನು ತಡವಾಗಿ ಗರ್ಭಧಾರಣೆಯ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಮಗುವಿನ ಬಗ್ಗೆ ಮತ್ತು ನವವಿವಾಹಿತರಾಗಿ ಜೀವನದಲ್ಲಿ ಸಾಧಿಸಬೇಕಾದ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು. 

ಇದನ್ನೂ ಓದಿ: Pooja Hegde: ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನ.!? ಆತಂಕದಲ್ಲಿ ಫ್ಯಾನ್ಸ್‌

"ನಾವು ವೃತ್ತಿಪರವಾಗಿ ನಮ್ಮ ಸರಿಯಾದ ಸ್ಥಳ ತಲುಪಿದಾಗ ನಾವಿಬ್ಬರೂ ಮಗುವನ್ನು ಹೊಂದಲು ನಿರ್ಧರಿಸಿದ್ದೇವೆ. ಅದನ್ನೇ ನಾವು ಮಾಡಿದ್ದೇವೆ. ನಾನು ತಾಯಿಯಾಗಲು ನಿರ್ಧರಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ" ಎಂದು ಉಪಾಸನಾ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ, ನಮ್ಮ ಮಗುವಿಗೆ ಬೇಕಾದ ಜೀವನವನ್ನು ನಾವು ನೀಡಬೇಕೆಂದು ಬಯಸಿದ್ದರಿಂದ ತಡವಾಗಿ ತಾಯಿಯಾಗಲು ನಿರ್ಧರಿಸಿದೆ ಎಂದು ಉಪಾಸನಾ ಹೇಳಿದ್ದಾರೆ.

 

 

ಕಳೆದ ಜೂನ್ 20 ರಂದು ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಸುಂದರವಾದ ಹೆಣ್ಣು ಮಗು ಜನಿಸಿದೆ. ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರ ಮಗು ಜನಿಸಿತು. 11 ವರ್ಷಗಳ ದಾಂಪತ್ಯದ ನಂತರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ದಂಪತಿಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅಭಿನಂದಿಸಿದ್ದಾರೆ. ಇತ್ತೀಚೆಗೆ ಮಗುವಿನ ನಾಮಕರಣ ಸಮಾರಂಭವನ್ನು ನಡೆಸಲಾಯಿತು, "ಗ್ಲಿನ್ ಕಾರಾ" ಎಂಬ ಸುಂದರವಾದ ಹೆಸರನ್ನು ಇಡಲಾಯಿತು.

ಇದೀಗ ರಾಮ್‌ಚರಣ್‌ ತಮ್ಮ ಮಡದಿ ಉಪಾಸನಾ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಅವರ ಮದುವೆಯಿಂದ ಗ್ಲಿನ್ ಕಾರಾ ಆಗಮನದವರೆಗಿನ ಅನೇಕ ಭಾವನಾತ್ಮಕ ಕ್ಷಣಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ರಾಮ್ ಚರಣ್, ಉಪಾಸನಾ ಮತ್ತು ಅವರ ಕುಟುಂಬ ಸದಸ್ಯರನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ: ಹಾಟ್ ಲುಕ್‌ ನಲ್ಲಿ ಕಿರುತೆರೆ ನಟಿ ಜ್ಯೋತಿ ರೈ : ಫೋಟೋಸ್‌ ನೋಡಿ ಶಾಕ್‌ ಆಗ್ತೀರಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News