Weekend With Ramesh 5: ಈ ದಿನದಿಂದ 'ವೀಕೆಂಡ್ ವಿಥ್ ರಮೇಶ್‌ ಸೀಸನ್ 5' ಶೋ ಶುರು!!

Weekend With Ramesh 5: ಬಹುನಿರೀಕ್ಷಿತ ಕನ್ನಡದ ಸಾಧಕರನ್ನು ಕೊಂಡಾಡುವ ಏಕೈಕ ಟಿವಿ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್‌. ಹಲವು ಸಾಧಕರನ್ನು ಅರಸಿ ಆರಿಸಿ ತಂದು ಸಾಮಾನ್ಯ ವ್ಯಕ್ತಿ ಸಾಧಕನಾದ ಕತೆಯನ್ನು ಜನರಿಗೆ ಹೇಳುವ ಟಿವಿ ಶೋ. ಜೀವನದ ಬಂಡಿ ಸಾಗಿಸುತ್ತ ಬೆಟ್ಟದಂತಹ ಸಾಧನೆ ಶಿಖರವೇರುವ ಕನಸು ಹೊತ್ತ ಅದೆಷ್ಟೋ ಜನರಿಗೆ ಈ ಶೋ ಸ್ಫೂರ್ತಿ ನೀಡುತ್ತದೆ. 

Written by - Nandish A.Huded | Edited by - Chetana Devarmani | Last Updated : Mar 16, 2023, 02:24 PM IST
  • ಕನ್ನಡದ ಸಾಧಕರನ್ನು ಕೊಂಡಾಡುವ ಏಕೈಕ ಟಿವಿ ರಿಯಾಲಿಟಿ ಶೋ
  • ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಗಾಗಿ ಕಾತುರದಿಂದ ಕಾಯುತ್ತಿರುವ ಜನ
  • ಈ ದಿನದಿಂದ 'ವೀಕೆಂಡ್ ವಿಥ್ ರಮೇಶ್‌ ಸೀಸನ್ 5' ಶೋ ಶುರು!!
Weekend With Ramesh 5: ಈ ದಿನದಿಂದ 'ವೀಕೆಂಡ್ ವಿಥ್ ರಮೇಶ್‌ ಸೀಸನ್ 5' ಶೋ ಶುರು!! title=
Weekend With Ramesh 5

Weekend With Ramesh 5: ಬಹುನಿರೀಕ್ಷಿತ ಕನ್ನಡದ ಸಾಧಕರನ್ನು ಕೊಂಡಾಡುವ ಏಕೈಕ ಟಿವಿ ರಿಯಾಲಿಟಿ ಶೋ Weekend with Ramesh. ಹಲವು ಸಾಧಕರನ್ನು ಅರಸಿ ಆರಿಸಿ ತಂದು ಸಾಮಾನ್ಯ ವ್ಯಕ್ತಿ ಸಾಧಕನಾದ ಕತೆಯನ್ನು ಜನರಿಗೆ ಹೇಳುವ ಟಿವಿ ಶೋ. ಜೀವನದ ಬಂಡಿ ಸಾಗಿಸುತ್ತ ಬೆಟ್ಟದಂತಹ ಸಾಧನೆ ಶಿಖರವೇರುವ ಕನಸು ಹೊತ್ತ ಅದೆಷ್ಟೋ ಜನರಿಗೆ ಈ ಶೋ ಸ್ಫೂರ್ತಿ ನೀಡುತ್ತದೆ. ಸಾಧನೆಯ ಹಾದಿ ಎಂದಿಗೂ ಸುಲಭದ್ದಲ್ಲ, ಅಲ್ಲಿ ಏರಿಳಿತಗಳು, ಕಾಲೆಳವ ಜನ, ಕುಹುಕು ಮಾತು, ಹೀಗೆ ಕಷ್ಟಗಳ ಸರಮಾಲೆಯನ್ನು ದಾಟಿ ಸಾಗಬೇಕು. ಯಾರು ಯಾವುದಕ್ಕೂ ಬಗ್ಗದೆ, ಜಗ್ಗದೇ, ಕುಗ್ಗದೆ ತಮ್ಮ ಕೆಲಸ ನಂಬಿ ದುಡಿಯುತ್ತಾರೋ ಅವರೇ ಸಾಧಕರಾಗುತ್ತಾರೆ. ಸಾಧನೆ ಹಾದಿಯಲ್ಲಿ ಎಲ್ಲವನ್ನೂ ಎದುರಿಸಿ ಇಂದು ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರ ಕತೆ ಹೇಳಲು ಇದೀಗ ಮತ್ತೆ ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ನಿಮ್ಮ ಮುಂದೆ ಬರುತ್ತಿದೆ. 

ಇದನ್ನೂ ಓದಿ:  Kabzaa OTT Rights : ದಾಖಲೆಯ ಮೊತ್ತಕ್ಕೆ ʻಕಬ್ಜʼ OTT ಹಕ್ಕುಗಳ ಮಾರಾಟ!

ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಬರಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಎಂದಿನಿಂದ ಈ ಶೋ ಪ್ರಸಾರವಾಗಲಿದೆ ಎಂದು ಎಲ್ಲರೂ ಕಾದುಕುಳಿತಿದ್ದರು. ಈ ಶೋನ ಪ್ರಮುಖ ಆಕರ್ಷಣೆ ಕೆಂಪು ಬಣ್ಣದ ಕುರ್ಚಿ. ಇದು ಸಾಧಕರ ಕುರ್ಚಿ ಅಂತಲೇ ಕರೆಯಬಹುದು. ಸತತ 4 ಸೀಸನ್‌ಗಳಲ್ಲೂ ಹಲವು ಮಹಾನ್ ಸಾಧಕರು ಆ ಕುರ್ಚಿ ಮೇಲೆ ಕುಳಿತು ತಮ್ಮ ಯಶೋಗಾಥೆಯನ್ನು ಹೇಳಿದ್ದಾರೆ. ತಮ್ಮ ಜೀವನದ ಸವಿ - ಕಹಿ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಅದೇ ರೀತಿ ಈ ಬಾರಿಯೂ ಮಹಾನ್‌ ಸಾಧಕರ ಜೀವನದ ಸಾಧನೆಯ ಕತೆ ಕೇಳುವ ಸೌಭಾಗ್ಯ ಸಿಗಲಿದೆ.

 

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

 

ಈ ಬಗ್ಗೆ ಜನರಿಗೆ ತಿಳಿಸಲು ವೇದಿಕೆ ಸಜ್ಜಾಗಿದ್ದು, ಅದರ ಕುರಿತಾದ ಕೆಲವೊಂದು ಪ್ರೋಮೋಗಳನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಪ್ರಸಾರದ ದಿನಾಂಕವನ್ನು ತಿಳಿಸಿರಲಿಲ್ಲ. ಎಲ್ಲರೂ ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಪ್ರಸಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗ ಕೊನೆಗೂ ವೀಕೆಂಡ್ with ರಮೇಶ್ ಸೀಸನ್ 5ರ ಪ್ರಸಾರದ ದಿನಾಂಕ ಮತ್ತು ಸಮಯ ರಿವೀಲ್‌ ಆಗಿದೆ. ಅಧಿಕೃತ ಮೂಲಗಳ ಪ್ರಕಾರ, ಇದೇ ಮಾರ್ಚ್ 25 ರಿಂದ ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಇದನ್ನೂ ಓದಿ:  ʼವಿಕಿಪೀಡಿಯಾʼವನ್ನು ಸಂಪೂರ್ಣವಾಗಿ ʼಎಡಪಂಥೀಯರುʼ ಹೈಜಾಕ್‌ ಮಾಡಿದ್ದಾರೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News