ನವದೆಹಲಿ: ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪರಸ್ಪರ ಡೇಟಿಂಗ್ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರು ಇನ್ನು ಮದುವೆಯಂತೂ ಆಗಿಯೇ ಇಲ್ಲ. ಆದರೆ ಈಗ ವೈರಲ್ ಫೋಟೋದಲ್ಲಿ ಮದುವೆ ಧಿರಿಸಿನಲ್ಲಿ ಮಿಂಚುತ್ತಿದ್ದಾರೆ.
ಈ ಪೋಟೋ ವೈರಲ್ ಆದ ನಂತರ ಅಭಿಮಾನಿಗಳ ಕುತೂಹಲ ತಾರಕ್ಕೇರಿದೆ. ಈ ಚಿತ್ರದಲ್ಲಿ ರಣಬೀರ್ ಮತ್ತು ಆಲಿಯಾ ಭಾರತೀಯ ವರ ಮತ್ತು ವಧುವಿನಂತೆ ಕಂಗೊಳಿಸುತ್ತಿರುವುದನ್ನು ಕಾಣಬಹುದು. ಆದರೆ ವಾಸ್ತವ ಏನೆಂದರೆ ಅವರು ಇನ್ನೂ ಮದುವೆಯಾಗಿಲ್ಲ. ಈ ವೈರಲ್ ಆಗಿರುವ ಫೋಟೋವನ್ನು ಅದ್ಬುತವಾಗಿ ಫೋಟೋ ಶಾಪ್ ಮಾಡಿರುವುದರಿಂದ ಈಗ ಹಲವರು ಗೊಂದಲಕ್ಕೆ ಒಳಗಾಗಿದ್ದಾರೆ.
ರಣಬೀರ್ ಕಿ ದುಲ್ಹಾನ್ ಶೀರ್ಷಿಕೆಯೊಂದಿಗೆ ಅಭಿಮಾನಿಗಳು ಫೋಟೋ ಶಾಪ್ ಮಾಡಿರುವ ಈ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಸಾಕಷ್ಟು ಕಂಗೊಳಿಸುತ್ತಿದೆ. ಮೂಲಗಳು ಹೇಳುವಂತೆ ಈ ಜೋಡಿಗಳು 2020 ರಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಅಭಿಮಾನಿಗಳು ಸಿದ್ದಪಡಿಸಿರುವ ಚಿತ್ರದಂತೆ ಆದಷ್ಟು ಬೇಗ ಜೋಡಿಗಳ ಮದುವೆಯಾಗಲಿ ಎಂದು ಆಶಿಸೋಣ. ಸದ್ಯ ಈಗ ಅವರು ಬ್ರಹಾಸ್ತ್ರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.