ಮಗುವಿನ ಹುಡುಕಾಟದಲ್ಲಿದ್ದಾರೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ : ಯಾಕೆ ಗೊತ್ತಾ..?

ಟಾಲಿವುಡ್‌ ಹಿಟ್‌ ಸಿನಿಮಾ ʼಪುಷ್ಪʼದ ಸ್ವಾಮಿ.. ಸ್ವಾಮಿ.. ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದ ಹಾಡು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಸ್ವಾಮಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

Written by - Krishna N K | Last Updated : Sep 14, 2022, 03:34 PM IST
  • ಪುಷ್ಪಾ ಸ್ವಾಮಿ.. ಸ್ವಾಮಿ.. ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದ ಹಾಡು
  • ಸ್ವಾಮಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು
  • ಸ್ವಾಮಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು
ಮಗುವಿನ ಹುಡುಕಾಟದಲ್ಲಿದ್ದಾರೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ : ಯಾಕೆ ಗೊತ್ತಾ..? title=

ಬೆಂಗಳೂರು: ಟಾಲಿವುಡ್‌ ಹಿಟ್‌ ಸಿನಿಮಾ ʼಪುಷ್ಪʼದ ಸ್ವಾಮಿ.. ಸ್ವಾಮಿ.. ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದ ಹಾಡು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಸ್ವಾಮಿ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಸದ್ಯ ಮಗುವೊಂದು ಸ್ವಾಮಿ ಹಾಡಿಗೆ ಸಖತ್‌ ಡ್ಯಾನ್ಸ್‌ ಮಾಡಿದ್ದು, ರಶ್ಮಿಕಾ ಮಂದಣ್ಣ ಮೆಚ್ಚುಗೆಗೆ ಕಾರಣವಾಗಿದೆ.

ಶಾಲಾ ಕಾರ್ಯಕ್ರವೊಂದರಲ್ಲಿ ಸ್ವಾಮಿ ಹಾಡಿಗೆ ಮಗುವೊಂದು ಕ್ಯೂಟ್‌ ಆಗಿ ಹೆಜ್ಜೆ ಹಾಕಿದೆ. ಈ ವೈರಲ್‌ ವಿಡಿಯೋ ನೋಡಿರುವ ರಶ್ಮಿಕಾ, ʼನಾನು ಈ ಮುದ್ದು ಮಗವನ್ನ ಭೇಟಿಯಾಗ್ಬೇಕು.. ಹೇಗೆ ಸಾಧ್ಯʼ ಅಂತ ಅಭಿಮಾನಿಗಳನ್ನ ಕೇಳಿದ್ದಾರೆ. ಸದ್ಯ ರಶ್ಮಿಕಾ ಅಭಿಮಾನಿಗಳು ಮಗುವಿನ ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ: Viral Video : ತರಗತಿಯಲ್ಲಿ ಕುಳಿತುಕೊಂಡು ಈ ಹುಡುಗ ಹುಡುಗಿ ಮಾಡಿದ ಕೆಲಸಕ್ಕೆ ಸಹಪಾಠಿ ತಬ್ಬಿಬ್ಬು

ಕಿರಿಕ್‌ ಪಾರ್ಟಿಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ, ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಪುಷ್ಪಾ ಸಿನಿಮಾ ರಶ್ಮಿಕಾರನ್ನು ನೆಟ್ಸ್‌ ಲೆವಲ್‌ ತೆಗೆದುಕೊಂಡು ಹೋಗಿತ್ತು ಅಂದ್ರೆ ತಪ್ಪಾಗಲ್ಲ. ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು ಸ್ವಾಮಿ ಸ್ವಾಮಿ ಜಪ ಶುರುವಾಗುತ್ತಿತ್ತು. ಆ ಲೆವಲ್‌ಗೆ ಹಾಡು ಹಿಟ್‌ ಆಗಿತ್ತು.

ಸದ್ಯ ರಶ್ಮಿಕಾ ‘ಗುಡ್​​ಬೈ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅಲ್ಲದೆ, ದಳಪತಿ ವಿಜಯ್​ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಮಂದಣ್ಣ ಅವರ ಆಸೆ ಆಗಿತ್ತು. ಅದು ‘ವಾರಿಸು’ ಚಿತ್ರದ ಮೂಲಕ ನೆರವೇರುತ್ತಿದೆ. ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಶೂಟಿಂಗ್ ಅಕ್ಟೋಬರ್​ ತಿಂಗಳಲ್ಲಿ ಮುಗಿಯುವ ನಿರೀಕ್ಷೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News