ಸೀಕ್ರೆಟ್ ಮದುವೆ ಬಳಿಕ ತಮಿಳಿನ ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ: ಶ್ರೀವಲ್ಲಿಗೆ ಭಾರೀ ಡಿಮ್ಯಾಂಡ್!

Chiyaan Vikram and Rashmika Mandanna: ವಿಕ್ರಮ್ ತಮಿಳು ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು. ಇವರು ನಾಯಕನಾಗಿ ನಟಿಸುತ್ತಿರುವ ‘ತಂಗಳನ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.

Written by - Bhavishya Shetty | Last Updated : Aug 7, 2023, 11:37 AM IST
    • ವಿಕ್ರಮ್ ತಮಿಳು ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು
    • ಇವರು ನಾಯಕನಾಗಿ ನಟಿಸುತ್ತಿರುವ ‘ತಂಗಳನ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
    • ಈ ಚಿತ್ರವನ್ನು ಪಾ.ರಂಜಿತ್ ನಿರ್ದೇಶಿಸಿದ್ದಾರೆ. ಇದರಲ್ಲಿ ಮಾಳವಿಕಾ ಮೋಹನನ್, ಪಶುಪತಿ ಮುಂತಾದವರು ನಟಿಸಿದ್ದಾರೆ.
ಸೀಕ್ರೆಟ್ ಮದುವೆ ಬಳಿಕ ತಮಿಳಿನ ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ: ಶ್ರೀವಲ್ಲಿಗೆ ಭಾರೀ ಡಿಮ್ಯಾಂಡ್! title=
Rashmika Mandanna

Rashmika Mandanna Movies: ತಮಿಳು ಚಿತ್ರರಂಗದ ಜನಪ್ರಿಯ ನಟ ವಿಕ್ರಮ್ ಮಲಯಾಳಂ ನಿರ್ದೇಶಕರೊಬ್ಬರ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಕೂಡ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ನಾಯಕಿಯಾಗಿ ಖ್ಯಾತ ನಟಿಯೊಬ್ಬರು ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಇದನ್ನೂ ಓದಿ: MS Dhoni Daughter: ಧೋನಿ ಮಗಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ..?

ವಿಕ್ರಮ್ ತಮಿಳು ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು. ಇವರು ನಾಯಕನಾಗಿ ನಟಿಸುತ್ತಿರುವ ‘ತಂಗಳನ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಚಿತ್ರವನ್ನು ಪಾ.ರಂಜಿತ್ ನಿರ್ದೇಶಿಸಿದ್ದಾರೆ. ಇದರಲ್ಲಿ ಮಾಳವಿಕಾ ಮೋಹನನ್, ಪಶುಪತಿ ಮುಂತಾದವರು ನಟಿಸಿದ್ದಾರೆ. ತಂಗಳನ್ ಕೆಲಸ ಮುಂದುವರೆದಿದ್ದು, ವಿಕ್ರಮ್ ಅವರ ಮುಂದಿನ ಚಿತ್ರದ ಮಾಹಿತಿ ಹೊರಬಿದ್ದಿದೆ.

ಮಲಯಾಳಂ ನಿರ್ದೇಶಕರೊಂದಿಗೆ ವಿಕ್ರಮ್:

ಜೂಡ್ ಆಂಟೋನಿ ಜೋಸೆಫ್ ಮಲಯಾಳಂ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಮಲಯಾಳಂ ಚಲನಚಿತ್ರಗಳಾದ ಓಂ ಶಾಂತಿ ಓಷಿಯಾನಾ, 2018 ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಹ-ನಿರ್ದೇಶಕ ಮತ್ತು ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಇವರು ವಿಕ್ರಮ್ ಜೊತೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ವರದಿಗಳಿವೆ. ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ವಿಜಯ್ ಸೇತುಪತಿ ಜೊತೆ ವಿಕ್ರಮ್!

ವಿಜಯ್ ಸೇತುಪತಿ ಸದ್ಯಕ್ಕೆ ತಮಿಳಿನ ಜೊತೆಗೆ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಖಳನಟನಾಗಿ ಅವತಾರವೆತ್ತಿದ್ದ ಸೇತುಪತಿ, ಇದೀಗ ನಿರಂತರವಾಗಿ ಖಳನಟನ ಪಾತ್ರದಲ್ಲೇ ಮುಂದುವರೆಯುತ್ತಿದ್ದಾರೆ. ಸದ್ಯ ಮಲಯಾಳಂ ನಿರ್ದೇಶಕ ಜೂಡ್ ಆಂಟೋನಿ ಜೋಸೆಫ್ ಅವರ ಚಿತ್ರದಲ್ಲಿ ವಿಕ್ರಮ್ ನಟಿಸಲಿದ್ದಾರೆ ಎಂಬ ವರದಿಗಳಿದ್ದು, ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: IND vs WI: ಈ ಆಟಗಾರನೇ ಭಾರತದ ಸೋಲಿಗೆ ಕಾರಣ: ಸಾರ್ವಜನಿಕ ಸ್ಥಳದಲ್ಲೇ ನಿಂದಿಸಿದ ಹಾರ್ದಿಕ್ ಪಾಂಡ್ಯ

ಈ ನಟಿಯೇ ನಾಯಕಿ..?

ತೆಲುಗು ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಸುಲ್ತಾನ್ ಮೂಲಕ. ಆ ನಂತರ ವಿಜಯ್ ಜೊತೆ ವಾರಿಸು ಚಿತ್ರದಲ್ಲಿ ನಟಿಸಿದ್ದರು. ರಶ್ಮಿಕಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ರಶ್ಮಿಕಾ ವಿಕ್ರಮ್ ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ಸೇರಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News