ರಶ್ಮಿಕಾ ಮಂದಣ್ಣಾಗೆ 24ನೇ ಹುಟ್ಟುಹಬ್ಬದ ಸಂಭ್ರಮ.. ಕನ್ನಡದ ಬೆಡಗಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಕನ್ನಡ ಸಿನಿಮಾ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಏಪ್ರಿಲ್ 24 ರಂದು ತಮ್ಮ 24 ನೇ ಹುಟ್ಟುಹಬ್ಬವನ್ನುಆಚರಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಇವತ್ತು ಅವರಿಗೆ ಅಭಿಮಾನಿಗಳು ಶುಭ ಕೋರಿದ್ದರಿಂದಾಗಿ ಇಂದು ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ  ಕಾಣಿಸಿಕೊಂಡಿದ್ದರು.

Last Updated : Apr 5, 2020, 03:29 PM IST
ರಶ್ಮಿಕಾ ಮಂದಣ್ಣಾಗೆ 24ನೇ ಹುಟ್ಟುಹಬ್ಬದ ಸಂಭ್ರಮ.. ಕನ್ನಡದ ಬೆಡಗಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ title=
Photo Courtsey : Twitter

ಬೆಂಗಳೂರು: ಕನ್ನಡ ಸಿನಿಮಾ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಏಪ್ರಿಲ್ 24 ರಂದು ತಮ್ಮ 24 ನೇ ಹುಟ್ಟುಹಬ್ಬವನ್ನುಆಚರಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಇವತ್ತು ಅವರಿಗೆ ಅಭಿಮಾನಿಗಳು ಶುಭ ಕೋರಿದ್ದರಿಂದಾಗಿ ಇಂದು ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ  ಕಾಣಿಸಿಕೊಂಡಿದ್ದರು.

ರಶ್ಮಿಕಾ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿನ ನಟನೆಗಾಗಿ ಮೆಚ್ಚುಗೆ ಗಳಿಸಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ 2016 ರಲ್ಲಿ ಅವರು ನಟನೆಗೆ ಪಾದಾರ್ಪಣೆ ಮಾಡಿದರು.ತಮ್ಮ ಕನ್ನಡ ಚೊಚ್ಚಲ ಚಿತ್ರದಿಂದ ಹೃದಯ ಗೆದ್ದ ನಂತರ ಮಂದಣ್ಣ ತೆಲುಗು ಚಿತ್ರರಂಗದಲ್ಲಿ 'ಚಲೋ' ಚಿತ್ರದ ಮೂಲಕ ತಮ್ಮ ಛಾಪು ಮೂಡಿಸಿದರು. 

ರಶ್ಮಿಕಾ ಮಂದಣ್ಣ ಇತ್ತೀಚೆಗೆ 'ಸರಿಲೆರು ನೀಕೆವ್ವರ' ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕಾಣಿಸಿಕೊಂಡರು. ವೆಂಕಿ ಕುಡುಮುಲಾ ನಿರ್ದೇಶನದ ರೋಮ್-ಕಾಮ್ 'ಭೀಷ್ಮಾ' ಚಿತ್ರದಲ್ಲಿ ನಿತಿನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.ತೆರೆಯ ಮೇಲೆ ತಮ್ಮ ನಟನೆಯಿಂದಲೇ ಅಭಿಮಾನಿಗಳನ್ನು ವಿಸ್ಮಯಗೊಳಿಸುವ ನಟಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ 5.6 ಮೀ ಫಾಲೋವರ್ಸ್‌ಗಳಿದ್ದಾರೆ.

Trending News