Rashmika Mandanna: ಸಿನಿಮಾ ಸೆಟ್ ನಲ್ಲಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣರ ಮುದ್ದಿನ ಶ್ವಾನ..!

ರಶ್ಮಿಕಾ ಮಂದಣ್ಣ ತಮ್ಮ ಪ್ರಾಣಿಪ್ರೀತಿಯನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ.

Written by - Puttaraj K Alur | Last Updated : Sep 20, 2021, 01:09 PM IST
  • ಬಿಡುವಿನ ಸಮಯದಲ್ಲಿ ಪ್ರೀತಿಯ ಶ್ವಾನ ಔರಾದೊಂದಿಗೆ ಕಾಲ ಕಳೆಯುವ ನಟಿ ರಶ್ಮಿಕಾ ಮಂದಣ್ಣ
  • ಶೂಟಿಂಗ್ ಸೆಟ್ ನಲ್ಲಿ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿರುವ ಔರಾ ಶ್ವಾನ
  • ಮುದ್ದಿನ ಶ್ವಾನ ಔರಾದೊಂದಿಗೆ ತಮ್ಮ ದಿನಚರಿ ಹೇಗೆ ಆರಂಭವಾಗುತ್ತದೆ ಎಂಬುದನ್ನು ಹಂಚಿಕೊಂಡಿರುವ ನಟಿ
Rashmika Mandanna: ಸಿನಿಮಾ ಸೆಟ್ ನಲ್ಲಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣರ ಮುದ್ದಿನ ಶ್ವಾನ..! title=
ಔರಾದೊಂದಿಗೆ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು: ಖ್ಯಾತ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ತಮ್ಮ ಹೊಸ ಮುದ್ದಿನ ಶ್ವಾನ ‘ಔರಾ’ಳ ಜೊತೆಗೆ ಬಿಡುವಿನ ಸಮಯದಲ್ಲಿ ಕಾಲ ಕಳೆಯುತ್ತಾರೆ. ಅವರು ತಮ್ಮ ಪ್ರಾಣಿಪ್ರೀತಿಯನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ಔರಾ ಶ್ವಾನ ಹೇಗೆ ತನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಇತ್ತೀಚೆಗೆ ನಟಿ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ಮುದ್ದಿನ ಔರಾದೊಂದಿಗೆ ದಿನಚರಿ ಹೇಗೆ ಆರಂಭವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.

‘ಔರಾಗೆ ಶೂಟಿಂಗ್ ಸೆಟ್ ಅಂದರೆ ತುಂಬಾ ಇಷ್ಟ. ನನ್ನ ಸಿನಿಮಾದ ಶೂಟಿಂಗ್ ವೇಳೆ ಔರಾ(Aura) ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ. ಹೀಗಾಗಿ ನಾನು ಯಾವಾಗಲೂ ನನ್ನ ಸಿನಿಮಾ ಸೆಟ್ ಗೆ ಔರಾಳನ್ನು ಕರೆದುಕೊಂಡು ಹೋಗುತ್ತಿರುತ್ತೇನೆ. ಔರಾ ಕೂಡ ಸಿನಿಮಾ ಸೆಟ್ ನಲ್ಲಿ ಹೆಚ್ಚುಹೊತ್ತು ಕಾಲ ಕಳೆಯಲು ಇಷ್ಟಪಡುತ್ತದೆ. ನನ್ನ ಜೊತೆಗೆ ಯಾವಾಗಲೂ ಇರಲು ಬಯಸುತ್ತದೆ. ಅದರೊಂದಿಗೆ ಕಾಲ ಕಳೆಯುವುದೆಂದರೆ ನನಗೆ ತುಂಬಾ ಇಷ್ಟ’ ಅಂತಾ ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ: Viral Video: ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಯ ಕೆನ್ನೆ ಕಚ್ಚಿದ ಕನ್ನಡ ನಟಿ..!

‘ಶೂಟಿಂಗ್ ಸೆಟ್ ನಲ್ಲಿರುವ ಎಲ್ಲರೂ ಔರಾ(Aura)ಳನ್ನು ಪ್ರೀತಿಸುತ್ತಾರೆ. ಈ ಶ್ವಾನದ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ತೋರಿಸುತ್ತಾರೆ.  ಯಾವಾಗಲಾದರೂ ನಾನು ಔರಾಳನ್ನು ಬಿಟ್ಟು ಶೂಟಿಂಗ್ ಸೆಟ್ ಗೆ ಬಂದರೆ ಪ್ರತಿಯೊಬ್ಬರೂ ಈ ಬಗ್ಗೆ ಪ್ರಶ್ನಿಸುತ್ತಾರೆ. ಏನಾಯಿತು, ಔರಾ ಏಕೆ ಬಂದಿಲ್ಲ ಅಂತಾ ಆಶ್ಚರ್ಯದಿಂದ ಕೇಳುತ್ತಾರೆ. ಹೀಗಾಗಿ ಔರಾಳನ್ನು ನಾನು ಯಾವಾಗಲೂ ಶೂಟಿಂಗ್ ಸೆಟ್ ಗೆ ಕರೆದುಕೊಂಡು ಹೋಗಲು ಇಷ್ಟಪಡುತ್ತೇನೆ’ ಅಂತಾ ನಟಿ ಹೇಳಿಕೊಂಡಿದ್ದಾರೆ.   

‘ಔರಾ ಶೂಟಿಂಗ್ ಸೆಟ್ ಮತ್ತು ಅಲ್ಲಿನ ದಿನಚರಿಗೆ ಒಗ್ಗಿಕೊಂಡಿದೆ. ಅದು ಈಗ ನನ್ನ ಮನೆಯ ಸದಸ್ಯನಾಗಿ ನನಗೆ ಹೆಚ್ಚಿನ ಖುಷಿ ನೀಡುತ್ತಿದೆ. ಔರಾಳನ್ನು ಒಂದು ದಿನವೂ ನನಗೆ ಬಿಟ್ಟಿರಲು ಸಾಧ್ಯವಿಲ್ಲ. ಔರಾಳ ಜೊತೆ ಕಾಲ ಕಳೆಯುವುದೆಂದರೆ ನನಗೆ ತುಂಬಾ ಇಷ್ಟ’ಎಂದು ರಶ್ಮಿಕಾ ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss OTT: ಬಿಗ್ ಬಾಸ್ ಒಟಿಟಿ' ವಿಜೇತರಾಗಿ ಹೊರ ಹೊಮ್ಮಿದ ದಿವ್ಯಾ ಅಗರ್‌ವಾಲ್

ರಶ್ಮಿಕಾ ಪ್ರಸ್ತುತ ಹೈದರಾಬಾದ್ ಮತ್ತು ಮುಂಬೈನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್ ಗಳಿವೆ. ತೆಲುಗು ನಟ ‘ಸ್ಟೈಲಿಶ್ ಸ್ಟಾರ್’ ಅಲ್ಲು ಅರ್ಜುನ್(Allu Arjun) ನಟನೆಯ ಬಹುನಿರೀಕ್ಷಿತ ‘ಪುಷ್ಪ’ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ತಮ್ಮ ಬಾಲಿವುಡ್ ನ ಚೊಚ್ಚಲ ಚಿತ್ರ ‘ಮಿಷನ್ ಮಜ್ನು’ದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ನಟಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರೊಂದಿಗೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಹೊಸ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News