Bigg Boss OTT: ಬಿಗ್ ಬಾಸ್ ಒಟಿಟಿ' ವಿಜೇತರಾಗಿ ಹೊರ ಹೊಮ್ಮಿದ ದಿವ್ಯಾ ಅಗರ್‌ವಾಲ್

ರಿಯಾಲಿಟಿ ಷೋ ತಾರೆ ದಿವ್ಯಾ ಅಗರ್‌ವಾಲ್ ಅವರನ್ನು 'ಬಿಗ್ ಬಾಸ್ ಒಟಿಟಿ' ವಿಜೇತರಾಗಿ ಘೋಷಿಸಲಾಯಿತು.

Written by - Zee Kannada News Desk | Last Updated : Sep 19, 2021, 03:18 AM IST
  • ರಿಯಾಲಿಟಿ ಷೋ ತಾರೆ ದಿವ್ಯಾ ಅಗರ್‌ವಾಲ್ ಅವರನ್ನು 'ಬಿಗ್ ಬಾಸ್ ಒಟಿಟಿ' ವಿಜೇತರಾಗಿ ಘೋಷಿಸಲಾಯಿತು.
  • ದಿವ್ಯಾ ಅಗರ್ವಾಲ್ ಹೆಸರನ್ನು ನಟಿ ಮತ್ತು 'ಬಿಗ್ ಬಾಸ್ 7' ವಿಜೇತೆ ಗೌಹರ್ ಖಾನ್ ಘೋಷಿಸಿದರು,ಇದೆ ವೇಳೆ ಕರಣ್ ಜೋಹರ್ 'ಮಹಿಳಾ ಶಕ್ತಿ ಜಿಂದಾಬಾದ್" ಎಂದು ಘೋಷಿಸಿದರು.
  • ಇದಕ್ಕೂ ಮೊದಲು ದಿವ್ಯಾ ಅಗರ್‌ವಾಲ್ ಅವರು 'ಎಟಿವಿ ಸ್ಪ್ಲಿಟ್ಸ್‌ವಿಲ್ಲಾ 10' ನಲ್ಲಿ ರನ್ನರ್ ಅಪ್ ಆದ ನಂತರ 'ಏಸ್ ಆಫ್ ಸ್ಪೇಸ್ 1' ರಿಯಾಲಿಟಿ ಶೋ ಗೆದ್ದಿದ್ದರು.
Bigg Boss OTT: ಬಿಗ್ ಬಾಸ್ ಒಟಿಟಿ' ವಿಜೇತರಾಗಿ ಹೊರ ಹೊಮ್ಮಿದ ದಿವ್ಯಾ ಅಗರ್‌ವಾಲ್ title=

ನವದೆಹಲಿ: ರಿಯಾಲಿಟಿ ಷೋ ತಾರೆ ದಿವ್ಯಾ ಅಗರ್‌ವಾಲ್ ಶನಿವಾರದಂದು 'ಬಿಗ್ ಬಾಸ್ ಒಟಿಟಿ' ವಿಜೇತರಾಗಿ ಹೊರ ಹೊಮ್ಮಿದ್ದಾರೆ.ಅವರ ಹೆಸರನ್ನು ನಟಿ ಮತ್ತು 'ಬಿಗ್ ಬಾಸ್ 7' ವಿಜೇತೆ ಗೌಹರ್ ಖಾನ್ ಘೋಷಿಸಿದರು.

ಇದಕ್ಕೂ ಮೊದಲು ದಿವ್ಯಾ ಅಗರ್‌ವಾಲ್ ಅವರು 'ಎಟಿವಿ ಸ್ಪ್ಲಿಟ್ಸ್‌ವಿಲ್ಲಾ 10' ನಲ್ಲಿ ರನ್ನರ್ ಅಪ್ ಆದ ನಂತರ 'ಏಸ್ ಆಫ್ ಸ್ಪೇಸ್ 1' ರಿಯಾಲಿಟಿ ಶೋ ಗೆದ್ದಿದ್ದರು.

ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline

ಈಗ ದಿವ್ಯಾ ಅಗರ್‌ವಾಲ್ ಅವರಿಗೆ 'ಬಿಗ್ ಬಾಸ್' ಟ್ರೋಫಿಯ ಜೊತೆಗೆ 25 ಲಕ್ಷ ರೂ.ಗಳ ಚೆಕ್ ಲಭಿಸಿದೆ, ಮತ್ತು ಇತರ ನಾಲ್ಕು ಫೈನಲಿಸ್ಟ್‌ಗಳೊಂದಿಗೆ ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್' ನಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ, ಇದು ಅಕ್ಟೋಬರ್‌ನಲ್ಲಿ ಟೆಲಿವಿಷನ್ ಚಾನೆಲ್‌ನಲ್ಲಿ ಪ್ರಾರಂಭವಾಗುತ್ತದೆ.

ಇದನ್ನೂ ಓದಿ-GOOD NEWS! IT ಕಂಪನಿಗಳಲ್ಲಿ ಬಂಪರ್ ಉದ್ಯೋಗಾವಕಾಶ - ಒಳ್ಳೆಯ ವೇತನ ಮತ್ತು ಬೋನಸ್!

ಆರು ವಾರಗಳ ಕಾಲ ನಡೆದ 'ಬಿಗ್ ಬಾಸ್ ಒಟಿಟಿ'ಯ ಆರಂಭದಿಂದಲೇ, ದಿವ್ಯಾ ಅಗರ್ವಾಲ್ ಸದ್ದು ಮಾಡುತ್ತಲೇ ಇದ್ದಳು, ಶಮಿತಾ ಶೆಟ್ಟಿಯೊಂದಿಗಿನ ಅವಳ ಜಗಳದಿಂದಾಗಿ ಎಲ್ಲರ ಗಮನ ಸೆಳೆದಿದ್ದಳು.ಇನ್ನೊಂದೆಡೆಗೆ  ಶಮಿತಾ ಶೆಟ್ಟಿ ಎರಡನೇ ರನ್ನರ್ ಅಪ್,ಆದರೆ  ಮೊದಲನೆಯವರು ನಿಶಾಂತ್ ಭಟ್ ರಾಗಿದ್ದಾರೆ.ಅವರು ರಿಯಾಲಿಟಿ ಶೋಗಳಾದ 'ಸೂಪರ್ ಡ್ಯಾನ್ಸರ್ 3', 'ಜಲಕ್ ದಿಖ್ಲಾಜಾ' ಮತ್ತು 'ನಾಚ್ ಬಲಿಯೆ' ಜೊತೆ ತೊಡಗಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News