Ravi Basrur: ಹುಟ್ಟೂರನ್ನೇ ಹೆಡ್ ಆಫೀಸ್ ಮಾಡಿದ ಸಾಧಕ ರವಿ ಬಸ್ರೂರು..!

Ravi Basrur: ಬಾಲಿವುಡ್‌ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್‌ ಅವರಂತಹ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ ರವಿ ಬಸ್ರೂರು. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ.

Written by - Puttaraj K Alur | Last Updated : Sep 3, 2024, 09:31 PM IST
  • ತಮಗೆ ಜನ್ಮಕೊಟ್ಟ ಲ್ಯಾಂಡನ್ನೇ ಲ್ಯಾಂಡ್‌ಮಾರ್ಕ್ ಮಾಡಿದ ಸಾಧಕ
  • ಹುಟ್ಟೂರನ್ನೇ ಹೆಡ್ ಆಫೀಸ್ ಮಾಡಿದ ಸಾಧಕ ರವಿ ಬಸ್ರೂರು
  • ಬಸ್ರೂರಿನ ರವಿ ಹೆಡ್‌ ಆಫೀಸ್‌ಗೆ ಭೇಟಿ ನೀಡಿದ ಜೂನಿಯರ್‌ NTR
Ravi Basrur: ಹುಟ್ಟೂರನ್ನೇ ಹೆಡ್ ಆಫೀಸ್ ಮಾಡಿದ ಸಾಧಕ ರವಿ ಬಸ್ರೂರು..! title=
ಬಸ್ರೂರಿಗೆ ಭೇಟಿ ನೀಡಿದ ಜೂನಿಯರ್‌ NTR!

Ravi Basrur: ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಾಧನೆ‌ ಬೇರೆಲ್ಲರಿಗಿಂತ ವಿಶೇಷ ಎನಿಸಲು ಕಾರಣ ಅವರಿಗೆ ತಮ್ಮ ನೆಲ ಮತ್ತು ನೆಲೆಯ ಬಗ್ಗೆ ಇರುವ ಪ್ರೀತಿ ಕಾರಣ. ಕಾಲದ ಅಣತಿಯಂತೆ ಬದುಕು ಹೋದಲ್ಲೆಲ್ಲಾ ಹೋಗಿ ಶ್ರಮದಿಂದ ತಾವು ಬಯಸಿದಂತೆ ಬದುಕು ಕಟ್ಟಿಕೊಂಡವರು ರವಿ ಬಸ್ರೂರು. 1983ರಲ್ಲಿ ಕುಂದಾಪುರದ ಬಸ್ರೂರು ಗ್ರಾಮದಲ್ಲಿ ಜನಿಸಿದ ಇವರು 2014ರಲ್ಲಿ ತೆರೆಕಂಡ `ಉಗ್ರಂ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವದರ ಮೂಲಕ ಕನ್ಡಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 

ಬೆಂಗಳೂರಿಗೆ ಬಂದು ಬದುಕಿಗೆ ಹೊಸ ಆಯಾಮ ಕಂಡುಕೊಂಡು ಚಿತ್ರರಂಗದಲ್ಲಿ ಒಂದೊಂದೇ ಯಶಸ್ಸಿನ‌ ಮೆಟ್ಟಿಲೇರಿದ ರವಿ ಬಸ್ರೂರು ತಮ್ಮ ಹುಟ್ಟೂರನ್ನು ಮರೆಯಲಿಲ್ಲ. ಆರಂಭದಲ್ಲಿ ದಿನಗಳಲ್ಲಿ ಕುಂದಾಪ್ರ ಕನ್ನಡದ ಆಲ್ಬಂ ಸಾಂಗ್‌ಗಳನ್ನು ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರುಳಿಯವರಿಂದ ಕುಂದಾಪ್ರ ಕನ್ನಡದ ಹಾಡು ಹಾಡಿಸಿದರು. ʼಉಗ್ರಂʼ ಯಶಸ್ಸು ಚೈತನ್ಯ ತುಂಬಿತು. ನಂತರ ತಮ್ಮ ಊರ ಪ್ರತಿಭೆಗಳಿಗೆ ಅವಕಾಶ ಕೊಡಲು ವರ್ಷಕ್ಕೊಂದಾದ್ರು ಸಿನಿಮಾ ನಿರ್ಮಿಸುವ ದೃಢ ನಿರ್ಧಾರ ಮಾಡಿದರು. ಅಂತೆಯೇ ನಿರಂತರವಾಗಿ ಸಿನಿಮಾಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಪುಟಾಣಿ‌ ಮಕ್ಕಳನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು 'ಗಿರ್ಮಿಟ್' ಎಂಬ ಪ್ರಯೋಗಾತ್ಮಕ ಚಿತ್ರ ಮಾಡಿದರು. ಅದಕ್ಕೆ ರಾಕಿಂಗ್‌ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಂದ ಡಬ್ ಮಾಡಿಸಿದ್ದು ಇವರ ಕ್ರಿಯಾಶೀಲತೆಗೆ ನಿದರ್ಶನ.

ಇದನ್ನೂ ಓದಿ: ಫಸ್ಟ್‌ ಟೈಮ್‌ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್‌... ಎಂದ ಫ್ಯಾನ್ಸ್‌... ಫೊಟೋಸ್‌ ಇಲ್ಲಿವೆ..

ಭಾರತ ಮಾತ್ರವಲ್ಲೇ ಪ್ರಪಂಚದಾದ್ಯಂತ ಸದ್ದು ಮಾಡಿ, ಬಾಕ್ಸ್‌ಆಫೀಸ್‌ ಕೊಳ್ಳೆ ಹೊಡೆದ ಕೆಜಿಎಫ್, ಕೆಜಿಎಫ್ 2, ಸಲಾರ್, ಮದಗಜ ಚಿತ್ರಗಳ ಭರ್ಜರಿ ಯಶಸ್ಸಿನ ನಡುವೆ ಪರಭಾಷೆಗಳಲ್ಲಿಯು ಸಂಗೀತ ನಿರ್ದೇಶಕರಾಗಿ ಸೈ ಎನಿಸಿಕೊಂಡರು. ಬಾಲಿವುಡ್‌ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್‌ ಅವರಂತಹ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ. ಬಾಲಿವುಡ್, ಮಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನಿರ್ಮಾಪಕರು, ನಿರ್ದೇಶಕರು, ನಟರು ಕುಂದಾಪುರಕ್ಕೆ ಕಾಲಿಡುವಂತೆ ಮಾಡುತ್ತಾರೆ‌.

ಮಂಗಳವಾರ ನಟ ಜೂನಿಯರ್ NTR ಅವರು ಬಸ್ರೂರು ಗ್ರಾಮಕ್ಕೆ ಭೇಟಿ ನೀಡಿ ರವಿ ಅವರ ಸ್ಟುಡಿಯೋವನ್ನು ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು. ಒಂದು‌ ಕಾಲದಲ್ಲಿ ಕನ್ನಡದ ಬಹುತೇಕ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್, ರೆಕಾರ್ಡಿಂಗ್, ಪ್ರೋಗ್ರಾಮಿಂಗ್ ಎಲ್ಲವೂ ಚೆನ್ನೈನಲ್ಲಿ ನಡೆಯುತ್ತಿತ್ತು. ಈಗಲೂ ಆ ಡಿಪೆಂಡೆನ್ಸಿ ಪೂರ್ಣವಾಗಿ ಕಡಿಮೆಯಾಗಿಲ್ಲ. ಹೀಗಿರುವಾಗ ರವಿ ಬಸ್ರೂರು ತಮ್ಮ ಹುಟ್ಟೂರಲ್ಲೊಂದು ಸುಸಜ್ಜಿತ ಸ್ಟುಡಿಯೋ ಕಟ್ಟುವ ಮೂಲಕ ತಮಗೆ ಜನ್ಮಕೊಟ್ಟ ಲ್ಯಾಂಡನ್ನೇ ಲ್ಯಾಂಡ್‌ಮಾರ್ಕ್ ಮಾಡುತ್ತಿದ್ದಾರೆ. 

ಇದನ್ನೂ ಓದಿ: "#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್

ʼBack to roots..ʼ. ಅನ್ನೋ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಯಶಸ್ಸಿನ ರೆಂಬೆ ಕೊಂಬೆ ಎಷ್ಟೇ ಸವಿಸ್ತಾರವಾಗಿ ಬೆಳೆದರೂ ತಮಗೆ ಬದುಕು ಕೊಟ್ಟ ಮೂಲ ಬೇರನ್ನು ಇವರು ಮರೆತಿಲ್ಲ. ಹುಟ್ಟೂರಿನಲ್ಲೇ ಹೆಡ್ ಆಫೀಸ್ ಮಾಡಿದ ಇವರ ಸಾಧನೆ ಪ್ರಶಂಸನೀಯ. ಒಂದು ರಾಜ್ಯದ ಅಭಿವೃದ್ಧಿ ಅಂದ್ರೆ ಅದು ಬರೀ ರಾಜಧಾನಿಗೆ ಸೀಮಿತವಾಗಬಾರದು. ಎಲ್ಲಾ ಜಿಲ್ಲೆ, ಎಲ್ಲಾ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಬೇಕು. ರವಿ ಬಸ್ರೂರು ಅವರಂತಹ ಸಾಧಕರು ಬಹಳಷ್ಟು ಸಾಧಿಸಿದ ನಂತರವು ಮೂಲ‌ನೆಲೆಗೆ ಮರಳಿದಾಗ, ಹುಟ್ಟಿದೂರಲ್ಲಿ ಹೊಸ ಪ್ರತಿಭೆಗಳು ಅರಳಿದಾಗ ಇದು ಸಾಧ್ಯವಾಗುತ್ತೆ. ಇಂತಹ ವಿಚಾರ ಹೆಚ್ಚು ಜನರಿಗೆ ತಲುಪಬೇಕು, ಇನ್ನಷ್ಟು ಸಾಧಕರಿಗೆ ಸ್ಫೂರ್ತಿಯಾಗಬೇಕು.

👉🏻ಟಿ.ಜಿ‌. ನಂದೀಶ್, ತೀರ್ಥಹಳ್ಳಿ✍🏻

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News