ಬ್ಯಾಡ್‌ ಮ್ಯಾನರ್ಸ್ ಅಂತ ಸಖತ್ ಸೌಂಡ್ ಮಾಡುತ್ತಿದ್ದಾರೆ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್..!

Bad Manners : ಬ್ಯಾಡ್‌ ಮ್ಯಾನರ್ಸ್..ಈ ಟೈಟಲ್ ಹೊಂದಿರೋ ಸಿನಿಮಾದ  ಸದ್ದು ಜೋರಾಗಿದೆ ಅಂದ್ರೆ ತಪ್ಪಿಲ್ಲ ನೋಡಿ. ಇದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಸಿನಿಮಾ.ಇನ್ನೇನು ಕೆಲವೇ ದಿನಗಲ್ಲಿ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.ಹಲವು ವಿಶೇಷತೆಗಳಿಗೆ ಬ್ಯಾಡ್ ಮ್ಯಾನರ್ಸ್ ಸಾಕ್ಷಿಯಾಗುತ್ತಿದೆ.   

Written by - YASHODHA POOJARI | Last Updated : Mar 24, 2023, 03:10 PM IST
  • ಇದೀಗ ರಿಲೀಸ್ ಆಗಿರೋ ಸಿನಿಮಾದ ಫಸ್ಟ್ ಟೈಟಲ್ ಟ್ರ್ಯಾಕ್ ಸಖತ್ ಆಗಿದೆ.
  • ಚರಣ್ ರಾಜ್ ಸಂಗೀತ ನಿರ್ದೇಶನದ ಈ ಹಾಡಲ್ಲಿ ಅಭಿಷೇಕ್ ಅಂಬರೀಶ್ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ.
  • ಬಹು ಭಾಷೆಯಲ್ಲೂ ಮಿಂಚಿರೋ ಗಾಯಕಿ ಉಷಾ ಉತ್ತುಪ್ ಈ ಗೀತೆಗೆ ಧ್ವನಿ ಆಗಿದ್ದಾರೆ.
ಬ್ಯಾಡ್‌ ಮ್ಯಾನರ್ಸ್ ಅಂತ ಸಖತ್ ಸೌಂಡ್ ಮಾಡುತ್ತಿದ್ದಾರೆ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್..!

Abhishek Ambareesh : ಇದೀಗ ರಿಲೀಸ್ ಆಗಿರೋ ಸಿನಿಮಾದ ಫಸ್ಟ್ ಟೈಟಲ್ ಟ್ರ್ಯಾಕ್ ಸಖತ್ ಆಗಿದೆ. ಟ್ರೆಂಡಿ ಅನಿಸೋ ಈ ಗೀತೆ ಸಖತ್ ಕಿಕ್ ಕೊಡುವ ಹಾಗೇನೂ ಇದೆ. ಕಲರ್ ಫುಲ್ ಸೆಟ್​ನಲ್ಲಿ ಇಡೀ ಹಾಡು ಚಿತ್ರೀಕರಣ ಆಗಿದೆ. ಝಗಮಗಿಸೋ ಲೈಟ್‌ಗಳ ಮಧ್ಯೆ ಅಭಿಷೇಕ್ ಫುಲ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡು ಇಡೀ ಮಾಹೋಲ್ ಅನ್ನು ರಂಗೇರಿಸಿದ್ದಾರೆ.

ಚರಣ್ ರಾಜ್ ಸಂಗೀತ ನಿರ್ದೇಶನದ ಈ ಹಾಡಲ್ಲಿ ಅಭಿಷೇಕ್ ಅಂಬರೀಶ್ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಸ್ಪೆಷಲ್ ಜಾಕೆಟ್ ಸ್ಪೆಷಲ್ ಸನ್‌ ಗ್ಲಾಸ್, ಕೈಯಲ್ಲಿ ಸಿಗಾರ್ ಹೀಗೆ ಅಭಿಷೇಕ್ ಖದರ್ ಇಲ್ಲಿ ಕಂಪ್ಲೀಟ್ ಚೇಂಜ್ ಆಗಿದೆ. ತುಂಬಾನೇ ವಿಭಿನ್ನ ಅನಿಸೋ ಈ ಗೀತೆಯನ್ನ ವಿಶೇಷ ಧ್ವನಿಯ ಗಾಯಕಿಯಿಂದಲೇ ಹಾಡಿಸಲಾಗಿದೆ. ಬಹು ಭಾಷೆಯಲ್ಲೂ ಮಿಂಚಿರೋ ಗಾಯಕಿ ಉಷಾ ಉತ್ತುಪ್ ಈ ಗೀತೆಗೆ ಧ್ವನಿ ಆಗಿದ್ದಾರೆ. ತಮ್ಮ ವಿಶೇಷ ಕಂಠಸಿರಿಯಿಂದ ಇಡೀ ಹಾಡಿಗೆ ಬೇರೆ ಮೆರಗು ತಂದು ಕೊಟ್ಟಿದ್ದಾರೆ.

ಇದನ್ನೂ ಓದಿ-SC ST Reservation: ಎಸ್‌ಸಿ, ಎಸ್‌ಟಿ ಮೀಸಲಾತಿ ವಿಳಂಬ, ರಾಜಭವನ ಚಲೋಗೆ ಯತ್ನ : ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ 

ಧನಂಜಯ್ ರಾಜನ್ ಬರೆದಿರೋ ಈ ಗೀತೆಯಲ್ಲಿ ಅಭಿಷೇಕ್ ಪಾತ್ರದ ಚಿತ್ರಣ ಇದೆ. ಸ್ವಲ್ಪ ಬ್ಯಾಡ್ ಸ್ವಲ್ಪ ಗುಡ್ ಅನ್ನೋ ಅರ್ಥದ ಸಾಲುಗಳು ಇಲ್ಲಿ ಗಮನ ಸೆಳೆಯುತ್ತವೆ. ಸ್ಪೆಷಲ್ ಆಗಿ ದುನಿಯಾ ಸೂರಿ ಡಿಸೈನ್ ಮಾಡಿರೋ ಬ್ಯಾಡ್‌ ಮ್ಯಾನರ್ಸ್ ಚಿತ್ರದ ಅಭಿ ಪಾತ್ರದ ಝಲಕ್ ಈ ಒಂದು ಗೀತೆಯಲ್ಲಿ ಸಾಲುಗಳಾಗಿ ಹೊರ ಹೊಮ್ಮಿದೆ.

ಮೂಲಕ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರ ಶುರು ಆಗಿದೆ. ಇನ್ನೇನು ರಿಲೀಸ್ ದಿನವೂ ಅನೌನ್ಸ್ ಆಗಲಿದೆ. ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವ್ಯೂಸ್ ಪಡ್ಕೊಂಡು ಇತ್ತು.ಇದೀಗ 2 ಮಿಲಿಯನ್ ಹೆಚ್ಚು ವೀಕ್ಷಣೆ ಪಡ್ಕೊಂಡು ಟ್ರೆಂಡಿಂಗ್ ನಲ್ಲಿದೆ. ನೋಡೋಣ ಈ ಸಿನಿಮಾದಲ್ಲಿಮರಿ ರೆಬೆಲ್ ಹವಾ ಹೆಂಗಿರುತ್ತೆ ಅಂತ.

ಇದನ್ನೂ ಓದಿ-Go Back Somanna : ಸೋಮಣ್ಣ ಅಸೌಜನ್ಯ ನಡತೆಗೆ ಸಿಟ್ಟಾದ ಗ್ರಾಮಸ್ಥರು : ಮಾತು ತಪ್ಪಿದರೆ ಗೋ ಬ್ಯಾಕ್ ಸೋಮಣ್ಣ ಎಚ್ಚರಿಕೆ!! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News