ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ತನಿಖೆ ಆರಂಭಿಸಲು ಗೃಹ ಸಚಿವ ಅಮಿತ್ ಶಾ ಅವರ ನೆರವು ಕೋರಿ ನಟಿ ರಿಯಾ ಚಕ್ರವರ್ತಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಜೂನ್ 14 ರಂದು 34 ನೇ ವಯಸ್ಸಿನಲ್ಲಿ ಸುಶಾಂತ್ ಆತ್ಮಹತ್ಯೆಯಿಂದ ನಿಧನರಾದರು. ಸಂದೇಶಗಳಲ್ಲಿ, ರಿಯಾ ತನ್ನನ್ನು ಸುಶಾಂತ್ ಗೆಳತಿ ಎಂದು ಗುರುತಿಸಿಕೊಂಡಿದ್ದಾಳೆ.

Last Updated : Jul 16, 2020, 04:19 PM IST
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ title=
Photo Courtsey : Instagram

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ತನಿಖೆ ಆರಂಭಿಸಲು ಗೃಹ ಸಚಿವ ಅಮಿತ್ ಶಾ ಅವರ ನೆರವು ಕೋರಿ ನಟಿ ರಿಯಾ ಚಕ್ರವರ್ತಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಜೂನ್ 14 ರಂದು 34 ನೇ ವಯಸ್ಸಿನಲ್ಲಿ ಸುಶಾಂತ್ ಆತ್ಮಹತ್ಯೆಯಿಂದ ನಿಧನರಾದರು. ಸಂದೇಶಗಳಲ್ಲಿ, ರಿಯಾ ತನ್ನನ್ನು ಸುಶಾಂತ್ ಗೆಳತಿ ಎಂದು ಗುರುತಿಸಿಕೊಂಡಿದ್ದಾಳೆ.

 
 
 
 

 
 
 
 
 
 
 
 
 

Respected @amitshahofficial sir , I’m sushants Singh Rajputs girlfriend Rhea chakraborty, it is now over a month since his sudden demise . I have complete faith in the government , however in the interest of justice , I request you with folded hands to initiate a CBI enquiry into this matter . I only want to understand what pressures prompted Sushant to take this step. Yours sincerely Rhea Chakraborty #satyamevajayate

A post shared by Rhea Chakraborty (@rhea_chakraborty) on

'ಗೌರವಾನ್ವಿತ -ಅಮಿತ್‌ಶಾ ಸರ್, ನಾನು ಸುಶಾಂತ್ ಸಿಂಗ್ ರಜಪೂತರ ಗೆಳತಿ ರಿಯಾ ಚಕ್ರವರ್ತಿ, ಅವರ ಹಠಾತ್ ನಿಧನದ ನಂತರ ಈಗ ಒಂದು ತಿಂಗಳು ಮೀರಿದೆ. ನನಗೆ ಸರ್ಕಾರದ ಬಗ್ಗೆ ಸಂಪೂರ್ಣ ನಂಬಿಕೆ ಇದೆ, ಆದರೆ ನ್ಯಾಯದ ಹಿತದೃಷ್ಟಿಯಿಂದ, ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲು ನಾನು ಕೈ ಮುಗಿದು ವಿನಂತಿಸುತ್ತೇನೆ ”ಎಂದು ರಿಯಾ ಟ್ವಿಟ್ಟರ್ ಹಾಗೂ ಇನ್ಸ್ಟಗ್ರಾಂನಲ್ಲಿ ವಿನಂತಿಸಿಕೊಂಡಿದ್ದಾರೆ.ಸುಶಾಂತ್ ಈ ಹೆಜ್ಜೆ ಇಡಲು ಯಾವ ಒತ್ತಡ  ಪ್ರೇರೇಪಿಸಿದೆ ಎಂದು ನಾನು ತಿಳಿಯಲು ಇಚ್ಚಿಸುತ್ತೇನೆ ಎಂದು ಕೋರಿದ್ದಾರೆ. ತಮ್ಮ ಪೋಸ್ಟ್ ಜೊತೆಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಟ್ಯಾಗ್ ಮಾಡಿದ್ದಾರೆ.

ನಟನ ಆತ್ಮಹತ್ಯೆಯ ಹಿನ್ನೆಲೆಯಲ್ಲಿ, ಬೃಹತ್ ಆನ್‌ಲೈನ್ ಅಭಿಯಾನವು ಈ ವಿಷಯದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ. ಹಲವಾರು ಗಮನಾರ್ಹ ಬಾಲಿವುಡ್ ವ್ಯಕ್ತಿಗಳು, ಸುಶಾಂತ್ ಅವರನ್ನು ಬಹಿಷ್ಕರಿಸಿದ್ದಾರೆಂದು ಸಾರ್ವಜನಿಕ ಅಭಿಪ್ರಾಯದ ನ್ಯಾಯಾಲಯದಲ್ಲಿ ಆರೋಪಿಸಲಾಗಿದೆ.

 

Trending News