ಒಂದು ಕಾಲದಲ್ಲಿ ಬೀದಿ ಬದಿಯಲ್ಲಿ ಜ್ಯೂಸ್ ಮಾರುತ್ತಿದ್ದ ಈ ಕುಟುಂಬ ಇಂದು ಬಾಲಿವುಡ್ ನ ಅತ್ಯಂತ ಸಿರಿವಂತ ಪರಿವಾರ ! ಖಾನ್, ಕಪೂರ್, ಬಚ್ಚನ್ ಕುಟುಂಬ ಅಲ್ಲ ಇದು !

Bollywood Richest Family : ಇತ್ತೀಚಿನ ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ಪ್ರಕಾರ, ಬಾಲಿವುಡ್‌ನ ಶ್ರೀಮಂತ ಕುಟುಂಬ ಯಾವುದು ಎನ್ನುವುದು ಬಹಿರಂಗವಾಗಿದೆ.   

Written by - Ranjitha R K | Last Updated : Nov 14, 2024, 01:15 PM IST
  • ಅಪಾರ ಆಸ್ತಿ ಹೊಂದಿರುವ ಅನೇಕ ಕುಟುಂಬಗಳು ಬಾಲಿವುಡ್ ನಲ್ಲಿವೆ.
  • ಈ ಕುಟುಂಬಗಳು ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ವ್ಯವಹಾರಗಳನ್ನು ಹೊಂದಿವೆ.
  • ಬಾಲಿವುಡ್‌ನ ಶ್ರೀಮಂತ ಕುಟುಂಬ ಯಾವುದು ಎನ್ನುವುದು ಬಹಿರಂಗ
ಒಂದು ಕಾಲದಲ್ಲಿ ಬೀದಿ ಬದಿಯಲ್ಲಿ ಜ್ಯೂಸ್ ಮಾರುತ್ತಿದ್ದ ಈ ಕುಟುಂಬ ಇಂದು ಬಾಲಿವುಡ್ ನ ಅತ್ಯಂತ ಸಿರಿವಂತ ಪರಿವಾರ ! ಖಾನ್, ಕಪೂರ್, ಬಚ್ಚನ್ ಕುಟುಂಬ ಅಲ್ಲ ಇದು ! title=

Bollywood Richest Family : ಚೋಪ್ರಾ, ಕಪೂರ್, ಖಾನ್ ಮತ್ತು ಬಚ್ಚನ್ ಕುಟುಂಬಗಳಂತೆ ಅಪಾರ ಆಸ್ತಿ ಹೊಂದಿರುವ ಅನೇಕ ಕುಟುಂಬಗಳು ಬಾಲಿವುಡ್ ನಲ್ಲಿವೆ. ಈ ಕುಟುಂಬಗಳು ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ವ್ಯವಹಾರಗಳನ್ನು ಹೊಂದಿದ್ದು, ಅವರನ್ನು ಮಿಲಿಯನೇರ್‌ಗಳನ್ನಾಗಿ ಮಾಡಿದೆ. ಆದರೆ ಇತ್ತೀಚಿನ ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ಪ್ರಕಾರ, ಬಾಲಿವುಡ್‌ನ ಶ್ರೀಮಂತ ಕುಟುಂಬ ಯಾವುದು ಎನ್ನುವುದು ಬಹಿರಂಗವಾಗಿದೆ. ಈ ಪರಿವಾರ ಖಾನ್, ಚೋಪ್ರಾ, ಕಪೂರ್ ಮತ್ತು ಬಚ್ಚನ್‌ ಕುಟುಂಬಕ್ಕಿಂತ ದೊಡ್ಡ ನಿವ್ವಳ ಮೌಲ್ಯವನ್ನು ಹೊಂದಿದೆ. 

ಬಾಲಿವುಡ್‌ನ ಶ್ರೀಮಂತ ಕುಟುಂಬ : 
ಬಾಲಿವುಡ್ ನಲ್ಲಿ ಇಂದು ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ ಅನೇಕ ಪರಿವಾರಗಳಿವೆ. ಇವರ ಆಸ್ತಿ ವಿವರ ನೋಡುತ್ತಿದ್ದ ಹಾಗೆ ಬಾಯಿ ಬಾಯಿ ಬಿಟ್ಟು ಕೊಳ್ಳುವ ಹಾಗೆ ಆಗುತ್ತದೆ.  ಇಂದು ನಾವಿಲ್ಲ ಬಾಲಿವುಡ್ ನ ಒಂದು ಪರಿವಾರದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಕುಟುಂಬ ನಿವ್ವಳ ಮೌಲ್ಯದ ವಿಷಯದಲ್ಲಿ ಉದ್ಯಮದ ಟಾಪ್ ಸೂಪರ್‌ಸ್ಟಾರ್‌ಗಳನ್ನು ಕೂಡಾ ಹಿಂದಿಕ್ಕಿದೆ. 

ಇದನ್ನೂ ಓದಿ : 'ಭೋದಕ'ನಾದ ಭಜರಂಗಿ.. ಶಿವಣ್ಣ-ಶ್ರೀನಿ ಹೊಸ ಸಿನಿಮಾ ಅನೌನ್ಸ್!!

ಭಾರತದ ಶ್ರೀಮಂತ ಪಟ್ಟಿ 2024 ರಲ್ಲಿ ಹೆಸರು :
ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ವರದಿಯ ಪ್ರಕಾರ, ದೀರ್ಘಕಾಲದವರೆಗೆ ಚಿತ್ರರಂಗವನ್ನು ಆಳುತ್ತಿರುವ ಒಂದು ಕುಟುಂಬವಿದೆ.  ಬಾಲಿವುಡ್‌ನ ಶ್ರೀಮಂತ ಕುಟುಂಬದ ಸ್ಥಾನಮಾನವನ್ನು ಸಹ ಸಾಧಿಸಿದೆ. ಹಾಡುಗಳ ಮೂಲಕ ಹಿಂದಿ ಚಿತ್ರರಂಗಕ್ಕೆ ರಂಗು ತುಂಬಿದ ಗುಲ್ಷನ್ ಕುಮಾರ್ ಮತ್ತು ಒಂದು ಕಾಲದಲ್ಲಿ ರಸ್ತೆಯಲ್ಲಿ ಜ್ಯೂಸ್ ಮಾರುತ್ತಿದ್ದ ಅವರ ಮಗ ಭೂಷಣ್ ಕುಮಾರ್ ಕುಟುಂಬದ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ.

ಕೋಟಿಗಳ ಒಡೆಯ : 
1947 ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ, ಪಶ್ಚಿಮ ಪಂಜಾಬ್‌ನ ಜಾಂಗ್‌ನಿಂದ ಗುಲ್ಶನ್ ಕುಮಾರ್ ಅವರ ಕುಟುಂಬವು ಹಿಂದೂ ವಿರೋಧಿ ಗಲಭೆಗಳಿಂದಾಗಿ ನಿರಾಶ್ರಿತರಾಗಿ ದೆಹಲಿಗೆ ಬಂದಿತು. ಅವರ ಅಜ್ಜ ದೆಹಲಿಯ ದರಿಯಾಗಂಜ್‌ನ ಬೀದಿಗಳಲ್ಲಿ ಹಣ್ಣಿನ ರಸವನ್ನು ಮಾರಾಟ ಮಾಡುತ್ತಿದ್ದರು. ಅವರ ತಂದೆ ಶಿವ ಮತ್ತು ತಾಯಿ ವೈಷ್ಣೋದೇವಿಯ ಭಕ್ತರಾಗಿದ್ದು, ಅನೇಕ ಧಾರ್ಮಿಕ ಹಾಡುಗಳನ್ನು ಹಾಡುತ್ತಿದ್ದರು.ಮಾತಾ ವೈಷ್ಣೋ ದೇವಿಯ ಮೇಲಿನ ಭಕ್ತಿಯಿಂದಾಗಿ ಅವರು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ ಅನ್ನಸಂತರ್ಪಣೆ ಮಾಡುತ್ತಿದ್ದರು. 1997 ರಲ್ಲಿ ಅವರು ನಿಧನರಾದ ನಂತರವೂ ಈ ಸೇವೆಯನ್ನು ಅವರ ಮಗ ನಡೆಸುತ್ತಿದ್ದಾರೆ. ಇಂದು ಅವರು ಟಿ-ಸೀರೀಸ್ ಗ್ರೂಪ್ ಆಫ್ ಕಂಪನಿಗಳ ಮಾಲೀಕರಾಗಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಭೂಷಣ್ ಕುಮಾರ್ ಅವರ ತಂದೆ ಗುಲ್ಶನ್ ಕುಮಾರ್ ಅವರು 70ರ ದಶಕದಲ್ಲಿ ವಿದ್ಯಾಭ್ಯಾಸ ಮುಗಿಸಿ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದರು. ಅವರು ಸಂಗೀತ ಕ್ಯಾಸೆಟ್ ಅಂಗಡಿಯನ್ನು ಖರೀದಿಸಿದರು ಮತ್ತು ಅಲ್ಲಿಂದ ತಮ್ಮದೇ ಆದ ರೆಕಾರ್ಡ್ ಲೇಬಲ್ ಸೂಪರ್ ಕ್ಯಾಸೆಟ್‌ಗಳನ್ನು ಪ್ರಾರಂಭಿಸಿದರು. ನಂತರ ಅದು ಟಿ-ಸೀರೀಸ್ ಆಯಿತು. ಇಂದು T-ಸರಣಿಯು ಭಾರತದಲ್ಲಿನ ಅತಿ ದೊಡ್ಡ ಚಲನಚಿತ್ರ ಸ್ಟುಡಿಯೋಗಳಲ್ಲಿ ಒಂದಾಗಿದೆ. ಹುರುನ್ ವರದಿಯ ಪ್ರಕಾರ, ಕುಮಾರ್ ಕುಟುಂಬದ ಒಟ್ಟು ಸಂಪತ್ತು ಸುಮಾರು 10,000 ಕೋಟಿ ಎಂದು ಅಂದಾಜಿಸಲಾಗಿದೆ. 

ಇದೀಗ ಬಾಲಿವುಡ್ ನ ಶ್ರೀಮಂತರ ಕುಟುಂಬವನ್ನು ನೋಡುವುದಾದರೆ ಕುಮಾರ್ ಕುಟುಂಬ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ವರದಿ ಪ್ರಕಾರ ಭೂಷಣ್ ಕುಮಾರ್ ಕುಟುಂಬ 10,000 ಕೋಟಿ ಆಸ್ತಿ ಹೊಂದಿದ್ದರೆ, ಶಾರುಖ್ ಖಾನ್ ಆಸ್ತಿ 8,096 ಕೋಟಿ, ಚೋಪ್ರಾ ಕುಟುಂಬದ ಆಸ್ತಿ 7,500 ಕೋಟಿ, ಸಲ್ಮಾನ್ ಖಾನ್ ಆಸ್ತಿ 5,259 ಕೋಟಿ, ಬಚ್ಚನ್ ಕುಟುಂಬದ ಆಸ್ತಿ 3,390 ರೂ. ಕೋಟಿ, ಕಪೂರ್ ಕುಟುಂಬದ ನಿವ್ವಳ ಮೌಲ್ಯ ರೂ. 3,000 ಕೋಟಿ ಮತ್ತು ಕರಣ್ ಜೋಹರ್ ಅವರ ನಿವ್ವಳ ಮೌಲ್ಯ ಅಂದಾಜು 2,000 ಕೋಟಿ ರೂ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News