ರಿಷಬ್ ಶೆಟ್ಟಿ ನಿರ್ಮಾಣದ "ಲಾಫಿಂಗ್ ಬುದ್ಧ" ಈ ವಾರ ತೆರೆಗೆ

Laughing Buddha Movie: ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ತೇಜು ಬೆಳವಾಡಿ ನಾಯಕಿಯಾಗಿ ನಟಿಸಿದ್ದಾರೆ. 

Written by - YASHODHA POOJARI | Last Updated : Aug 28, 2024, 09:27 AM IST
    • ಈ ವಾರ ತೆರೆಗೆ ಪ್ರಮೋದ್ ಶೆಟ್ಟಿ ಅಭಿನಯದ "ಲಾಫಿಂಗ್ ಬುದ್ಧ"
    • ರಿಷಬ್ ಶೆಟ್ಟಿ ನಿರ್ಮಾಣದ ಈ ಚಿತ್ರಕ್ಕೆ ಭರತ್ ರಾಜ್ ನಿರ್ದೇಶನ
    • ಪೊಲೀಸ್ ಕುಟುಂಬ ಹಾಗೂ ಭಾವನೆಗಳ ಕುರಿತಾದ ಕಥಾಹಂದರ
ರಿಷಬ್ ಶೆಟ್ಟಿ ನಿರ್ಮಾಣದ "ಲಾಫಿಂಗ್ ಬುದ್ಧ" ಈ ವಾರ ತೆರೆಗೆ   title=

Laughing Buddha Movie: ರಿಷಬ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಎಂ ಭರತ್ ರಾಜ್ ನಿರ್ದೇಶನದಲ್ಲಿ ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ "ಲಾಫಿಂಗ್ ಬುದ್ಧ" ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.  

ಪೊಲೀಸ್ ಕುಟುಂಬ ಹಾಗೂ ಭಾವನೆಗಳ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್ ರಾಜ್ ಅವರೆ ಕಥೆ, ಚಿತ್ರಕಥೆ ರಚಿಸಿದ್ದು, ಅನಿರುದ್ದ್ ಮಹೇಶ್, ಭರತ್ ರಾಜ್ ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: Rakshita Prem: ಚಿತ್ರರಂಗಕ್ಕೆ ಬಂದಾಗ ನಡೆದ ʻಆ ಘಟನೆʼ ನೆನೆದ ನಟಿ ರಕ್ಷಿತಾ ಪ್ರೇಮ್‌ !

ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ತೇಜು ಬೆಳವಾಡಿ ನಾಯಕಿಯಾಗಿ ನಟಿಸಿದ್ದಾರೆ. ದಿಗಂತ್ ಮಂಚಾಲೆ ಅವರು ವಿಭಿನ್ನಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಬರುವಿಕೆಯಿಂದ ಕಥೆಗೆ ಒಂದು ತಿರುವು ಸಿಗುತ್ತದೆ. ಹಿರಿಯ ನಟ ಸುಂದರರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಭದ್ರಾವತಿ, ಜೋಗ, ಸಾಗರ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ‌. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು  ಹಾಗೂ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿದೆ. ವಿಷ್ಣು ವಿಜಯ್ ಸಂಗೀತ ನಿರ್ದೇಶನ, ಎಸ್ ಚಂದ್ರಶೇಖರನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನ "ಲಾಫಿಂಗ್ ಬುದ್ಧ" ಚಿತ್ರಕ್ಕಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ಪಟ್ಟಿ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News