Weekly Horoscope: ಸೆಪ್ಟೆಂಬರ್ ಎರಡನೇ ವಾರ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ

Weekly Horoscope September 09th to September 15th: ಸೆಪ್ಟೆಂಬರ್ 09ರಿಂದ ಸೆಪ್ಟೆಂಬರ್ 15ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Sep 9, 2024, 08:50 AM IST
  • ಕರ್ಕಾಟಕ ರಾಶಿಯ ಜನರು ಈ ವಾರ ಅಲ್ಪಾವಧಿಯ ಲಾಭದ ಅನ್ವೇಷಣೆಯಲ್ಲಿ ದೀರ್ಘಾವಧಿಯ ನಷ್ಟವನ್ನು ತಪ್ಪಿಸಬೇಕಾಗುತ್ತದೆ.
  • ಕನ್ಯಾ ರಾಶಿಯ ಜನರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರಬೇಕು.
  • ಧನು ರಾಶಿಯವರಿಗೆ ಈ ವಾರವು ಫಲಪ್ರಧವಾಗಿರುತ್ತದೆ.
Weekly Horoscope: ಸೆಪ್ಟೆಂಬರ್ ಎರಡನೇ ವಾರ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ  title=

Varabhavishya in Kannada From September 09th to September 15th: ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ವರ್ಷ ಋತುವಿನ ಈ ವಾರ ಸೆಪ್ಟೆಂಬರ್ 09ರಿಂದ ಸೆಪ್ಟೆಂಬರ್ 15ರವರೆಗೆ ಯಾವ ರಾಶಿಯವರಿಗೆ ಏನು ಫಲ? ಯಾರಿಗೆ ಅದೃಷ್ಟ, ಯಾರು ಜಾಗರೂಕರಾಗಿರಬೇಕು ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರಿಗೆ ವಾರದ ಆರಂಭವು ಅಷ್ಟು ಶುಭಪ್ರದವಾಗಿಲ್ಲ. ಸಣ್ಣ-ಪುಟ್ಟ ವಿಚಾರಗಳಿಗೆ ಕಿರಿಕಿರಿ ಉಂಟಾಗಬಹುದು. ಸಾಧ್ಯವಾದಷ್ಟು ತಾಳ್ಮೆಯನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ, ಅನಾವಶ್ಯಕ ವಾದ-ವಿವಾದಗಳು ಗೊಂದಲವನ್ನು ಸೃಷ್ಟಿಸಬಹುದು. ವಾರದ ಮಧ್ಯಭಾಗದಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೇಳುವಿರಿ. ಆರ್ಥಿಕ ದೃಷ್ಟಿಯಿಂದ ವಾರವು ಅತ್ಯುತ್ತಮವಾಗಿದೆ. ಹಿಂದಿನ ಹೂಡಿಕೆಯಿಂದ ಲಾಭವಾಗಲಿದೆ. ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಿ. ಇಲ್ಲವೇ, ಹಣ ಎಲ್ಲಾದರೂ ಸಿಲುಕಿಕೊಳ್ಳಬಹುದು. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ಈ ರಾಶಿಯ ಜನರಿಗೆ ವಾರದ ಪೂರ್ವಾರ್ಧವು ಮಂಗಳಕರವಾಗಿರುತ್ತದೆ. ನಿಮ್ಮ ಯೋಜಿತ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲದಿಂದ  ಅಪೇಕ್ಷಿತ ಪ್ರಯೋಜನಗಳನ್ನು ಪಡೆಯುವಿರಿ. ಈ ವಾರ ದ್ವಿತೀಯಾರ್ಧದಲ್ಲಿ  ಸ್ನೇಹಿತರು ಮತ್ತು ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆದಾಗ್ಯೂ, ಈ ಸಮಯದಲ್ಲಿ, ಅತಿಯಾದ ಕೆಲಸದ ಕಾರಣದಿಂದಾಗಿ, ನಿಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುವುದಿಲ್ಲ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಈ ವಾರವು ಮಿಥುನ ರಾಶಿಯ ಜನರಿಗೆ ಪ್ರತಿ ಕ್ಷೇತ್ರದಲ್ಲೂ  ಶುಭ ಮತ್ತು ಯಶಸ್ವಿಯಾಗಿರಲಿದೆ. ನಿಮ್ಮ ಸೋಮಾರಿತನವನ್ನು ಬಿಟ್ಟು ಮುಂದುವರೆದರೆ ಮಾತ್ರ ಯೋಜಿತ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲಿದೆ. ವಾರದ ಆರಂಭದಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಉದ್ಯೋಗಸ್ಥರು ಹೆಚ್ಚುವರಿ ಕೆಲಸದ ಹೊರೆಯನ್ನು ಎದುರಿಸಬೇಕಾಗಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ವಿಚಲಿತರಾಗಬಹುದು. ಆದಾಗ್ಯೂ, ವಾರಾಂತ್ಯದಲ್ಲಿ ಎಲ್ಲವೂ ತಹಬದಿಗೆ ಬರಲಿದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಈ ರಾಶಿಯ ಜನರು ಈ ವಾರ ಅಲ್ಪಾವಧಿಯ ಲಾಭದ ಅನ್ವೇಷಣೆಯಲ್ಲಿ ದೀರ್ಘಾವಧಿಯ ನಷ್ಟವನ್ನು ತಪ್ಪಿಸಬೇಕಾಗುತ್ತದೆ. ಯಾವುದೇ ಭರವಸೆಯನ್ನು ನೀಡುವ ಮೊದಲು ನೀವು ಅದನ್ನು ನೆರೆವೇರಿಸಲು ಸಾಧ್ಯವೇ ಎಂಬುದನ್ನೂ ಯೋಚಿಸಿ. ತರಾತುರಿಯಲ್ಲಿ ಅಥವಾ ಯಾರೊಬ್ಬರ ಪ್ರಭಾವದಿಂದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ.  ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಗೆ ತಯಾರಿಯಲ್ಲಿ ನಿರತರಾಗಿರುವವರಿಗೆ ಅಪೇಕ್ಷಿತ ಯಶಸ್ಸನ್ನು ಸಾಧಿಸಲು ಹೆಚ್ಚುವರಿ ಕಠಿಣ ಪರಿಶ್ರಮ ಅಗತ್ಯವಿದೆ. 

ಇದನ್ನೂ ಓದಿ- Neech Bhang Rajyog: ಶುಕ್ರನಿಂದ ನೀಚಭಂಗ ರಾಜಯೋಗ, 3 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಕೈತುಂಬ ಹಣ 

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಈ ವಾರವು ನಿಮಗೆ ಶುಭಫಲಗಳಿಂದ ಕೂಡಿರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಭೂಮಿಗೆ ಸಂಬಂಧಿಸಿದ ನಿಮ್ಮ ಆಸೆ ನೆರವೇರುವುದು. ಉದ್ಯೋಗಿಗಳಿಗೆ ಈ ಸಮಯವು ತುಂಬಾ ಶುಭಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ವಾರದ ಮಧ್ಯದಲ್ಲಿ, ನೀವು ನಿಮ್ಮ ಕುಟುಂಬದೊಂದಿಗೆ ದೂರದ ಪ್ರವಾಸಕ್ಕೆ ಹೋಗಬಹುದು. ವ್ಯಾಪಾರದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಪ್ರೇಮ ವ್ಯವಹಾರಗಳ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಶುಭಕರವಾಗಿರುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಈ ರಾಶಿಯ ಜನರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಅನಾವಶ್ಯಕ ತೊಂದರೆಗಳಲ್ಲಿ ಸಿಲುಕಿಕೊಳ್ಳುವಿರಿ. ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ಯಾರೊಂದಿಗಾದರೂ ವಾದ ಮಾಡುವುದನ್ನು ತಪ್ಪಿಸಿ. ಇಲ್ಲವೇ, ಇದು ನಿಮ್ಮನ್ನು ಸಮಸ್ಯೆಯ ಹಾದಿಯಲ್ಲಿ ಕೊಂಡೊಯ್ಯಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಈ ವಾರ ಸ್ವಲ್ಪ ಸವಾಲಿನಿಂದ ಕೂಡಿರಲಿದೆ.  ಯುವಕರ ಹೆಚ್ಚಿನ ಸಮಯವನ್ನು ಮೋಜಿನಲ್ಲೇ ಕಳೆಯುತ್ತಾರೆ. ಇದು ಅಧಿಕ ಆರ್ಥಿಕ ವೆಚ್ಚಕ್ಕೆ ಕಾರಣವಾಗಬಹುದು. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ಈ ರಾಶಿಯ ಜನರಿಗೆ ಇದು ಕೆಲವು ಸಮಸ್ಯೆಗಳಿಂದ ಕೂಡಿದ ವಾರ. ವಾರದ ಪೂರ್ವಾರ್ಧದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸ್ವಲ್ಪ ಹೆಚ್ಚು ಓಡಬೇಕಾಗಬಹುದು. ಮಾರುಕಟ್ಟೆಯಲ್ಲಿ ಸಿಲುಕಿರುವ ಹಣವನ್ನು ಹಿಂಪಡೆಯಲು ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಯಾವುದೇ ಸಂದರ್ಭಗಳಲ್ಲಿ ನಿಮ್ಮ ತಾಳ್ಮೆ ಮತ್ತು ವಿವೇಚನೆಯನ್ನು ಕಳೆದುಕೊಳ್ಳಬೇಡಿ. ಗುರಿಗಳತ್ತ ಗಮನ ಕೇಂದ್ರೀಕರಿಸಿ ಮುಂದುವರೆಯಿರಿ. ಇದರಿಂದ ವಾರದ ದ್ವಿತೀಯಾರ್ಧವು ಮೊದಲಾರ್ಧಕ್ಕಿಂತ ಸ್ವಲ್ಪ ಉತ್ತಮವಾಗಿರುತ್ತದೆ. . ನಿಮ್ಮ ವೈವಾಹಿಕ ಜೀವನವು ಸಾಮಾನ್ಯವಾಗಿರುತ್ತದೆ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯವರಿಗೆ ವಾರದ ಆರಂಭದಲ್ಲಿ ಮನೆ, ರಿಪೇರಿಗೆ ಸಂಬಂಧಿಸಿದಂತೆ ಹೆಚ್ಚಿನ ಹಣ ವೆಚ್ಚವಾಗಬಹುದು. ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸಾಲದ ಮೊರೆ ಹೋಗಬೇಕಾಗಬಹುದು. ಉದ್ಯೋಗಸ್ಥರು  ರಹಸ್ಯ ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅವರು ನಿಮ್ಮ ಕೆಲಸವನ್ನು ಹಾಳುಮಾಡಬಹುದು.  ವಾರದ ಮಧ್ಯದಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಪ್ರಯಾಣವು ಲಾಭದಾಯಕವಾಗಿರಲಿದೆ. ಈ ವಾರ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಸಂತೋಷದಿಂದ ಸಮಯ ಕಳೆಯಲು ಹಲವು ಅವಕಾಶಗಳನ್ನು ಪಡೆಯುತ್ತೀರಿ. 

ಇದನ್ನೂ ಓದಿ- ಶನಿ ರಾಶಿಚಕ್ರ ಚಿಹ್ನೆಯಲ್ಲಿ ಸೂರ್ಯನಿಂದ ರಾಜಯೋಗ, 3 ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗ, ವಾಹನ ಮನೆ ಖರೀದಿ ಸಾಧ್ಯತೆ 

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರಿಗೆ ಈ ವಾರವು ಫಲಪ್ರಧವಾಗಿರುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಆತ್ಮೀಯ ಕುಟುಂಬದ ಸದಸ್ಯರ ದೊಡ್ಡ ಸಾಧನೆಯಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಣಕಾಸಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ವ್ಯಾಪಾರವನ್ನು ವಿಸ್ತರಿಸುವ ಬಯಕೆ ಈಡೇರುತ್ತದೆ. ವಿಶೇಷವೆಂದರೆ ಇದರಲ್ಲಿ ನಿಮ್ಮ ಆಪ್ತರು ಮತ್ತು ಕುಟುಂಬದವರ ಸಂಪೂರ್ಣ ಬೆಂಬಲ ಸಿಗುತ್ತದೆ.  ಉದ್ಯೋಗಿಗಳಿಗೆ ವಾರದ ಮಧ್ಯಭಾಗವು ತುಂಬಾ ಅನುಕೂಲಕರವಾಗಿದೆ. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ಈ ವಾರ ಮಿಶ್ರಫಲಗಳಿಂದ ಕೂಡಿದ ವಾರ. ಯೋಜಿತ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾರ. ಕುಟುಂಬ ಅಥವಾ ಯಾವುದೇ ವಿಶೇಷ ಕೆಲಸಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಸಮಾಲೋಚಿಸುವುದನ್ನು ಮರೆಯಬೇಡಿ. ವಾರದ ಮೊದಲಾರ್ಧಕ್ಕೆ ಹೋಲಿಸಿದರೆ ಉದ್ಯೋಗಿಗಳಿಗೆ ವಾರದ ದ್ವಿತೀಯಾರ್ಧವು ಸ್ವಲ್ಪ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಜಗಳವಾಡುವ ಬದಲು ಬೇರೆಯವರ ಮಾತುಗಳಿಗೆ ಕಿವಿಗೊಡುವುದನ್ನು ಕಲಿಯಿರಿ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಈ ರಾಶಿಯವರಿಗೆ ನಿಮ್ಮ ಜೀವನದಲ್ಲಿ ಮೂಡಿದ್ದ ಕೆಲವು ಸಮಸ್ಯೆಗಳು ಬಗೆಹರಿಯುವ ಸಮಯ.  ನೀವು ಕುಟುಂಬ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಸ್ವಲ್ಪ ಹೆಚ್ಚು ಓಡಬೇಕಾಗಬಹುದು. ಈ ಸಮಯವು ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಸ್ವಲ್ಪ ಸವಾಲಿನದ್ದಾಗಿರಬಹುದು, ಆದರೆ ಈ ಪರಿಸ್ಥಿತಿಯು ಹೆಚ್ಚು ಕಾಲ ಉಳಿಯುವುದಿಲ್ಲ. ವಾರದ ಉತ್ತರಾರ್ಧದಲ್ಲಿ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು,  ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣವು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ವಾಹನ ಖರೀದಿ ಯೋಗವೂ ಇದೆ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರೇ ವಾರದ ಆರಂಭದಲ್ಲಿ ಯಾವುದೇ ಕೆಲಸದಲ್ಲಿ ಆತುರಪಡುವುದನ್ನು ತಪ್ಪಿಸಿ.  ಯಾವುದೇ ಕಾಗದವನ್ನು ಸರಿಯಾಗಿ ಓದದೆ ಮತ್ತು ಅರ್ಥಮಾಡಿಕೊಳ್ಳದೆ ಸಹಿ ಮಾಡಬೇಡಿ. ಭವಿಷ್ಯದಲ್ಲಿ ತೊಂದರೆ ಹೆಚ್ಚಾಗಬಹುದು. ವಾರದ ಮಧ್ಯ ಭಾಗದಲ್ಲಿ ವಾಹನ ಚಾಲನೆಯ ವೇಳೆ ತುಂಬಾ ಜಾಗರೂಕರಾಗಿರಿ. ಉದ್ಯೋಗಿಗಳಿಗೆ ವಾರದ ಮೊದಲಾರ್ಧದಲ್ಲಿ ಹೆಚ್ಚುವರಿ ಕೆಲಸದ ಹೊರೆ ಇರಬಹುದು. ಸಣ್ಣ ವಿಷಯಗಳ ನಿರ್ಲಕ್ಷ್ಯದಿಂದ ಬಾಸ್ ಕೋಪಕ್ಕೆ ಗುರಿಯಾಗಬಹುದು. ನಿಮ್ಮ ಕೆಲಸವನ್ನು ಬೇರೆಯವರಿಗೆ ಬಿಟ್ಟುಕೊಡುವ ಬದಲು ನೀವೇ ಉತ್ತಮವಾಗಿ ಮಾಡಲು ಪ್ರಯತ್ನಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News