ಬೆಂಗಳೂರು : ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಸಿನಿಮಾ NFDC ಆಯೋಜಿತ ಫಿಲಂ ಬಜಾರ್‌ನ ವರ್ಕ್ ಇನ್ ಪ್ರೋಗ್ರೆಸ್‌ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡು, ಈಗ ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ 'ಯುವ ತೀರ್ಪುಗಾರರ ಅವಾರ್ಡ್' ಪಡೆದುಕೊಂಡಿದೆ.
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪರವನ್ನು ಬರವಸೆಯಿಂದ ಪಾಲಿಸುವ ಹೋರಾಟದ ಕಥೆಯೇ ʼಶಿವಮ್ಮʼ. ಈ ಚಿತ್ರ ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣವಾಗಿದ್ದು, ಸಂಪೂರ್ಣ ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ನಟಿಸಿದ್ದಾರೆ.
ಇದನ್ನೂ ಓದಿ: Niveditha Gowda : ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್! ನೆಗೆಟಿವ್ ಕಾಮೆಂಟ್ಸ್‌ಗೆ ನಿವ್ವಿ ಖಡಕ್ ಆನ್ಸರ್
NFDC ಆಯೋಜಿತ ಫಿಲಂ ಬಜಾರ್ ನ ವರ್ಕ್ ಇನ್ ಪ್ರೋಗ್ರೆಸ್ ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡು, ಈಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ 'ಯುವ ತೀರ್ಪುಗಾರರ ಅವಾರ್ಡ್' ಪಡೆದುಕೊಂಡಿದೆ. ಈಗಾಗಲೇ ಹಲವಾರು ಚಿತ್ರೋತ್ಸವದಲ್ಲಿ ಆಯ್ಕೆ ಆಗಿದ್ದು ಮತ್ತಷ್ಟು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ದೈವದ ವಿಚಾರ ಇಟ್ಟುಕೊಂಡು ರೀಲ್ಸ್, ಅನುಕರಣೆ ಮಾಡುವುದು ಸರಿಯಲ್ಲ..!
ಯುವ ನಿರ್ದೇಶಕರುಗಳಿಗೆ ಕೈಜೋಡಿಸಿರುವ ರಿಷಬ್ ಉತ್ತಮ ಕಥೆ ಮತ್ತು ಸಾರಾಂಶ ಹೊಂದಿರುವ ಯುವ ನಿರ್ದೇಶಕರ ಸಿನಿಮಾಗಳ ನಿರ್ಮಾಣಕ್ಕೆ ʼರಿಷಬ್ ಶೆಟ್ಟಿ ಫಿಲಂಸ್ʼ ಮೂಲಕ ಸಾಥ್ ನೀಡುತ್ತಿದ್ದಾರೆ. ಇದೀಗ ʼಶಿವಮ್ಮʼ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ಜೈಶಂಕರ್ ಅರ್ಯರ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ‘ನ್ಯೂ ಕರೆಂಟ್ಸ್’ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಅತ್ಯುತ್ತಮ ಚಿತ್ರಕ್ಕೆ ಡುವ ಪ್ರಶಸ್ತಿಯಾಗಿದೆ. ಒಂದು ಕಡೆ ಕಾಂತಾರ ಸೂಪರ್ ಹಿಟ್ ಆಗಿದ್ದು, ಇದೀಗ ರಿಷಬ್ ನಿರ್ಮಾಣದ ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು ಹೆಮ್ಮೆಯ ವಿಚಾರ.
ಶಿವಮ್ಮ ಸಿನಿಮಾವನ್ನು ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಜೈಶಂಕರ್ ಅರ್ಯರ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸೌಮ್ಯನಂದ ಸಾಹಿ, ವಿಕಾಸ್ ಅರಸ್ ಛಾಯಾಗ್ರಹಣ ಮತ್ತು ಶ್ರೇಯಾಂಕ್ ನಂಜಪ್ಪ ಶಬ್ದ ವಿನ್ಯಾಸ ಚಿತ್ರಕ್ಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.