Mr.ಆಂಡ್ Mrs ರಾಮಾಚಾರಿ ವೆಡ್ಡಿಂಗ್ ಆನಿವರ್ಸರಿ : ರಾಕಿಭಾಯ್‌ಗೆ ರಾಧಿಕಾ ಪ್ರೇಮ ಸಂದೇಶ..!

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇದೀಗ ರಾಧಿಕಾ ಪಂಡಿತ್ ತಮ್ಮ 6 ವರ್ಷದ ಮದುವೆ ಜರ್ನಿ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಕ್ಯೂಟ್ ಆಗಿ ಒಂದಷ್ಟು ಫೋಟೋ ಶೇರ್ ಮಾಡೋದ್ರ ಜೊತೆಗೆ ತಮ್ಮ ಪ್ರೀತಿಯ ಸಂದೇಶವನ್ನ ಯಶ್ ಗಾಗಿ ಬರ್ಕೊಂಡಿದ್ದಾರೆ.

Written by - YASHODHA POOJARI | Edited by - Krishna N K | Last Updated : Dec 9, 2022, 03:35 PM IST
  • ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ
  • ರಾಧಿಕಾ ಪಂಡಿತ್ ತಮ್ಮ 6 ವರ್ಷದ ಮದುವೆ ಜರ್ನಿ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದಾರೆ
  • ಅಭಿಮಾನಿಗಳು ಕೂಡ ಈ ಮುದ್ದಾದ ಜೋಡಿಗಳಿಗೆ ವಿಶೇಷವಾಗಿ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ
Mr.ಆಂಡ್ Mrs ರಾಮಾಚಾರಿ ವೆಡ್ಡಿಂಗ್ ಆನಿವರ್ಸರಿ : ರಾಕಿಭಾಯ್‌ಗೆ ರಾಧಿಕಾ ಪ್ರೇಮ ಸಂದೇಶ..! title=

Yash Radhika anniversary : ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇದೀಗ ರಾಧಿಕಾ ಪಂಡಿತ್ ತಮ್ಮ 6 ವರ್ಷದ ಮದುವೆ ಜರ್ನಿ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಕ್ಯೂಟ್ ಆಗಿ ಒಂದಷ್ಟು ಫೋಟೋ ಶೇರ್ ಮಾಡೋದ್ರ ಜೊತೆಗೆ ತಮ್ಮ ಪ್ರೀತಿಯ ಸಂದೇಶವನ್ನ ಯಶ್ ಗಾಗಿ ಬರ್ಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿಗಳಲ್ಲಿ ಯಶ್‌ ಮತ್ತು ರಾಧಿಕಾ ಜೊಡಿ ಕೂಡ ಒಂದು. 6 ವರ್ಷದ ಸುದೀರ್ಫ ಪಯಣದಲ್ಲಿ ಬಾಳ ಸಂಗಾತಿಯಾಗಿ ಕೈಹಿಡಿದು ನಿಂತಿರುವ ಯಶ್‌ ಅವರಿಗೆ ರಾಧಿಕಾ ಅವರು, ಸ್ವೀಟ್‌ ಸಂದೇಶವೊಂದನ್ನು ಕಳುಹಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಯಶ್‌ ಜೊತೆಗಿನ ಬ್ಯೂಟಫುಲ್‌ ಫೋಟೋಸ್‌ ಹಂಚಿಕೊಂಡಿರುವ ರಾಧಿಕಾ, ʼThis is us.. we can be a lil filmy, a lil playful, a lil religious, a lil serious but a lot REAL.. Thank you for making these six years of married life with u magical yet Real ❤️ Happy Anniversary. Love youʼ ಎಂದು ಹೇಳಿದ್ದಾರೆ. ಅಭಿಮಾನಿಗಳು ಕೂಡ ಈ ಮುದ್ದಾದ ಜೋಡಿಗಳಿಗೆ ವಿಶೇಷವಾಗಿ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: "ಕನ್ನಡ ಸಿನಿಮಾ ಮೇಲೆ ಪ್ರೀತಿ ಇದೆ, ಉಳಿದಿದ್ದು ಅವರಿಗೆ ಬಿಟ್ಟದ್ದು": ಬ್ಯಾನ್‌ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

ಯಶ್ ಮತ್ತು ರಾಧಿಕಾ ಮೊದಲ ಬಾರಿಗೆ ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ಭೇಟಿಯಾಗಿದ್ದರು. 2004 ರಲ್ಲಿ ಟಿವಿ ಶೋ ನಂದಗೋಕುಲದ ಸೆಟ್‌ಗಳಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಿತ್ತು. ರಗಡ್‌ ಲುಕ್‌ನ ರಾಕಿ ಭಾಯ್‌ ಮಾತ್ರ ರಾಧಿಕಾಗೆ ಲವ್‌ ಪ್ರಪೋಸ್ ಮಾಡಲು ಹೆದರುತ್ತಿದ್ದರು. ಕೊನೆಗೂ ಗಟ್ಟಿ ನಿರ್ಧಾರ ಮಾಡಿದ ಯಶ್‌, ಪ್ರೇಮಿಗಳ ದಿನದಂದು ರಾಧಿಕಾ ಅವರಿಗೆ ಕರೆ ಮಾಡಿ  ಲವರ್‌ ಪ್ರಪೋಸ್‌ ಮಾಡಿದ್ದರು. ಆದ್ರೆ ರಾಧಿಕಾ ಅವರು ತಮ್ಮ ಅಭಿಪ್ರಾಯ ಹೇಳಿರಲಿಲ್ಲ.

ಕೆಲವು ದಿನಗಳ ನಂತರ ಯಶ್‌ ಮತ್ತೊಮ್ಮೆ ರಾಧಿಕಾಗೆ ಕರೆ ಮಾಡಿ ಧೈರ್ಯದಿಂದ ತಮ್ಮ ಮನದಾಳದ ಮಾತನ್ನು ಹೇಳುತ್ತಾರೆ. ಆಗಲೂ ರಾಧಿಕಾ ಯಾವುದೇ ಉತ್ತರ ನೀಡಲ್ಲ. ಆದರೆ ಆರು ತಿಂಗಳ ನಂತರ ಯಶ್ ಅವರು ಮತ್ತೆ ಪ್ರಪೋಸ್‌ ಮಾಡಿದಾಗ ಇನ್ನೂ ಕಾಯಿಸಿದ್ರೆ ಸರಿಯಲ್ಲ ಅಂತ ರಾಧಿಕಾ ಯಸ್‌ ಅಂತಾರೆ.  ಯಶ್ ಮತ್ತು ರಾಧಿಕಾ 9 ಡಿಸೆಂಬರ್ 2016 ರಂದು ಬೆಂಗಳೂರಿನಲ್ಲಿ ವಿವಾಹವಾದರು. ಸ್ಟಾರ್‌ ಜೋಡಿಯ ಅದ್ಧೂರಿ ಮದುವೆಗೆ ದಕ್ಷಿಣ ಚಿತ್ರರಂಗದ ಖ್ಯಾತ ತಾರೆಯರು ಭಾಗವಹಿಸಿದ್ದರು. ಇಂದು ಅವರಿಬ್ಬರೂ ಮದುವೆಯಾಗಿ 6 ​​ವರ್ಷಗಳಾಗಿವೆ. ಅಲ್ಲದೆ, ಈ ಕ್ಯೂಟ್‌ ಜೋಡಿಗೆ ಯಥಾರ್ಥ್ ಮತ್ತು ಐರಾ ಎಂಬ ಮುದ್ದಾದ ಮಕ್ಕಳಿದ್ದಾರೆ.

ಇದನ್ನೂ ಓದಿ: Aamir Khan : ಹಣೆಗೆ ಕುಂಕುಮ ಇಟ್ಟು ಕಲಶ ಪೂಜೆ! ಅಮೀರ್ ಖಾನ್ ಫೋಟೋ ವೈರಲ್

ಕೆಜಿಎಫ್‌ 2 ಮೂಲಕ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ರಾಧಿಕಾ ಪಂಡಿತ್ ತಮ್ಮ ಕ್ಯೂಟ್ ಕ್ಯೂಟ್ ಮಕ್ಕಳ ಜೊತೆ ಸೂಪರ್ ಆಗಿ ಟೈಮ್ ಸ್ಪೆಂಡ್ ಮಾಡ್ತಾ ಇದ್ದಾರೆ. KGF ಸಿನಿಮಾ ಬಂದ ಬಳಿಕ ಯಶ್ ಲೆವೆಲ್ ಟಾಪ್‌ನಲ್ಲಿದೆ. ಇದೀಗ ಅಭಿಮಾನಿಗಳು ಯಶ್ 19 ಯಾವಾಗ ಅನ್ನೋ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಆದ್ರೆ ಯಶ್ ಅಂತೂ ಇನ್ನೂ ಯಾವುದೇ ಸುಳಿವು ಕೊಟ್ಟಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News