RRR full HD movie LEAKED: ಹೊಸದಾಗಿ ಬಿಡುಗಡೆಯಾದ ಮೆಗಾ ಸಿನಿಮಾಗೆ ಶಾಕ್ ಕೊಟ್ಟ Tamilrockers..!

ಬಹುನಿರೀಕ್ಷಿತ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಇಂದು ವಿಶ್ವಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಈಗಾಗಲೇ ಚಿತ್ರಕ್ಕೆ ವಿಮರ್ಶಕರು ಹಾಗೂ ಅಭಿಮಾನಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

Written by - Zee Kannada News Desk | Last Updated : Mar 25, 2022, 03:44 PM IST
  • ತಮಿಳ್ ರಾಕರ್ಸ್ ಈಗ ಆರ್ ಆರ್ ಆರ್ ಚಿತ್ರವನ್ನು ಸೋರಿಕೆ ಮಾಡಿರುವುದು ಚಿತ್ರದ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
RRR full HD movie LEAKED: ಹೊಸದಾಗಿ ಬಿಡುಗಡೆಯಾದ ಮೆಗಾ ಸಿನಿಮಾಗೆ ಶಾಕ್ ಕೊಟ್ಟ Tamilrockers..! title=

ನವದೆಹಲಿ: ಬಹುನಿರೀಕ್ಷಿತ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಇಂದು ವಿಶ್ವಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಈಗಾಗಲೇ ಚಿತ್ರಕ್ಕೆ ವಿಮರ್ಶಕರು ಹಾಗೂ ಅಭಿಮಾನಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಆದರೆ ಬಿಡುಗಡೆಯಾದ ಮೊದಲ ದಿನದಂದೇ ಚಿತ್ರ ತಂಡಕ್ಕೆ ಆಘಾತ ಎದುರಾಗಿದೆ.ಹೌದು ಈಗ ಈ ಚಿತ್ರ ಈಗ ಪೈರಸಿಗೆ ತುತ್ತಾಗಿದೆ.ಆರ್‌ಆರ್‌ಆರ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಪೈರಸಿ ಆಧಾರಿತ ವೆಬ್‌ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಾದ Tamilrockers ನಲ್ಲಿ ಪ್ರಸಾರವಾಗುತ್ತಿದೆ ಎಂದು Asianetnewsable.com ವರದಿ ಮಾಡಿದೆ.

ಇದನ್ನೂ ಓದಿ: 'ಚಲನಚಿತ್ರಗಳ ಪೋಸ್ಟರ್‌ಗಳನ್ನು ಹಾಕಲು ನೀವು ರಾಜಕೀಯಕ್ಕೆ ಬಂದಿದ್ದೀರಾ?'

ದೊಡ್ಡ ಪರದೆಯ ಬಿಡುಗಡೆಗೆ ಮುಂಚಿತವಾಗಿ ಉನ್ನತ ಪ್ರಾದೇಶಿಕ, ಬಾಲಿವುಡ್ ಮತ್ತು ಹಾಲಿವುಡ್ ಚಲನಚಿತ್ರಗಳನ್ನು ಸೋರಿಕೆ ಮಾಡುವಲ್ಲಿ ಕುಖ್ಯಾತಿಯನ್ನು ಪಡೆದಿರುವ ತಮಿಳ್ ರಾಕರ್ಸ್ ಈಗ ಆರ್ ಆರ್ ಆರ್ ಚಿತ್ರವನ್ನು ಸೋರಿಕೆ ಮಾಡಿರುವುದು ಚಿತ್ರದ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಇದು ಕೆಲವು ಅಭಿಮಾನಿಗಳ ಗಮನಕ್ಕೆ ಬಂದ ನಂತರ, ಎಸ್‌ಎಸ್ ರಾಜಮೌಳಿ ಮತ್ತು ಆರ್‌ಆರ್‌ಆರ್ (RRR) ತಾರಾ ಬಳಗಕ್ಕೆ ಬೆಂಬಲ ವ್ಯಕ್ತವಾಯಿತು.ಆದಾಗ್ಯೂ, ಆನ್‌ಲೈನ್‌ನಲ್ಲಿ ಸೋರಿಕೆಯಾದ ಮೊದಲ ತೆಲುಗು ಚಿತ್ರ RRR ವೊಂದೇ ಅಲ್ಲ. ಈ ಹಿಂದೆ ಪುಷ್ಪ, ಅಖಂಡ, ವಕೀಲ್ ಸಾಬ್, ಭೀಮಾ ನಾಯಕ್, ಶ್ಯಾಮ್ ಸಿಂಗ್ ರಾಯ್, ಬಂಗಾರರಾಜು, ಡಿಜೆ ತಿಲ್ಲು, ಕಿಲಾಡಿಗಳು, ರೌಡಿ ಬಾಯ್ಸ್, ಗುಡ್ ಲಕ್ ಸಖಿ, ಜಾನ್ವಿ ಕಪೂರ್ ಅವರ ರೂಹಿ, ಮೋಹನ್ ಲಾಲ್ ಅವರ ದೃಶ್ಯಂ 2, ಸೇರಿದಂತೆ ಶುಭ್ ಮಂಗಲ್ ಜ್ಯಾದಾ ಸಾವಧಾನ್, ಲವ್ ಆಜ್ ಕಲ್ ಮತ್ತು ಸ್ಟ್ರೀಟ್ ಡ್ಯಾನ್ಸರ್ 3D ಕೂಡ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. 

ಇದನ್ನೂ ಓದಿ: ವಿಧಾನಸೌಧದ 3 ನೇ ಮಹಡಿಯಲ್ಲಿ ಮಂತ್ರಿಯೊಬ್ಬರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೇ ?

ಕಳೆದ ವರ್ಷ, ತೆಲುಗು ರೋಮ್ಯಾಂಟಿಕ್ ಚಲನಚಿತ್ರ ಉಪ್ಪೆನಾ ಆನ್‌ಲೈನ್‌ನಲ್ಲಿ ತಮಿಳು ರಾಕರ್ಸ್, ಟೆಲಿಗ್ರಾಮ್, ಮೂವೀ ರುಲ್ಜ್ ಮತ್ತು ಎಚ್‌ಡಿ ಗುಣಮಟ್ಟದಲ್ಲಿ ಇತರ ಟೊರೆಂಟ್ ಸೈಟ್‌ಗಳಲ್ಲಿ ಸೋರಿಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News