ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು!

Bigg Boss 10 Kiccha Sudeep: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ನ ಮೊದಲ ವೀಕೆಂಡ್‌ ಎಪಿಸೋಡ್‌, ವಾರದ ಕಿಚ್ಚನ ಜೊತೆ ಈಗಷ್ಟೇ ಮುಗಿದಿದೆ. ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್‌ಸಮ್‌ ಲುಕ್‌ನಲ್ಲಿ ಕಾಣಿಸಿಕೊಂಡ ಸುದೀಪ್‌ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು. 

Written by - Savita M B | Last Updated : Oct 15, 2023, 10:22 AM IST
  • ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಎಲ್ಲ ಸ್ಪರ್ಧಿಗಳನ್ನು ಮಾತನಾಡಿಸಿ, ಅವರ ಅನುಭಗಳನ್ನು ಹಂಚಿಕೊಂಡರು.
  • ಮನೆಯೊಳಗಿನ ಸ್ಪರ್ಧಿಗಳಿಂದಲೇ ಅವರ ವರ್ತನೆಯ ಕುರಿತು ವಿಶ್ಲೇಷಣೆ ನಡೆಸಿದರು.
  • ಸ್ನೇಹಿತ್‌ನ ಕ್ಯಾಪ್ಟನ್ಸಿಯ ಕೊರತೆಗಳನ್ನು ಸ್ಪರ್ಧಿಗಳ ಬಾಯಿಯಿಂದಲೇ ಹೊರಡಿಸಿದರು.
ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು! title=

Varadha Kathe Kichhana Jote: ಎಲ್ಲ ಸ್ಪರ್ಧಿಗಳ ವೀಕ್‌ನೆಸ್‌ನಗಳನ್ನು, ಬಿಗ್‌ಬಾಸ್ ಮನೆಯಲ್ಲಿ ನಡೆದ ತಪ್ಪುಗಳನ್ನು, ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸಗಳನ್ನು ಸೂಚ್ಯವಾಗಿ ಹೇಳಿದರು. ನಗಿಸಿದರು, ಕಾಲೆಳೆದರು ಹಾಗೆಯೇ ತಪ್ಪುಗಳನ್ನು ಸೂಚ್ಯವಾಗಿಯೇ ತಿದ್ದಿದರು. ಬಿಗ್‌ಬಾಸ್‌ ರೂಲ್ಸ್‌ ಬಗ್ಗೆ ಎಚ್ಚರಿಸಿದರು. 

ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಎಲ್ಲ ಸ್ಪರ್ಧಿಗಳನ್ನು ಮಾತನಾಡಿಸಿ, ಅವರ ಅನುಭಗಳನ್ನು ಹಂಚಿಕೊಂಡರು. ಮನೆಯೊಳಗಿನ ಸ್ಪರ್ಧಿಗಳಿಂದಲೇ ಅವರ ವರ್ತನೆಯ ಕುರಿತು ವಿಶ್ಲೇಷಣೆ ನಡೆಸಿದರು. ‘ನಿಮಗೆ ನೀವೇ ಎಷ್ಟು ಹತ್ತರಲ್ಲಿ ಎಷ್ಟು ಅಂಕಗಳನ್ನು ಕೊಟ್ಟುಕೊಳ್ಳುತ್ತೀರಿ?’ ಎಂದೂ ಕೇಳಿದರು. ಸ್ನೇಹಿತ್‌ನ ಕ್ಯಾಪ್ಟನ್ಸಿಯ ಕೊರತೆಗಳನ್ನು ಸ್ಪರ್ಧಿಗಳ ಬಾಯಿಯಿಂದಲೇ ಹೊರಡಿಸಿದರು. 

ಮನೆಯೊಳಗಿನ ಹುಡುಗಿಯರು ತುಕಾಲಿ ಸಂತೋಷ್‌ ಅವರಿಗೆ ಬೆಸ್ಟ್ ತಂಗಿಯಾಗುವ ಆಸೆಯನ್ನು ವ್ಯಕ್ತಿಪಡಿಸುವಂತೆ ಮಾಡಿದ್ದಲ್ಲದೆ, ‘ಅಣ್ಣಾ…. ಇವರಿಂದ ಅಣ್ಣ ಅನ್ನಿಸಿಕೊಳ್ಳೋದಕ್ಕಿಂತ ವಾರಪೂರ್ತಿ ಪಾತ್ರೆ ತೊಳೆಯುತ್ತೇನೆ’ ಎಂದು ತುಕಾಲಿ ಅವರು ತಮಾಷೆಯಾಗಿ ಹೇಳಿದ ಮಾತಿಗೆ ಕಿಚ್ಚ, ‘ಅಸ್ತು’ ಅಂದುಬಿಟ್ಟರು! ನಂತರ ಅವರು ದಾಟಿದ್ದು ‘ನಾಮಿನೇಷನ್’ ಎಂಬ ಅಗ್ನಿಪರೀಕ್ಷೆಗೆ. 

ಕಳೆದ ವಾರ ಪ್ರಾರಂಭದ ಎಪಿಸೋಡ್‌ನಲ್ಲಿ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್, ಸಂಗೀತಾ ಶೃಂಗೇರಿ, ತನಿಷಾ, ಸ್ನೇಕ್ ಶಾಮ್, ಬುಲೆಟ್ ರಕ್ಷಕ್, ಕಾರ್ತಿಕ್ ಈ ಏಳು ಸ್ಪರ್ಧಿಗಳನ್ನು ಜನರು ಹೋಲ್ಡ್‌ನಲ್ಲಿಟ್ಟಿದ್ರು. ಇಂದು ವರ್ತೂರು ಸಂತೋಷ್ ಅತಿಹೆಚ್ಚು ಮತ ಪಡೆದು ಸಮರ್ಥರ ಗುಂಪಿಗೆ ಸೇರಿ ಸೇಫ್ ಆದರು. ನಂತರ ಸೇಫ್ ಆಗಿದ್ದು ತನಿಷಾ. ಉಳಿದ ನಾಲ್ವರು ಅಸಮರ್ಥರು ಟೆನ್ಷನ್‌ನಲ್ಲಿಯೇ ಕೂಡುವಂತಾಯ್ತು. ಯಾಕೆಂದರೆ ಕಿಚ್ಚ ಮಾತನ್ನು ಬೇರೆ ಕಡೆಗೆ ಹೊರಳಿಸಿದರು.

ಇದನ್ನೂ ಓದಿ-Bigg Boss 10 Elimination: ಇಂದು ಮನೆಯಿಂದ ಹೊರ ಹೋದವರು ಇವರೇ..!

ಮನೆಯೊಳಗಿನ ವಿದ್ಯಮಾನಗಳ ಕುರಿತು ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡರು. ಮನೆಯೊಳಗೆ ಬಂದ ಲಾರ್ಡ್‌ ಪ್ರಥಮ್‌ ಅವರಿಗೆ ಪೂರ್ತಿಯಾಗಿ ಸೆರೆಂಡರ್ ಆದ ಬಗ್ಗೆ ಪ್ರಶ್ನಿಸಿದರು. ಬಿಗ್‌ಬಾಸ್‌ ಯಾವುದೇ ಸೂಚನೆಯನ್ನೂ ಕೊಡದೇ ನೀವೆಲ್ಲ ಯಾಕೆ ಅವರು ಹೇಳಿದ್ದನ್ನೆಲ್ಲ ಮಾಡಿದಿರಿ? ಅವರನ್ನು ಒಪ್ಪಿಕೊಂಡಿರಿ? ಎಂಬ ಕಿಚ್ಚನ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಲ್ಲ. 

ಈ ಮನೆಯಲ್ಲಿ ಊಸರವಳ್ಳಿ ಯಾರು? ವಿಷಕಾರಿ ಯಾರು? ಡಿಪ್ಲೊಮೆಟಿಕ್ ಯಾರು? ಇನೋಸೆಂಟ್ ಯಾರು? ಎಂಬೆಲ್ಲ ಪ್ರಶ್ನೆಗಳು ಕಿಚ್ಚನ ಬಾಯಿಯಿಂದ ಬಂತು. ಅದಕ್ಕೆ ಗೌರೀಶ್, ತನಿಷಾ, ಸಂಗೀತಾ ಎಲ್ಲರೂ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳಿದರು. ಈ ಮಧ್ಯೆ ತನಿಷಾ ಮತ್ತು ಭಾಗ್ಯಶ್ರೀ ಅವರ ನಡುವೆ ಸಣ್ಣ ಕಿಡಿಯೂ ಹೊತ್ತಿಕೊಂಡಿತು.

ನಂತರ ಮಾತು ಡ್ರೋಣ್ ಪ್ರತಾಪ್ ಅವರ ಬಗ್ಗೆ ಹೊರಳಿತು. ಸುದೀಪ್ ಈ ಮಾತುಕತೆ ಶುರುಮಾಡಿದ್ದು ಒಂದು ಕಥೆಯ ಜೊತೆಗೆ. ‘ಒಬ್ಬ ತಪ್ಪಿತಸ್ಥ ತಪ್ಪು ಮಾಡಿದಾನೆ. ಭಗವಂತ ಅವನಿಗೆ ಶಿಕ್ಷೆ ಕೊಟ್ಟು ನಂತರ ಕ್ಷಮಿಸುತ್ತಾನೆ. ಆದರೆ ತಪ್ಪಿತಸ್ಥ ಹೊರಗೆ ಹೋದಮೇಲೆ ಸಮಾಜ ಅವನನ್ನು ಕಳ್ಳ ಸುಳ್ಳ ಎಂದೇ ಗುರ್ತಿಸುತ್ತದೆ. ಭಗವಂತ ಕ್ಷಮಿಸಿದವನ್ನು ಸಮಾಜ ದೂಷಿಸುತ್ತದೆ. ಅದೊಂದು ರೀತಿಯ ವ್ಯಕ್ತಿಯ ಕೊಲೆ.’ ಇದು ಕಥೆ. ಕಥೆ ಹೇಳಿಯಷ್ಟೇ ಅವರು ಸುಮ್ಮನಾಗಲಿಲ್ಲ.

‘ಈ ಕಥೆಯಲ್ಲಿ ಭಗವಂತ ಯಾರು? ತಪ್ಪಿತಸ್ಥ ಯಾರು? ಸಮಾಜ ಯಾರು?’ ಎಂಬ ಪ್ರಶ್ನೆ ಕಿಚ್ಚನ ಬಾಯಿಯಿಂದ ಹೊರಬೀಳುತ್ತಿದ್ದಂತೆಯೇ ಸ್ಪರ್ಧಿಗಳಿಗೆ ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿದುಬಿಟ್ಟಿತ್ತು. 

ಕಿಚ್ಚ ಈ ಕಥೆಯನ್ನು ಹೇಳಿದ್ದು ಡ್ರೋಣ್ ಪ್ರತಾಪ್ ವಿಷಯಕ್ಕೆ. ಅವರ ಬಗ್ಗೆ ವಾರವಿಡೀ, ಸಮಯ ಸಿಕ್ಕಾಗೆಲ್ಲ, ಅವಕಾಶವಾದಾಗಲೆಲ್ಲ ಆಡಿಕೊಂಡು ನಗುತ್ತಿದ್ದ, ವ್ಯಂಗ್ಯ ಮಾಡುತ್ತಿದ್ದ ತುಕಾಲಿ ಸಂತೋಷ್ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡರು.

‘ಒಬ್ಬ ವ್ಯಕ್ತಿಯನ್ನು ಆಡಿಕೊಂಡು ಉಳಿದವರನ್ನು ನಗಿಸುವ ವ್ಯಕ್ತಿ, ಗುಡ್ ಜೋಕರ್ ಅಲ್ಲ, ಬ್ಯಾಟ್‌ಮನ್ ಜೋಕರ್!’ ಎಂದು ಎಚ್ಚರಿಸಿದರು ಕೂಡ. ‘ಪ್ರತಿಯೊಬ್ಬ ವ್ಯಕ್ತಿಯೊಳಗೂ ಅವನ ಸತ್ಯ ಅವನ ನೋವು ಅವನಲ್ಲಿ ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಆದರೆ ಕನಿಷ್ಠ ನಾವು ಮಾಡಬಹುದು ಸುಮ್ಮನಿರುವುದು. ತಪ್ಪು ಮಾಡಿದ ವ್ಯಕ್ತಿ ಶಿಕ್ಷ ಅನುಭವಿಸುತ್ತಾನೆ. ಆದರೆ ಆ ಶಿಕ್ಷೆ ನೀಡುವುದಕ್ಕೆ ನೀವ್ಯಾರು? ಇನ್ನೊಬ್ಬ ವ್ಯಕ್ತಿಯನ್ನು ತಮಾಷೆ ಮಾಡಿ ಬೇರೆಯವರನ್ನು ನಗಿಸುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ಅಳು ಹೇಗೆ ನಗುವಾಗುತ್ತದೆ?’

ಕಿಚ್ಚ ಒಂದರ ಹಿಂದೊಂದು ಪ್ರಶ್ನೆ ಕೇಳುತ್ತಿದ್ದ ಹಾಗೆಯೇ ತುಕಾಲಿ ಸಂತೋಷ್ ಮುಖದಲ್ಲಿ ಪಶ್ಚಾತ್ತಾಪ ಕಾಣಿಸಿಕೊಂಡಿತು. ಡ್ರೋಣ್ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಕಾಲಿ ಅವರು ಸುದೀಪ್ ಎದುರಿನಲ್ಲಿಯೇ ಪ್ರತಾಪ್‌ಗೆ ಕ್ಷಮೆಯನ್ನೂ ಕೇಳಿದರು.

ಇದನ್ನೂ ಓದಿ-BBK 10: ಡ್ರೋನ್ ಪ್ರತಾಪ್‌ನ ಹಿಯ್ಯಾಳಿಸಿದ ತುಕಾಲಿ ಸಂತುಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್‌!

ಕೊನೆಯಲ್ಲಿ, ‘ಒಳ್ಳೆಯ ರೀತಿಯಿಂದಲೇ ಎಲ್ಲರನ್ನೂ ನಗಿಸಬಹುದು. ಅದನ್ನು ನೀವು ಚೆನ್ನಾಗಿಯೇ ಮಾಡುತ್ತೀರಿ. ಅದನ್ನು ಮುಂದುವರಿಸಿ. ಆದರೆ ಇನ್ನೊಬ್ಬ ವ್ಯಕ್ತಿಯನ್ನು ಎದುರಿಟ್ಟುಕೊಂಡು, ಅವರನ್ನು ತಮಾಷೆ ಮಾಡಿಕೊಂಡು ಉಳಿದ ಹತ್ತು ವ್ಯಕ್ತಿಗಳನ್ನು ನಗಿಸುವುದರಲ್ಲಿ ಯಾವ ದೊಡ್ಡತನವೂ ಇಲ್ಲ’ ಎಂಬ ಹಿತವಚನವನ್ನೂ ಹೇಳಿದರು. ನಂತರ ಪ್ರತಾಪ್‌ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.

‘ಮೊದಲ ದಿನ ಬಂದಾಗ ನನ್ನ ಮನಸಲ್ಲಿ ಏನೂ ಇರಲಿಲ್ಲ. ಆದರೆ ಎಲ್ಲರೂ ಒಟ್ಟಿಗೇ ಸೇರಿದಾಗ ನನ್ನನ್ನು ನಾನು ನಿರೂಪಿಸಿಕೊಳ್ಳಬೇಕು ಎಂದು ಅನಿಸಿತು’ ಎಂದರು ಪ್ರತಾಪ್. ‘ನಮ್ಮ ತಪ್ಪುಗಳು ನಮಗೆ ಮಾತ್ರ ಗೊತ್ತಿರುತ್ತದೆ. ನಿಮ್ಮ ಒಳಗಡೆ ಒಂದು ಕಾನ್ಪ್ಲಿಕ್ಟ್ ಇರಬಹುದು ಅದನ್ನು ಸರಿಯಾಗಿ ಫೇಸ್ ಮಾಡಿ. ಆ ಧೈರ್ಯ ನಿಮಗೆ ಸಿಗಲಿ. ಅದು ನಿಮಗೆ ಬಿಗ್‌ಬಾಸ್ ಮನೆಯೊಳಗೆ ಸಿಗಲಿ’ ಎಂದು ಕಿಚ್ಚ, ಪ್ರತಾಪ್‌ಗೆ ಕಿವಿಮಾತು ಹೇಳಿದರು.

ಸಮರ್ಥರು-ಅಸಮರ್ಥರ ಗುಂಪಿನಿಂದ ಇನ್ನೂ ನಾಮಿನೇಷನ್‌ ಪಟ್ಟಿಯಲ್ಲಿ ಇದ್ದವರು ಮೈಕಲ್, ಕಾರ್ತಿಕ್ ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಿಷ್ಟು ಸ್ಪರ್ಧಿಗಳು. ಇವರಲ್ಲಿ ಯಾರು ಮೊದಲು ಸೇಫ್‌ ಆಗಬೇಕು ಎಂಬ ಕಿಚ್ಚನ ಪ್ರಶ್ನೆಗೆ ಸ್ಪರ್ಧಿಗಳು ಉತ್ತರಿಸಿದರು. ಹಲವರು ಪ್ರತಾಪ್ ಸೇಫ್ ಆಗಬೇಕು ಎಂದು ಆಶಿಸಿದರು. ಆದರೆ ಜನರ ನಿರ್ಧಾರ ಬೇರೆಯೇ ಆಗಿತ್ತು. ಆಗ ಕಿಚ್ಚ ಈ ಎಪಿಸೋಡ್‌ನಲ್ಲಿ ಸೇವ್ ಆಗುತ್ತಿರುವ ಇನ್ನೊಬ್ಬ ಸ್ಪರ್ಧಿಯನ್ನೂ ಘೋಷಿಸಿದರು. ಅವರು ಸೇಫ್ ಮಾಡಿದ್ದು ಕಾರ್ತೀಕ್ ಅವರನ್ನು.

“ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲ ಸೇಫ್‌? ಯಾರು ಮನೆಯಿಂದ ಹೊರಬೀಳುತ್ತಾರೆ? ಎನ್ನುವುದನ್ನು ನೋಡಲು ನಾಳೆಯ ಸಂಚಿಕೆಯವರೆಗೆ ಕಾಯಿರಿ. ಎಪಿಸೋಡ್ ನೋಡಕ್ಕಾಗ್ದೆ ಇರೋರು JioCinema ಆಪ್‌ನಲ್ಲಿ ಫ್ರೀಯಾಗಿ ನೋಡಿ, 24 ಗಂಟೆ ನೇರಪ್ರಸಾರವನ್ನೂ ನೋಡಿ’ ಎಂದು ಹೇಳಿ ಕಿಚ್ಚ, ಬಿಗ್‌ಬಾಸ್‌ ಕನ್ನಡ ಸೀಸನ್ 10 ಮೊದಲ ಶನಿವಾರದ ಎಪಿಸೋಡ್ ಮುಗಿಸಿದರು. ಆದರೆ ಇದು ಅಲ್ಪವಿರಾಮವಷ್ಟೆ. ಭಾನುವಾರದ ಎಪಿಸೋಡ್‌ ಇನ್ನಷ್ಟು ರೋಚಕವಾಗಿರಲಿದೆ ಎಂಬುದರ ಸೂಚನೆಯಂತೂ ಈ ಎಪಿಸೋಡ್‌ನಲ್ಲಿಯೇ ಕಾಣಿಸಿಕೊಂಡಿದೆ. 

https://www.jiocinema.com/videos/first-panchayati-with-kichcha-sudeep/38...
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಶನಿವಾರ-ಭಾನುವಾರದ ವೀಕೆಂಡ್‌ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News