ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ನಲ್ಲೂ ಸಲಾರ್‌-ಡಂಕಿ ಪೈಪೋಟಿ..! ಪ್ರಾರಂಭದಲ್ಲೇ ಗೆದ್ದವರು ಯಾರು..? 

Salaar Vs Dunki advance booking : ಡುಂಕಿ ಮತ್ತು ಸಲಾರ್‌ ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿವೆ. ಶುರುವಿನಲ್ಲೇ ಶಾರುಖ್‌ ಮತ್ತು ಪ್ರಭಾಸ್‌ ಸಿನಿಮಾಗಳ ನಡುವೆ ಫೈಪೋಟಿ ಸ್ಟಾರ್ಟ್‌ ಆಗಿದೆ. ಹಾಗಿದ್ರೆ ಆನ್‌ಲೈನ್‌ ಟಿಕೆಟ್‌ ಸೆಲ್‌ ಪ್ರಾರಂಭವಾದಾಗಿನಿಂದ ಯಾವ ಸಿನಿಮಾ ಅತೀ ಹೆಚ್ಚು ಕಲೆಕ್ಷನ್‌ ಮಾಡಿದೆ.. ಅಂತ ನೋಡೋಣ ಬನ್ನಿ..

Written by - Krishna N K | Last Updated : Dec 17, 2023, 03:44 PM IST
  • ಡುಂಕಿ ಮತ್ತು ಸಲಾರ್‌ ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿವೆ.
  • ಶಾರುಖ್‌ ನಟನೆಯ ಡಂಕಿ ಸಿನಿಮಾ ಡಿಸೆಂಬರ್ 21 ತೆರೆ ಕಾಣಲಿದೆ.
  • ಡಿಸೆಂಬರ್ 22 ರಂದು ಪ್ರಭಾಸ್ ಅಭಿನಯದ ಸಲಾರ್ ರಿಲೀಸ್‌ ಆಗಲಿದೆ.
ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ನಲ್ಲೂ ಸಲಾರ್‌-ಡಂಕಿ ಪೈಪೋಟಿ..! ಪ್ರಾರಂಭದಲ್ಲೇ ಗೆದ್ದವರು ಯಾರು..?  title=

Salaar Vs Dunki : ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಡಂಕಿ ಸಿನಿಮಾ ಡಿಸೆಂಬರ್ 21 ತೆರೆ ಕಾಣಲಿದೆ. ಡಿಸೆಂಬರ್ 22 ರಂದು ಪ್ರಭಾಸ್ ಅಭಿನಯದ ಸಲಾರ್ ರಿಲೀಸ್‌ ಆಗಲಿದ್ದು, ಸ್ಟಾರ್‌ ವಾರ್‌ ಘರ್ಷಣೆಗೆ ಸಾಕ್ಷಿಯಾಗಲಿವೆ. ಇತ್ತೀಚಿಗೆ ಈ ಎರಡೂ ಚಿತ್ರಗಳ ಮುಂಗಡ ಬುಕ್ಕಿಂಗ್ ತೆರೆಯಲಾಗಿದ್ದು, ಅಭಿಮಾನಿಗಳು ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಲು ಶುರು ಮಾಡಿದ್ದಾರೆ.

ರಾಜ್‌ಕುಮಾರ್ ಹಿರಾನಿಯವರ ಚಿತ್ರ ಡಂಕಿ ಯಲ್ಲಿ, ಎಸ್‌ಆರ್‌ಕೆ ಜೊತೆ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡ ನಟಿಸಿದ್ದಾರೆ. ಆದರೆ ಪ್ರಶಾಂತ್ ನೀಲ್‌ ಸಲಾರ್‌ನಲ್ಲಿ ಪ್ರಭಾಸ್‌ ಜೊತೆ ಶೃತಿ ಹಾಸನ್‌, ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಾಡಪ್ರಭು ಕೆಂಪೇಗೌಡರಿಗೆ ಅವಮಾನ: ನಟ ಚೇತನ್‌ ಅಹಿಂಸಾ ವಿರುದ್ದ FIR ದಾಖಲು!

ಡುಂಕಿ Vs ಸಲಾರ್ ಬುಕ್ಕಿಂಗ್‌ ವಾರ್‌ : ಶಾರುಖ್ ಖಾನ್ ಸಿನಿಮಾ ಡಂಕಿಗೆ ಪ್ರಭಾಸ್‌ ಸಲಾರ್‌ ಸಿನಿಮಾ ಕಠಿಣ ಸ್ಪರ್ಧೆ ನೀಡುತ್ತಿದೆ. ಈಗಾಗಲೇ ಎಸ್‌ಆರ್‌ಕೆ ಚಿತ್ರ 2.08 ಕೋಟಿ ಗಳಿಕೆಯನ್ನು ಗಳಿಸಿದ್ದರೆ, ಪ್ರಭಾಸ್' ಆರಂಭಿಕ ದಿನದಲ್ಲಿಯೇ 2.01 ಕೋಟಿ ಗಳಿಕೆ ಕಂಡಿದೆ.

ಡಂಕಿ ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಮೊದಲ ಸಿನಿಮಾ. ಈ ಸಿನಿಮಾದ ಮುಂಗಡ ಟಿಕೆಟ್ ಮಾರಾಟ ಶನಿವಾರದಂದು ಪ್ರಾರಂಭವಾಯಿತು. ಕೇವಲ ಒಂದು ದಿನದಲ್ಲಿ ಅವರು 2.08 ಕೋಟಿ ಗಳಿಸಿದೆ. ಪ್ರಸ್ತುತ, ಹಿಂದಿ ಪ್ರದರ್ಶನಗಳು ಮಾತ್ರ ಮುಂಗಡ ಬುಕಿಂಗ್‌ಗೆ ಪ್ರಾರಂಭವಾಗಿದೆ.  ಟ್ರ್ಯಾಕಿಂಗ್ ವೆಬ್‌ಸೈಟ್ ಪ್ರಕಾರ ಡಂಕಿ 63, 464 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. 

ಇದನ್ನೂ ಓದಿ:ಐಶ್ವರ್ಯಾ ರೈ ಅಭಿಷೇಕ್​ ಬಚ್ಚನ್ ಗಿಂತ ಎಷ್ಟು ವರ್ಷ ದೊಡ್ಡವರು ಗೊತ್ತೇ!

ಸಲಾರ್‌ ಮುಂಗಡ ಬುಕ್ಕಿಂಗ್‌ ಪ್ರಾರಂಭವಾದ ಒಂದೇ ದಿನದಲ್ಲಿ ಸುಮಾರು 2.01 ಕೋಟಿ ರೂಪಾಯಿ ಗಳಿಕೆ ಕಂಡಿದೆ. ತೆಲುಗು 1.27 ಕೋಟಿ ರೂ., ಮಲಯಾಳಂ 41.65 ಲಕ್ಷ, ತಮಿಳು ರೂ. 2.83 ಲಕ್ಷ, ಮತ್ತು ಕನ್ನಡದಲ್ಲಿ 3.28 ಲಕ್ಷ ರೂ. ಗಳಿಸಿದೆ. ಹಿಂದಿಯಲ್ಲಿ 951 ಶೋಗಳಿಗೆ 8125 ಟಿಕೆಟ್ಸ್‌ ಮಾರಾಟವಾಗಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News