ಕೊನೆಗೂ ವಿಚ್ಛೇದನದ ಕಾರಣ ಬಿಚ್ಚಿಟ್ಟ ಸಮಂತಾ... ಚೈತನ್ಯ ಜೊತೆ ಬ್ರೇಕ್ ಅಪ್ ಆಗಲು ಕಾರಣ ಇದೇನಾ?

Samantha Divorce Reason: ನಾಗ ಚೈತನ್ಯ-ಸಮಂತಾ ವಿಚ್ಛೇದನ ಪಡೆದು ಎರಡು ವರ್ಷಗಳು ಕಳೆದಿವೆ. ಆದರೆ ಇವರಿಬ್ಬರ ಪ್ರತ್ಯೇಕತೆಯ ಹಿಂದಿನ ನಿಜವಾದ ಕಾರಣ ಇನ್ನೂ ಯಾರಿಗೂ ತಿಳಿದಿಲ್ಲ. ಮೊನ್ನೆಯಷ್ಟೇ ಸಮಂತಾ ಈ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.   

Written by - Savita M B | Last Updated : Feb 19, 2024, 08:32 PM IST
  • ಸಮಂತಾ-ನಾಗ ಚೈತನ್ಯ ಯಾಕೆ ಬೇರ್ಪಟ್ಟರು ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದುಕೊಂಡಿದೆ
  • ಅಕ್ಟೋಬರ್ 2021 ರಲ್ಲಿ ಸ್ಯಾಮ್‌-ಚೈ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದರು.
  • ಇದಾದ ನಂತರ ಸಮಂತಾ ಅವರನ್ನೇ ಗುರಿಯಾಗಿಸಿಕೊಂಡು ಹಲವು ವದಂತಿಗಳು ಮತ್ತು ಊಹಾಪೋಹಗಳು ಹುಟ್ಟಿಕೊಂಡಿದ್ದವು..
ಕೊನೆಗೂ ವಿಚ್ಛೇದನದ ಕಾರಣ ಬಿಚ್ಚಿಟ್ಟ ಸಮಂತಾ... ಚೈತನ್ಯ ಜೊತೆ ಬ್ರೇಕ್ ಅಪ್ ಆಗಲು ಕಾರಣ ಇದೇನಾ?  title=

Samantha-Nag Chaitanya Divorce Reason: ಸಮಂತಾ-ನಾಗ ಚೈತನ್ಯ ಯಾಕೆ ಬೇರ್ಪಟ್ಟರು ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದುಕೊಂಡಿದೆ... ಅಕ್ಟೋಬರ್ 2021 ರಲ್ಲಿ ಸ್ಯಾಮ್‌-ಚೈ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದರು. ಇದಾದ ನಂತರ ಸಮಂತಾ ಅವರನ್ನೇ ಗುರಿಯಾಗಿಸಿಕೊಂಡು ಹಲವು ವದಂತಿಗಳು ಮತ್ತು ಊಹಾಪೋಹಗಳು ಹುಟ್ಟಿಕೊಂಡಿದ್ದವು..

ಮದುವೆಯ ನಂತರವೂ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಇಚ್ಛಿಸಿದ್ದ ಕಾರಣ ನಾಗ ಚೈತನ್ಯ ಸಮಂತಾಗೆ ವಿಚ್ಛೇದನ ನೀಡಿದ್ದಾರೆ.. ಅಲ್ಲದೆ, ಸಮಂತಾಗೆ ಮಕ್ಕಳು ಎಂದರೇ ಇಷ್ಟವಿಲ್ಲ, ಆಕೆ ತನ್ನ ಪರ್ಸನಲ್ ಸ್ಟೈಲಿಸ್ಟ್ ಪ್ರೀತಮ್ ಜುಕಾಲ್ಕರ್ ಜೊತೆ ಸಂಬಂಧ ಹೊಂದಿದ್ದಳು ಎಂಬ ಊಹಾಪೋಹ ವರದಿಗಳು ಬಂದಿದ್ದವು. 

ಇದನ್ನೂ ಓದಿ-Sangeetha Bhat: ಗಂಗೂಬಾಯಿ ಕಥಿಯಾವಾಡಿಯಂತೆ ಕ್ಲಾಂತ ಸುಂದರಿ ಹಾಟ್‌ ಫೋಟೋಶೂಟ್‌!

ಈ ರೀತಿ ಹರಡಿದ್ದ ವದಂತಿಗಳಿಗೆ ಸಮಂತಾ ಬ್ರೇಕ್‌ ಹಾಕಿದ್ದರು.. ಜೊತೆಗೆ ಕಾನೂನು ಕ್ರಮವನ್ನೂ ಕೈಗೊಳ್ಳುವಂತೆ ಮಾಡಿದ್ದರು..  ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.. ನ್ಯಾಯಾಲಯದ ಆದೇಶದಂತೆ ಚಾನೆಲ್‌ಗಳು ಸಮಂತಾ ವೈಯಕ್ತಿಕ ವಿಚಾರವನ್ನು ತೆಗೆದುಹಾಕಿದ್ದವು.. 

ಇನ್ನು ನಟಿ ಸಮಂತಾ ವಿಚ್ಛೇದನದ ಒತ್ತಡದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ... ಹಲವು ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಸ್ಯಾಮ್‌ ಆ ನೋವಿನಿಂದ ನಿಧಾನವಾಗಿ ಚೇತರಿಸಿಕೊಂಡು ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಾರೆ.. ವಿಚ್ಛೇದನದ ನಂತರ ಸಮಂತಾ ಯಶೋದಾ, ಶಾಕುಂತಲಂ, ಖುಷಿ ಚಿತ್ರಗಳಲ್ಲಿ ನಟಿಸಿದ್ದರು. ಸದ್ಯ ಸಿಟಾಡೆಲ್ ಹೆಸರಿನ ವೆಬ್‌ ಸಿರೀಸ್‌ನಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.. 

ಇದನ್ನೂ ಓದಿ-Sangeetha Bhat: ಗಂಗೂಬಾಯಿ ಕಥಿಯಾವಾಡಿಯಂತೆ ಕ್ಲಾಂತ ಸುಂದರಿ ಹಾಟ್‌ ಫೋಟೋಶೂಟ್‌!

ಇದೆಲ್ಲದರ ಮಧ್ಯೆ ಸಮಂತಾ ವಿಚ್ಛೇದನದ ನಿರ್ಧಾರದ ಹಿಂದೆ ಒಂದು ಹುಡುಗಿಯ ಕೈವಾಡವಿದೆ ಎಂಬ ಅನುಮಾನಗಳು ಹೊಸದಾಗಿ ಪ್ರಾರಂಭವಾಗಿವೆ.. ಇದಕ್ಕೆ ಕಾರಣ ಸಮಂತಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್... ಏನಿದೆ ಆ ಪೋಸ್ಟ್‌ನಲ್ಲಿ ಅಂತೀರಾ? ಇಲ್ಲಿದೆ ಉತ್ತರ.. 

ಮಲೇಷ್ಯಾದಲ್ಲಿರುವ ಮೇಘನಾ ಎಂಬ ಸ್ನೇಹಿತೆ ಜೊತೆಗಿನ ಫೋಟೋವನ್ನು ಸ್ಯಾಮ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.. ಆ ಪೋಸ್ಟ್‌ಗೆ ಕುತೂಹಲಕಾರಿ ಕ್ಯಾಪ್ಷನ್ ನೀಡಿದ್ದಾರೆ... "ನನ್ನ ಎಲ್ಲಾ ಒಳ್ಳೆಯ ನಿರ್ಧಾರಗಳಿಗೆ ಕಾರಣ.. ಮೇಘನಾ" ಎಂದು ಬರೆದುಕೊಂಡಿದ್ದಾರೆ.. ಸ್ಯಾಮ್‌ ಜೀವನದಲ್ಲಿ ಮೇಘನಾ ಎಷ್ಟು ಮುಖ್ಯ ವ್ಯಕ್ತಿ ಎನ್ನುವುದನ್ನು ಹೇಳಿಕೊಂಡಿದ್ದಾರೆ,.. ಹಾಗಾಗಿ ಸಮಂತಾಗೆ ವಿಚ್ಛೇದನ ನೀಡುವಲ್ಲಿ ಮೇಘನಾ ಸಲಹೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. ಅಲ್ಲದೇ ಮೇಘನಾ ಅನುಮತಿ ಮೇರೆಗೆ  ಸಮಂತಾ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News