Shaakuntalam Trailer : ಸಮಂತಾ ʼಶಕುಂತಲಾʼ ಟ್ರೇಲರ್‌ ಅದ್ಭುತ, ಅಲ್ಲು ಅರ್ಜುನ್‌ ಮಗಳ ಎಂಟ್ರಿ ಸೂಪರ್‌..!

ನಟಿ ಸಮಂತಾ ಅಭಿನಯದ ಬಹುನಿರೀಕ್ಷಿತ ಚಿತ್ರ ʼಶಾಕುಂತಲಂʼ ಟ್ರೇಲರ್‌ ಬಿಡುಗಡೆಯಾಗಿದೆ. ಅದ್ಭುತ ದೃಶ್ಯಗಳ ಜೊತೆಗೆ ಅಮೋಘ ಪ್ರೇಮಕಥೆಯ ಮೊದಲ ನೋಟ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ದುಷ್ಯಂತ ಶಕುಂತಲೆಯ ಪ್ರೇಮಕಥೆ, ಭರತನ ಜನ್ಮ ರಹಸ್ಯ, ಮಹಾಭಾರತ ಕಥೆಯನ್ನು ಓದಿದವರಿಗೆ ʼಶಾಕುಂತಲʼ ಸಿನಿಮಾ ಬಹುಬೇಗ ಅರ್ಥವಾಗುತ್ತದೆ. ಇದೀಗ ಮಹಾಕಾವ್ಯವನ್ನು ಓದದ ಜನರಿಗೂ ಶಾಕುಂತಲೆಯ ಪ್ರೇಮಕಥೆಯನ್ನು ಈ ಸಿನಿಮಾ ಹೇಳಲು ಹೊರಟಿದೆ.

Written by - Krishna N K | Last Updated : Jan 9, 2023, 01:59 PM IST
  • ನಟಿ ಸಮಂತಾ ಅಭಿನಯದ ಬಹುನಿರೀಕ್ಷಿತ ಚಿತ್ರ ʼಶಾಕುಂತಲಂʼ ಟ್ರೇಲರ್‌ ಬಿಡುಗಡೆ
  • ಅದ್ಭುತ ದೃಶ್ಯಗಳ ಜೊತೆಗೆ ಅಮೋಘ ಪ್ರೇಮಕಥೆಯ ಮೊದಲ ನೋಟ ಸೂಪರ್‌
  • ಸಿಂಹದ ಮೇಲೆ ಕುಳಿತು ಎಂಟ್ರಿ ಕೊಡುವ ಅರ್ಹ ಪ್ರೇಕ್ಷಕರಿಗೆ ಸರ್ಪ್ರೈಸ್
Shaakuntalam Trailer : ಸಮಂತಾ ʼಶಕುಂತಲಾʼ ಟ್ರೇಲರ್‌ ಅದ್ಭುತ, ಅಲ್ಲು ಅರ್ಜುನ್‌ ಮಗಳ ಎಂಟ್ರಿ ಸೂಪರ್‌..! title=

Shaakuntalam Trailer : ನಟಿ ಸಮಂತಾ ಅಭಿನಯದ ಬಹುನಿರೀಕ್ಷಿತ ಚಿತ್ರ ʼಶಾಕುಂತಲಂʼ ಟ್ರೇಲರ್‌ ಬಿಡುಗಡೆಯಾಗಿದೆ. ಅದ್ಭುತ ದೃಶ್ಯಗಳ ಜೊತೆಗೆ ಅಮೋಘ ಪ್ರೇಮಕಥೆಯ ಮೊದಲ ನೋಟ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ದುಷ್ಯಂತ ಶಕುಂತಲೆಯ ಪ್ರೇಮಕಥೆ, ಭರತನ ಜನ್ಮ ರಹಸ್ಯ, ಮಹಾಭಾರತ ಕಥೆಯನ್ನು ಓದಿದವರಿಗೆ ʼಶಾಕುಂತಲʼ ಸಿನಿಮಾ ಬಹುಬೇಗ ಅರ್ಥವಾಗುತ್ತದೆ. ಇದೀಗ ಮಹಾಕಾವ್ಯವನ್ನು ಓದದ ಜನರಿಗೂ ಶಾಕುಂತಲೆಯ ಪ್ರೇಮಕಥೆಯನ್ನು ಈ ಸಿನಿಮಾ ಹೇಳಲು ಹೊರಟಿದೆ.

ನಿರ್ದೇಶಕ ಗುಣಶೇಖರ್ ʼಶಕುಂತಲಾʼ ಪ್ರೇಮಕಥೆಯನ್ನು ತೆರೆಯ ಮೇಲೆ ಅನಾವರಣಗೊಳಿಸಲು ಪ್ರಯತ್ನಿಸಿದ್ದು, ಇದರ ಭಾಗವಾಗಿಯೇ ಸಮಂತಾ ಜೊತೆ ಶಾಕುಂತಲಂ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಕೊನೆಗೂ ಈ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಈ ಟ್ರೈಲರ್‌ನಲ್ಲಿರುವ ದೃಶ್ಯಗಳು ಅದ್ಭುತವಾಗಿವೆ. ಮಣಿ ಶರ್ಮಾ ಅವರ ಸಂಗೀತ ಮನಸೆಳೆಯುವಂತಿದೆ. ಆಕ್ಷನ್ ಸೀಕ್ವೆನ್ಸ್ ಮತ್ತು ದೃಶ್ಯಗಳು ಕೂಡ ಅದ್ಭುತವಾಗಿವೆ. ಕೊನೆಗೆ ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಪುತ್ರಿ ಅಲ್ಲು ಅರ್ಹ ಎಂಟ್ರಿಯೇ ಪ್ರೇಕ್ಷಕರು ಸಿಳ್ಳೆ ಹೊಡೆಯೊದಂತು ಶತಸಿದ್ಧ. ಸಿಂಹದ ಮೇಲೆ ಕುಳಿತು ಎಂಟ್ರಿ ಕೊಡುವ ಅರ್ಹ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುತ್ತದೆ.

ಇದನ್ನೂ ಓದಿ: Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!

 

ಪೋಷಕರಿಗೆ ಬೇಡವಾದ ಭೂಮಿಯ ಮೇಲಿನ ಮೊದಲ ಮಗು ಎಂಬ ಡೈಲಾಗ ನೊಂದಿಗೆ ಆರಂಭವಾಗುವ ಟ್ರೇಲರ್‌ನಲ್ಲಿ ಶಕುಂತಲಾ ಹುಟ್ಟಿದ್ದು ಮಹತ್ತರ ಕಾರಣಕ್ಕೆ.. ಹೊಸ ನಾಗರಿಕತೆಯ ಈಕೆಯ ಹುಟ್ಟು ನಾಂದಿಯಾಗಲಿದೆ ಎಂದು ಸಿನಿಮಾದ ಮೂಲ ಪಾತ್ರಗಳನ್ನು ಪರಿಚಯವಾಗುತ್ತದೆ. ದೇವ್ ಮೋಹನ್ ದುಶ್ಯಂತ್ ಮತ್ತು ಮೋಹನ್ ಬಾಬು ದೂರ್ವಾಸ ಮಹರ್ಷಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ದೃಶ್ಯಗಳ ಗ್ರಾಫಿಕ್ಸ್ ಸ್ವಲ್ಪಮಟ್ಟಿಗೆ ಆಹ್ಲಾದಕರವಾಗಿರುತ್ತದೆ.

ಆದರೆ ಗ್ರಾಫಿಕ್ಸ್‌ನಲ್ಲಿ ಮೂಡಿರುವ ಬರುವ ಕಾನನದ ದೃಶ್ಯಗಳು ನಿಜವೇ ಎಂಬುವಂತಿವೆ. ಸಮಂತಾ ಥೇಟ್‌ ಶಕುಂತಲೆಯಾಗಿ ಕಂಗೊಳಿಸಿದ್ದಾರೆ. ಅಲ್ಲು ಅರ್ಹ ಎಂಟ್ರಿ ಜೊತೆ ಟ್ರೇಲರ್‌ ಮುಗಿಯುತ್ತದೆ. ಮಣಿಶರ್ಮಾ ತಮಗೆ ನೀಡಿದ್ದ ಬಜೆಟ್‌ನಲ್ಲಿ ಶಾಕುಂತಲೆಯನ್ನು ಅದ್ಭುತವಾಗಿ ತೋರಿಸಿದ್ದಾರೆ. ಎರಡ್ಮೂರು ಸೆಟ್‌ನಲ್ಲಿಯೇ ಎಲ್ಲವನ್ನೂ ನಿರ್ಮಿಸಿದ್ದಾರೆ. ಸಿನಿಮಾಗೆ ಸ್ವತಃ ಸಮಂತಾ ಧ್ವನಿ ನೀಡಿದ್ದು, ಅಷ್ಟೊಂದು ಎಫೆಕ್ಟಿವ್‌ ಆಗಿಲ್ಲ ಅಂತ ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಸಮಂತಾ ಲುಕ್ ಮಾತ್ರ ಹೊಸದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News