Gandhada Gudi: ‘ಗಂಧದಗುಡಿ’ ಟ್ರೇಲರ್ ನೋಡಿ ‘ಅಪ್ಪು’ ಕೊಂಡಾಡಿದ ಪ್ರಧಾನಿ ಮೋದಿ

2021ರ ಅಕ್ಟೋಬರ್ 29ರಂದು ನಟ ಪುನೀತ್ ರಾಜಕುಮಾರ್ ನಿಧನ ಹೊಂದಿದ್ದರು. ಇದೇ ಕಾರಣ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ.

Written by - Puttaraj K Alur | Last Updated : Oct 9, 2022, 12:11 PM IST
  • ಬಹುನಿರೀಕ್ಷಿತ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆ
  • ನಟ ಪವರ್‍ಸ್ಟಾರ್ ಪುನೀತ್‍ರಾಜಕುಮಾರ್‍ರನ್ನು ಕೊಂಡಾಡಿದ ಪ್ರಧಾನಿ ಮೋದಿ
  • ಯೂಟ್ಯೂಬ್‍ನಲ್ಲಿ ಬಿಡುಗಡೆಯಾದ ಗಂಟೆಯಲ್ಲೇ 5 ಲಕ್ಷ ಜನರಿಂದ ಟ್ರೈಲರ್ ವೀಕ್ಷಣೆ
Gandhada Gudi: ‘ಗಂಧದಗುಡಿ’ ಟ್ರೇಲರ್ ನೋಡಿ ‘ಅಪ್ಪು’ ಕೊಂಡಾಡಿದ ಪ್ರಧಾನಿ ಮೋದಿ title=
‘ಗಂಧದ ಗುಡಿ’ ಟ್ರೈಲರ್ ಬಿಡುಗಡೆ

ಬೆಂಗಳೂರು: ಕರ್ನಾಟಕ ರತ್ನ, ಪವರ್​ಸ್ಟಾರ್ ಡಾ.ಪುನೀತ್ ರಾಜ್​ಕುಮಾರ್ ಅವರ ಕನಸಿನ ಕೂಸು ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಯೂಟ್ಯೂಬ್‍ನಲ್ಲಿ ರಿಲೀಸ್ ಆದ ಕೇವಲ ಒಂದೇ ಗಂಟೆಗಳಲ್ಲಿ ಈ ಟ್ರೈಲರ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಕರ್ನಾಟಕದ ಅಭಯಾರಣ್ಯ, ನದಿ, ತೊರೆ, ಬೆಟ್ಟ-ಗುಡ್ಡಗಳು ಮತ್ತು ಪ್ರಾಣಿಸಂಕುಲವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ‘ಕರ್ನಾಟಕದ ಕಾಡು ಉಳಿಸಿ’ ಎಂಬ ವರನಟ ಡಾ. ರಾಜಕುಮಾರ್ ಅವರ ಸಂದೇಶದ ಮರುಜನ್ಮವೇ ಹೊಸ ‘ಗಂಧದ ಗುಡಿ’ಯ ಸಾರಾಂಶವಾಗಿದೆ.

ಇದನ್ನೂ ಓದಿ: ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿ ʼರೇಮೊʼ ನ. 25ರಂದು ಬಿಡುಗಡೆ

ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಸಾಕ್ಷ್ಯಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ವೈಲ್ಡ್ ಕರ್ನಾಟಕ ಖ್ಯಾತಿಯ ಅಮೋಘವರ್ಷ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಅದ್ಭುತ ಛಾಯಾಗ್ರಹಣವು ನೀವೂ ಸಹ ‘ಗಂಧದ ಗುಡಿ’ಯಲ್ಲಿ ಪ್ರಯಾಣಿಸಿದ ಅನುಭವ ನೀಡುತ್ತದೆ.

‘ಗಂಧದ ಗುಡಿ’ ಮೆಚ್ಚಿಕೊಂಡ ಪ್ರಧಾನಿ ಮೋದಿ  

ಇನ್ನೂ ಬಹುನಿರೀಕ್ಷಿತ ‘ಗಂಧದ ಗುಡಿ’ ಟ್ರೈಲರ್ ಅನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಟ ಪುನೀತ್ ರಾಜಕುಮಾರ್ ಅವರನ್ನು ಮನಸಾರೆ ಕೊಂಡಾಡಿದ್ದಾರೆ. ‘ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು. ತುಂಬಾ ಎನರ್ಜೆಟಿಕ್ ಆಗಿದ್ದ ಪುನೀತ್ ರಾಜಕುಮಾರ್ ತಮ್ಮ ಅಪ್ರತಿಮ ಪ್ರತಿಭೆಯಿಂದ ಖ್ಯಾತಿ ಗಳಿಸಿದ್ದರು. #ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂದ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು’ ಅಂತಾ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲಾರಿಗೂ ನಾನು ಆಪ್‌ ಇಡ್ತಿದ್ದೆ ಇವಾಗ ಎಲ್ರೂ ನನಗೆ ಆಪ್‌ ಇಟ್ರು..!

2021ರ ಅಕ್ಟೋಬರ್ 29ರಂದು ನಟ ಪುನೀತ್ ರಾಕುಕುಮಾರ್ ನಿಧನ ಹೊಂದಿದ್ದರು. ಇದೇ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ವಿಶೇಷ ಅಂದ್ರೆ ‘ಗಂಧದ ಗುಡಿ’ ಡಾಕ್ಯುಮೆಂಟರಿಯನ್ನು ‘ಅಪ್ಪು’ ಆಸೆಯಂತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News