ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ : ʼಗಂಧದಗುಡಿʼ ನೋಡಿ ಭಾವುಕರಾದ ರಿಷಬ್‌ ಶೆಟ್ಟಿ

ಬಹುನಿರೀಕ್ಷಿತ ಗಂಧದ ಗುಡಿ ಟ್ರೈಲರ್ ಇಂದು ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಅವರನ್ನು ತೆರೆಯ ಮೇಲೆ ನೋಡಿ ತುಂಬಾ ಖುಷಿಯಾಗಿದ್ದಾರೆ. ಇನ್ನು, ಟ್ರೈಲರ್‌ ನೋಡಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ ಎಂದು ಭಾವುಕರಾಗಿ ಗಂಧದಗುಡಿಯ ಬಗ್ಗೆ ಹಾಡಿ ಹೊಗಳಿದ್ದಾರೆ.

Written by - Krishna N K | Last Updated : Oct 9, 2022, 12:54 PM IST
  • ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ʼಗಂಧದಗುಡಿʼ ನೋಡಿ ಭಾವುಕರಾದ ರಿಷಬ್‌ ಶೆಟ್ಟಿ
  • ತಮ್ಮ ಟ್ವಿಟರ್‌ ಖಾತೆಯಲ್ಲಿ ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ ಎಂದು ಭಾವನಾತ್ಮಕ ಬರೆದುಕೊಂಡಿದ್ದಾರೆ
  • ಅರಣ್ಯದ ದೃಶ್ಯ ಕಾವ್ಯ ಗಂಧದಗುಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ : ʼಗಂಧದಗುಡಿʼ ನೋಡಿ ಭಾವುಕರಾದ ರಿಷಬ್‌ ಶೆಟ್ಟಿ title=

GG - Gandhada Gudi : ಬಹುನಿರೀಕ್ಷಿತ ಗಂಧದ ಗುಡಿ ಟ್ರೈಲರ್ ಇಂದು ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಅವರನ್ನು ತೆರೆಯ ಮೇಲೆ ನೋಡಿ ತುಂಬಾ ಖುಷಿಯಾಗಿದ್ದಾರೆ. ಇನ್ನು, ಟ್ರೈಲರ್‌ ನೋಡಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ ಎಂದು ಭಾವುಕರಾಗಿ ಗಂಧದಗುಡಿಯ ಬಗ್ಗೆ ಹಾಡಿ ಹೊಗಳಿದ್ದಾರೆ.

ಪಿಆರ್​ಕೆ ಆಡಿಯೋ ಯೂಟ್ಯೂಬ್‌ನಲ್ಲಿ ಗಂಧದಗುಡಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಟ್ರೈಲರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯದ ಚಿತ್ರರಂಗದ ದಿಗ್ಗಜನಟರು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ಡ್ರೀಮ್​ ಪ್ರಾಜೆಕ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರಿಷಬ್‌ ಶೆಟ್ಟಿಯವರು ತಮ್ಮ ಟ್ವಿಟರ್‌ ಖಾತೆಯಲ್ಲಿ ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Gandhada Gudi: ‘ಗಂಧದಗುಡಿ’ ಟ್ರೇಲರ್ ನೋಡಿ ‘ಅಪ್ಪು’ ಕೊಂಡಾಡಿದ ಪ್ರಧಾನಿ ಮೋದಿ

ವೈಲ್ಡ್ ಲೈಫ್ ಜಗತ್ತಿನ ಕಥೆಯ ಅನಾವರಣವೇ ಗಂಧದಗುಡಿ. ಈ ಹಿಂದೆ ಚಿತ್ರದ ಟೀಸರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಅರಣ್ಯದ ದೃಶ್ಯ ವೈಭವ, ಧುಮ್ಮಿಕ್ಕುವ ಜಲಪಾತಗಳು, ಬೆಟ್ಟಗಳು, ನದಿಗಳು, ಬಾನೆತ್ತರದಿ ಬೆಳೆದು ನಿಂತ ವನಸಿರಿಯನ್ನು ಅಪ್ಪು ದೃಶ್ಯ ಕಾವ್ಯ ರೀತಿಯಲ್ಲಿ ತೆರೆ ಮೇಲೆ ತಂದಿದ್ದಾರೆ. ಲಾಕ್‌ಡೌನ್‌ ಟೈಮ್‌ನಲ್ಲಿ ಹುಟ್ಟಿದ ಗಂಧದಗುಡಿಗೆ ಅಪ್ಪು ಅವರು ಅವಿರತ ಶ್ರಮವಹಿಸಿದ್ದಾರೆ. 

ರಾಜಧಾನಿ ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ ಗಂಧದಗುಡಿ ಟ್ರೈಲರ್‌ ಬಿಡುಗಡೆ ಮಾಡಲಾಯಿತು. ತೆರೆ ಮೇಲೆ ಅಪ್ಪು ಕಂಡ ರಾಘವೇಂದ್ರ ರಾಜ್‍ಕುಮಾರ್‌ ಸೇರಿದಂತೆ ಅಲ್ಲಿದ್ದವರ ಕಣ್ಣುಗಳು ಒದ್ದೆ ಆಗಿದ್ದವು. ಟ್ರೈಲರ್ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News