ʼವೀರ ಕನ್ನಡಿಗʼ ಖ್ಯಾತಿಯ ನಟ ಸಯಾಜಿ ಶಿಂಧೆಗೆ ಹೃದಯಾಘಾತ..! ಆತಂಕದಲ್ಲಿ ಅಭಿಮಾನಿಗಳು

Sayaji Shinde : ಬಹುಭಾಷಾ ನಟ ಸಯಾಜಿ ಶಿಂಧೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಹುತಾಹುಟಿ ಸಮೀಪದ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಶಿಂಧೆ ಶೀಘ್ರವೇ ಗುಣಮುಖರಾಗಿಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Written by - Krishna N K | Last Updated : Apr 12, 2024, 03:18 PM IST
    • ನಟ ಸಯಾಜಿ ಶಿಂಧೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲು
    • ಶಿಂಧೆ ಶೀಘ್ರವೇ ಗುಣಮುಖರಾಗಿಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
    • ವೈದ್ಯರು ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳಲ್ಲಿ ಬ್ಲಾಕ್‌ಗಳಿರುವುದಾಗಿ ತಿಳಿಸಿದ್ದಾರೆ.
ʼವೀರ ಕನ್ನಡಿಗʼ ಖ್ಯಾತಿಯ ನಟ ಸಯಾಜಿ ಶಿಂಧೆಗೆ ಹೃದಯಾಘಾತ..! ಆತಂಕದಲ್ಲಿ ಅಭಿಮಾನಿಗಳು title=

Sayaji Shinde hospitalized : ಹಿರಿಯ ನಟ ಸಯಾಜಿ ಶಿಂಧೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಹುತಾಹುಟಿನ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳಲ್ಲಿ ಬ್ಲಾಕ್‌ ಇರುವುದಾಗಿ ತಿಳಿಸಿದ್ದಾರೆ.

ಸಧ್ಯ ಶಿಂಧೆಯವರಿಗೆ ವೈದ್ಯರು ಆಂಜಿಯೋಪ್ಲಾಸ್ಟಿ ಕೂಡ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಈ ಹಿಂದೆ ಒಮ್ಮೆ ಅವರಿಗೆ ಹೃದಯಾಘಾತವಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಇವರೇ ನೋಡಿ 2024ರ ಲೋಕಸಭೆಗೆ BJP ಯಿಂದ ಸ್ಪರ್ಧಿಸುತ್ತಿರುವ ಸ್ಟಾರ್‌ ನಟಿಯರು..!

ಇನ್ನು ಶಾಯಾಜಿ ಶಿಂಧೆಯವರ ಬಗ್ಗೆ ಹೇಳುವುದಾದರೆ.. ಇವರು ಮರಾಠಿ ರಂಗನಟರಾಗಿ ಸಿನಿ ಲೋಕಕ್ಕೆ ಕಾಲಿಟ್ಟರು. ಅದರಲ್ಲೂ ಏಕಪಾತ್ರಾಭಿನಯದಲ್ಲಿ ಅವರ ನಟನೆಗೆ ಒಳ್ಳೆಯ ಹೆಸರು ಬಂತು. ಮರಾಠಿ ರಂಗನಟರಾಗಿದ್ದ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹಿಂದಿ ಚಿತ್ರಗಳಲ್ಲಿ. ಅವರು 1990 ರಲ್ಲಿ 'ದಿಶಾ' ಚಿತ್ರದ ಮೂಲಕ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 

ಇದಲ್ಲದೆ, ಬಹುಭಾಷ ನಟರಾಗಿ ಗುರುತಿಸಿಕೊಂಡಿರುವ ಶಾಯಾಜಿಯವರು, ಕನ್ನಡ, ತೆಲುಗು, ಮರಾಠಿ, ಭೋಜಪುರಿ, ಮಲಯಾಳಂ, ಇಂಗ್ಲಿಷ್‌, ಗುಜರಾತಿ, ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಯಾವುದೇ ಭಾಷೆಯ ಸಿನಿಮಾವಿರಲಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್‌ ಮಾಡುತ್ತಿದ್ದರು.

ಇದನ್ನೂ ಓದಿ:'ರಾಮಾಯಣ'ಕ್ಕೆ ರಾಕಿಭಾಯ್ ಪ್ರೊಡ್ಯೂಸರ್...! ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿದ ಯಶ್

ಶಾಯಾಜಿಯವರು 1991 ರಲ್ಲಿ ಪತಿತ ಪಾವನಿ ಎಂಬ ಸಿನಿಮಾ ಮೂಲಕ ಕನ್ನಡ ಸಿನಿಲೋಕಕ್ಕೆ ಕಾಲಿಟ್ಟರು. ವೀರ ಕನ್ನಡಿಗ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಶಿಂಧೆ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಫೇಮಸ್‌ ಆದರು. 13ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಶಿಂಧೆ ಕನ್ನಡಿಗರಿಗೂ ಚಿರಪರಿಚಿತರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News