ʼಬಾತ್ ರೂಂನಲ್ಲಿಯೂ ಸೀಕ್ರೆಟ್ ಮೈಕ್, ಕ್ಯಾಮರಾ...ʼ ಬಿಗ್ ಬಾಸ್ ಮನೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಖ್ಯಾತ ಸ್ಪರ್ಧಿ!

Bigg Boss: ಬಿಗ್ ಬಾಸ್ ಮನೆಯ ರಹಸ್ಯ ಬಯಲಾಗಿದೆ... ಬಾತ್ರೂಮ್ನಲ್ಲಿಯೂ ಹಿಡನ್ ಕ್ಯಾಮೆರಾಗಳಿವೆ, ಎಲ್ಲೆಡೆ ಅದೃಶ್ಯ ಕ್ಯಾಮೆರಾಗಳು. ಸ್ಪರ್ಧಿಗಳು ಹೇಳುವುದೆಲ್ಲ.. ಮಾಡುವುದೆಲ್ಲ ಬಿಗ್‌ಬಾಸ್‌ಗೆ ಗೊತ್ತಾಗುತ್ತೆ ಎನ್ನುವ ಶಾಕಿಂಗ್ ಮ್ಯಾಟರ್‌ನ್ನು ಮಾಜಿ ಸ್ಪರ್ಧಿಯೊಬ್ಬರು ಲೀಕ್ ಮಾಡಿದ್ದಾರೆ.   

Written by - Savita M B | Last Updated : Jul 22, 2024, 06:20 PM IST
  • ಜುಲೈ 21 ರಂದು ಬಿಗ್ ಬಾಸ್ ಸೀಸನ್ 8 ರ ಲೋಗೋ ಬಿಡುಗಡೆಯಾಗಿದೆ.
  • ಅಂತ್ಯವಿಲ್ಲದ ಮನರಂಜನೆ ಇರುತ್ತದೆ ಎಂದು ನಾಗಾರ್ಜುನ ಮಾಹಿತಿ ನೀಡಿದ್ದಾರೆ..
ʼಬಾತ್ ರೂಂನಲ್ಲಿಯೂ ಸೀಕ್ರೆಟ್ ಮೈಕ್, ಕ್ಯಾಮರಾ...ʼ ಬಿಗ್ ಬಾಸ್ ಮನೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಖ್ಯಾತ ಸ್ಪರ್ಧಿ! title=

Bigg Boss House Secret: ಜುಲೈ 21 ರಂದು ಬಿಗ್ ಬಾಸ್ ಸೀಸನ್ 8 ರ ಲೋಗೋ ಬಿಡುಗಡೆಯಾಗಿದೆ. ನಾಗಾರ್ಜುನ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚಿನ ಸೀಸನ್ ಲೋಗೋದೊಂದಿಗೆ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ನಿಮ್ಮನ್ನು ಮತ್ತೆ ರಂಜಿಸಲು ನಾವು ಹಿಂತಿರುಗಿದ್ದೇವೆ. ಬಿಗ್ ಬಾಸ್ ತೆಲುಗು 8 ಲೋಗೋವನ್ನು ಪ್ರಸ್ತುತಪಡಿಸಲಾಗುತ್ತಿದೆ. ಬಿಗ್ ಬಾಸ್ 8 ರಲ್ಲಿ ನಿಮಗೆ ಅಂತ್ಯವಿಲ್ಲದ ಮನರಂಜನೆ ಇರುತ್ತದೆ ಎಂದು ನಾಗಾರ್ಜುನ ಮಾಹಿತಿ ನೀಡಿದ್ದಾರೆ.. 

ಸೀಸನ್ 6 ರ ಸ್ಪರ್ಧಿ ಆದಿ ರೆಡ್ಡಿ ಇತ್ತೀಚಿನ ವೀಡಿಯೊದಲ್ಲಿ ಬಿಗ್ ಬಾಸ್ ಮನೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆ ಮನೆಗೆ ಸಂಬಂಧಿಸಿದ ನಮಗೆ ಗೊತ್ತಿಲ್ಲದ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ..

ಇದನ್ನೂ ಓದಿ-ಮಹೇಶ್ ಬಾಬು ಮಗಳು ಸಿತಾರಾ... ಈಗ ಯಾವ ತರಗತಿ ಓದುತ್ತಿದ್ದಾಳೆ ಗೊತ್ತಾ?

ಆದಿ ರೆಡ್ಡಿ ಪ್ರಕಾರ, ಬಿಗ್ ಬಾಸ್ ಮನೆಯ ನಿರ್ಮಾಣ ಕಾರ್ಯಕ್ರಮ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಪೂರ್ಣಗೊಳ್ಳುತ್ತದೆ. ಈ ತಿಂಗಳಲ್ಲಿ ಮನೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು. ಬಿಗ್ ಬಾಸ್ ಮನೆಯಲ್ಲಿ ಎಲ್ಲೆಂದರಲ್ಲಿ ಸೀಕ್ರೆಟ್ ಮೈಕ್ ಮತ್ತು ಕ್ಯಾಮೆರಾಗಳು ಇರುತ್ತವೆ ಎಂಬುದು ನಮಗೆ ಇಲ್ಲಿಯವರೆಗೆ ತಿಳಿದಿರಲಿಲ್ಲ.. ಇದೀಗ ನನಗೆ ಬಂದಿರುವ ಮಾಹಿತಿಯ ಪ್ರಕಾರ ಬಿಗ್ ಬಾಸ್ ಮನೆಯ ಬಾತ್ ರೂಂನಲ್ಲಿ ರಹಸ್ಯ ಮೈಕ್ ಗಳು.. ಕ್ಯಾಮರಾಗಳಿವೆ.. ಸ್ಪರ್ಧಿಗಳು ಸ್ನಾನಗೃಹಕ್ಕೆ ಹೋಗುವ ಮೊದಲು ಮೈಕ್ ಅನ್ನು ಹೊರಗೆ ಬಿಡುತ್ತಾರೆ. ಅಲ್ಲಿ ಏನೇ ಹೇಳಿದ್ರೂ ಬಿಗ್ ಬಾಸ್ ಮ್ಯಾನೇಜರ್ ಗಳು ಕೇಳೋದಿಲ್ಲ ಅಂತ ಅಂದುಕೊಂಡ್ರೆ ತಪ್ಪು. ಬಾತ್ ರೂಂನಲ್ಲಿ ಮಾತನಾಡಿದರೂ ಸೀಕ್ರೆಟ್ ಮೈಕ್ ಗಳ ಮೂಲಕ ಕೇಳಲಾಗುತ್ತೆ.. ಮತ್ತು ಕ್ಯಾಮೆರಾ ಮೂಲಕ ನೋಡಲಾಗುತ್ತದೆ ಎಂದಿದ್ದಾರೆ.. 

ಇದನ್ನೂ ಓದಿ-ʼನನಗೆ ಇದು ಎರಡನೇ ಮದುವೆ..ʼ ಮದುವೆ ವದಂತಿ ಮಧ್ಯವೇ ಸೆನ್ಸೇಷನಲ್‌ ಹೇಳಿಕೆ ಕೊಟ್ಟ ಆಂಕರ್ ಅನುಶ್ರೀ! ‌

 ಆದಿರೆಡ್ಡಿ ಹೇಳಿದ ಈ ವಿಷಯಗಳು ಇದೀಗ ಸಂಚಲನ ಮೂಡಿಸುತ್ತಿವೆ. ಬಿಗ್ ಬಾಸ್ ಮನೆಯ ವಿನ್ಯಾಸ ಸ್ಪರ್ಧಿಗಳ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಬಹು ಬಣ್ಣದ ಮನೆ ನಿಮಗೆ ಬೇಸರ ಮತ್ತು ಅಸಹನೆಯನ್ನುಂಟು ಮಾಡುತ್ತದೆ ಎಂಬ ವಾದವಿದೆ. 

ಇನ್ನು ಮೂರ್ನಾಲ್ಕು ವಾರಗಳಲ್ಲಿ ಬಿಗ್ ಬಾಸ್ ತೆಲುಗು 8 ಶುರುವಾಗುವ ಸೂಚನೆಗಳಿವೆ. ಮೊದಲ ಪ್ರೋಮೋ ಬಿಡುಗಡೆಯಾಗಿರುವ ಹಿನ್ನಲೆಯಲ್ಲಿ... ಎಲ್ಲವೂ ಸಿದ್ಧವಾಗುತ್ತಿದೆ ಎಂದುಕೊಳ್ಳಬಹುದು. ನಾಗಾರ್ಜುನ ಸತತ ಆರನೇ ಸೀಸನ್‌ಗೆ ಹೋಸ್ಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News