ಪಬ್ಜಿ ಲವರ್‌ಗಾಗಿ ಪಾಕ್‌ನಿಂದ ಬಂದಿದ್ದ ಸೀಮಾ ಈಗ ನಟಿ..! 6 ಲಕ್ಷ ಸಂಭಾವನೆ

A Taylor Murder Story : PUBG ಲವರ್‌ಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಈಗ ಸಿನಿಮಾದಲ್ಲಿ ನಟಿಸಲಿದ್ದಾರೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಏಜೆಂಟ್ ಎಂಬ ಆರೋಪ ಹೊತ್ತಿರುವ ಸೀಮಾ ಇದೀಗ ಚಿತ್ರವೊಂದರಲ್ಲಿ ರಾ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

Written by - Krishna N K | Last Updated : Aug 3, 2023, 07:57 PM IST
  • ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಈಗ ಸಿನಿಮಾದಲ್ಲಿ ನಟಿಸಲಿದ್ದಾರೆ.
  • ಸೀಮಾ ಇದೀಗ ಚಿತ್ರವೊಂದರಲ್ಲಿ ರಾ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.
  • ಪಬ್ಜಿ ಗೇಮ್‌ ಮೂಲಕ ಪರಿಚಯವಾದ ಭಾರತೀಯ ಯುವಕನ್ನು ಲವ್‌ ಮಾಡಿದ್ದ ಸೀಮಾ.
ಪಬ್ಜಿ ಲವರ್‌ಗಾಗಿ ಪಾಕ್‌ನಿಂದ ಬಂದಿದ್ದ ಸೀಮಾ ಈಗ ನಟಿ..! 6 ಲಕ್ಷ ಸಂಭಾವನೆ title=

Seema Hider : ಪಬ್ಜಿ ಗೇಮ್‌ ಮೂಲಕ ಪರಿಚಯವಾದ ಯುವಕನ್ನು ಲವ್‌ ಮಾಡಿ ಅವನೊಂದಿಗೆ ವಾಸಿಸಲು ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಈಗ ಸಿನಿಮಾದಲ್ಲಿ ನಟಿಸಲಿದ್ದಾರೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಏಜೆಂಟ್ ಎಂಬ ಆರೋಪ ಹೊತ್ತಿರುವ ಸೀಮಾ ಇದೀಗ ಚಿತ್ರವೊಂದರಲ್ಲಿ ರಾ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಹೌದು.. 30 ವರ್ಷದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಗಡಿ ದಾಟಿ ಭಾರತಕ್ಕೆ ಬಂದಿದ್ದು PUBG ಆಡುವಾಗ ಪ್ರೀತಿಸಿದ ಯುವಕನನ್ನು ಮದುವೆಯಾಗಲು. ಕಳೆದ ಮೇ ತಿಂಗಳಿನಿಂದ ಸೀಮಾ ಹೈದರ್ ಭಾರತ ಮತ್ತು ಪಾಕಿಸ್ತಾನದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಆಕೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಏಜೆಂಟ್ ಎಂಬ ಆರೋಪವನ್ನೂ ಎದುರಿಸುತ್ತಿದ್ದಾಳೆ.

ಇದನ್ನೂ ಓದಿ:  ವಿವಾದ ಸೃಷ್ಟಿಸುವುದಾ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸುವ ʻಒಎಂಜಿ 2’ ಸಿನಿಮಾ?

ʼಎ ಟೇಲರ್ ಮರ್ಡರ್ ಸ್ಟೋರಿʼ ಚಿತ್ರಕ್ಕಾಗಿ ಸೀಮಾ ಹೈದರ್ ಆಡಿಷನ್ ಮಾಡಿದ್ದಾರೆ ಎಂಬ ವರದಿಗಳಿವೆ. ಚಿತ್ರವು ಉದಯಪುರದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಿಸಿದೆ. ಇದರಲ್ಲಿ ಅವರಿಗೆ ಸೀಮಾಗೆ ರಾ ಅಧಿಕಾರಿಯ ಪಾತ್ರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಚಿತ್ರವನ್ನು ಜಾನಿ ಫೈರ್‌ಫಾಕ್ಸ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಆಡಿಷನ್ ನಡೆಸಿದ್ದರು. ಆದರೆ ಚಿತ್ರದಲ್ಲಿ ನಟಿಸಲು ಇನ್ನೂ ಒಪ್ಪಿಕೊಂಡಿಲ್ಲ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಕ್ಲೀನ್ ಚಿಟ್ ಸಿಕ್ಕ ನಂತರವಷ್ಟೇ ಸೀಮಾ ಸಿನಿಮಾದಲ್ಲಿ ನಟಿಸಲು ಸಾಧ್ಯ.

ಇದನ್ನೂ ಓದಿ: ತನ್ನ ಫೇವರಿಟ್ ನಟನ ಜೊತೆ ನಟಿಸುವ ಚಾನ್ಸ್‌ ಗಿಟ್ಟಿಸಿಕೊಂಡ ʼಬೇಬಿʼ ವೈಷ್ಣವಿ..! ಯಾರು ಆ ಹೀರೋ..

ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್ ಅವರನ್ನು ಹಾಡಹಗಲೇ ಇಬ್ಬರು ವ್ಯಕ್ತಿಗಳು ಕೊಂದಿದ್ದಾರೆ. ಕನಯ್ಯಲಾಲ್ ಅವರ ಪತ್ನಿ ಮತ್ತು ಮಗ ಸಿನಿಮಾ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ನಿರ್ಮಾಪಕ ಅಮಿತ್ ಜಾನಿಗೆ ತಿಳಿಸಿದ್ದಾರೆ.

ಜಾನಿ ಅವರು ಸೀಮಾ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು. ಸೀಮಾ ಜಾನಿಯವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈಗ ಚಿತ್ರ ನಿರ್ಮಾಪಕರು ಭಯೋತ್ಪಾದನಾ ನಿಗ್ರಹ ಪಡೆಯ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಎ ಟೇಲರ್ ಮರ್ಡರ್ ಸ್ಟೋರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ 25 ರಿಂದ 30 ಕೋಟಿ ರೂಪಾಯಿ ವೆಚ್ಚ ತಗುಲಲಿದೆಯಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News