ಅಭಿಮಾನಿಗಳೊಂದಿಗೆ "ಜವಾನ್"‌ ಚಿತ್ರದ ಯಶಸ್ಸನ್ನು ಆಚರಿಸಿದ ಶಾರುಖ್‌ ಖಾನ್‌...ವಿಡಿಯೋ ವೈರಲ್‌!!

Jawan: ಶಾರುಖ್‌ ಖಾನ್‌ ಬಾಲಿವುಡ್‌ನ ಕಿಂಗ್‌ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪಠಾಣ್‌ ನಂತರ ಜವಾನ್‌ದೊಂದಿಗೆ ಭರ್ಜರಿಯಾಗಿ ಎಂಟ್ರಿಕೊಟ್ಟ ಕಿಂಗ್‌ಖಾನ್‌ ಸದ್ಯ ಚಿತ್ರದ ಸಕ್ಸಸ್‌ ಖುಷಿಯಲ್ಲಿದ್ದು, ಆ ಸಂಭ್ರಮವನ್ನು ಫ್ಯಾನ್ಸ್‌ ಜೊತೆ ಆಚರಿಸಿದ್ದಾರೆ.   

Written by - Savita M B | Last Updated : Sep 18, 2023, 08:17 AM IST
  • ಜವಾನ್‌ ಸಿನಿಮಾ ಸದ್ಯ ಬಾಕ್ಸಾಫಿಸ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ
  • ಜೊತೆಗೆ ಈ ಚಿತ್ರವು ಶಾರುಕ್ ಅವರ ಸ್ಟಾರ್‌ಡಮ್ ಅನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
  • ಸದ್ಯ ಶಾರುಖ್‌ ಅಭಿಮಾನಿಗಳೊಂದಿಗೆ ಯಶಸ್ಸನ್ನು ಆಚರಿಸಿದ್ದಾರೆ
ಅಭಿಮಾನಿಗಳೊಂದಿಗೆ "ಜವಾನ್"‌ ಚಿತ್ರದ ಯಶಸ್ಸನ್ನು ಆಚರಿಸಿದ ಶಾರುಖ್‌ ಖಾನ್‌...ವಿಡಿಯೋ ವೈರಲ್‌!! title=

Jawan Viral Vdeo: ಶಾರುಖ್‌ ಹಾಗೂ ಅಟ್ಲೀ ಕಾಂಬಿನೇಷನ್‌ನ ಜವಾನ್‌ ಸಿನಿಮಾ ಸದ್ಯ ಬಾಕ್ಸಾಫಿಸ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ. ಜೊತೆಗೆ ಈ ಚಿತ್ರವು ಶಾರುಕ್ ಅವರ ಸ್ಟಾರ್‌ಡಮ್ ಅನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಸದ್ಯ ಜವಾನ್‌ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಕಿಂಗ್‌ಖಾನ್‌ ಭಾನುವಾರದಂದು ತಮ್ಮ ನಿವಾಸದ ಬಳಿ ಅಭಿಮಾನಿಗಳೊಂದಿಗೆ ಯಶಸ್ಸನ್ನು ಆಚರಿಸಿದ್ದಾರೆ. ಇದೀಗ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಇನ್ನು ಈ ವೈರಲ್‌ ಆಗುತ್ತಿರುವ ವಿಡಿಯೋಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ. 

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ಇದನ್ನೂ ಓದಿ-Mouni Roy: ಶೈನಿಂಗ್‌ ಬಟ್ಟೆ ಧರಿಸಿ ಸ್ಟನ್ನಿಂಗ್‌ ಲುಕ್‌ ಕೊಟ್ಟ ಮೌನಿ...ಪೋಟೋಸ್‌ ನೋಡಿ

ಇನ್ನು ಈ ಬಹನಿರೀಕ್ಷಿತ ಜವಾನ್‌ ಚಿತ್ರ ಭಾರತದಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸದ್ಯ 10 ದಿನ ಪೊರೈಸಿರುವ ಜವಾನ್‌ ಸಿನಿಮಾ 700 ಕೋಟಿಗಿಂತಲೂ ಹೆಚ್ಚು ಗಳಿಸಿ ಬಾಕ್ಸಾಫಿಸ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. 

ಬಹುಮುಖ ತಾರಾಬಳಗದಿಂದ ಗಮನ ಸೆಳೆದ ಈ ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಮತ್ತು ನಯನತಾರಾ ಇಬ್ಬರೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ-ದುಲ್ಕರ್ ಸಲ್ಮಾನ್ ನಟನೆಯ ʼಕಿಂಗ್ ಆಫ್ ಕೋಥಾʼ OTT ಎಂಟ್ರಿಗೆ ಡೇಟ್‌ ಫಿಕ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News