Jawan Controversy: ವಿವಾದ ಸೃಷ್ಟಿಸಿದ ಶಾರುಖ್ ಖಾನ್ ಅವರ ಈ ಡೈಲಾಗ್..!

Jawan Controversy: ಜವಾನ್ ಚಿತ್ರದಲ್ಲಿನ ಈ ಡೈಲಾಗ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಜವಾನ್ ಚಿತ್ರದ ಟ್ರೇಲರ್ ನಲ್ಲಿನ ಡೈಲಾಗ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಶುರುವಾಗಿದೆ. 

Written by - Chetana Devarmani | Last Updated : Aug 31, 2023, 08:48 PM IST
  • ಜವಾನ್‌ ಸಿನಿಮಾದ ಟ್ರೇಲರ್‌ ರಿಲೀಸ್‌
  • ವಿವಾದ ಸೃಷ್ಟಿಸಿದ ಶಾರುಖ್ ಡೈಲಾಗ್
  • ಈ ಮಾತನ್ನು ಶಾರುಖ್‌ ಹೇಳಿದ್ದು ಯಾರಿಗೆ?
Jawan Controversy: ವಿವಾದ ಸೃಷ್ಟಿಸಿದ ಶಾರುಖ್ ಖಾನ್ ಅವರ ಈ ಡೈಲಾಗ್..!   title=
Jawan Controversy

Shah Rukh Khan Dialogues: ಇಂದು ಬಿಡುಗಡೆಯಾಗಿರುವ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಟ್ರೇಲರ್ ನಲ್ಲಿನ ಡೈಲಾಗ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಶುರುವಾಗಿದೆ. ಟ್ರೇಲರ್ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದರೂ, ಹಲವರು ಅದರ ಒಂದು ಡೈಲಾಗ್‌ನ ಮೇಲೆ ಇದು ನಿಜವಾಗಿಯೂ ಚಿತ್ರದ ಸಂಭಾಷಣೆಯೇ ಅಥವಾ ಅದರ ನೆಪದಲ್ಲಿ ಯಾರನ್ನಾದರೂ ಟಾರ್ಗೆಟ್ ಮಾಡಲಾಗಿದೆಯೇ ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಟ್ರೇಲರ್‌ನಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಪಾತ್ರ ತಂದೆಯದ್ದು ಮತ್ತು ಇನ್ನೊಂದು ಮಗನದ್ದು. "ಮಗನನ್ನು ಮುಟ್ಟುವ ಮೊದಲು, ತಂದೆಯೊಂದಿಗೆ ಮಾತನಾಡಿ.." ಎಂದು ಟ್ರೇಲರ್‌ನಲ್ಲಿ ಶಾರುಖ್‌ ಹೇಳುವ ಒಂದು ಡೈಲಾಗ್ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.  

ಇದನ್ನೂ ಓದಿ: ಜೈಲರ್ ಸಿನಿಮಾ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌!!

ಜನರು ತಮ್ಮದೇ ಆದ ರೀತಿಯಲ್ಲಿ ಈ ಡೈಲಾಗ್ ಅನ್ನು ಊಹಿಸುತ್ತಿದ್ದಾರೆ. ಶಾರುಖ್ ಅವರ ಈ ಸಂಭಾಷಣೆಯು ಎನ್‌ಸಿಬಿ ಮಾಜಿ ಮುಖ್ಯಸ್ಥ ಸಮೀರ್ ವಾಂಖೆಡೆ ಅವನ್ನು ಟಾರ್ಗೆಟ್‌ ಮಾಡಿರಬಹುದು ಎಂದು ಹಲವರು ಊಹಿಸುತ್ತಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ವಾಂಖೆಡೆ ಅವರು ಶಾರುಖ್ ಪುತ್ರ ಆರ್ಯನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ತಮ್ಮ ನಾಯಕನ ಈ ಡೈಲಾಗ್‌ಗೂ ವಾಂಖೆಡೆಗೂ ಸಂಬಂಧವಿದೆ ಎಂದು ಶಾರುಖ್ ಅಭಿಮಾನಿಗಳು ಊಹಿಸುತ್ತಿದ್ದಾರೆ. ಅಕ್ಟೋಬರ್ 2022 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ವಾಂಖೆಡೆ ಬಂಧಿಸಿದ್ದರು ಎಂಬುದು ಗಮನಾರ್ಹ. ಆದರೆ ಬಳಿಕ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಆದರೆ ವಿಷಯ ಇನ್ನೂ ಮುಗಿದಿಲ್ಲ. ಈ ಪ್ರಕರಣದಲ್ಲಿ ಶಾರುಖ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ವಾಂಖೆಡೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ.

ಕ್ರೂಸ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್‌ ಪುತ್ರ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರೂ, ಅವರು ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ಜವಾನ್‌ನ ಸಂಪೂರ್ಣ ಟ್ರೇಲರ್ ಸಂಪೂರ್ಣ ಆಕ್ಷನ್‌ನಿಂದ ಕೂಡಿದೆ ಮತ್ತು ಕೆಲವು ಸ್ಥಳಗಳಲ್ಲಿ ಶಾರುಖ್ ಕಾಮಿಕ್ ಶೈಲಿಯಲ್ಲಿದ್ದಾರೆ. ಆದರೆ ಈ ಡೈಲಾಗ್ ಇಡೀ ಟ್ರೇಲರ್ ನಲ್ಲೇ ಜನರ ಗಮನಕ್ಕೆ ಬಂದಿದ್ದು, ಈಗ ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಶಾರುಖ್ ತನ್ನನ್ನು ವಿರೋಧಿಸುವ ಮತ್ತು ತನ್ನ ಮಗನನ್ನು ಕಷ್ಟಕ್ಕೆ ಸಿಲುಕಿಸುವವರಿಗೆ ಈ ಡೈಲಾಗ್ ಮೂಲಕ ಪರೋಕ್ಷ ಸಂದೇಶವನ್ನು ನೀಡಿದ್ದಾರೆ ಎಂದು ಕೆಲವರು ರಾಜಕೀಯ ಅರ್ಥದಲ್ಲಿ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಣ್ಮನ ಸೆಳೆಯುತಿದೆ ಕೋಟಿಗೊಬ್ಬ-3 ಚೆಲುವೆಯ ಹಾಟ್‌ ಲುಕ್..ಪೋಟೋಸ್‌ ನೋಡಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News