ಕ್ರೇಜಿಸ್ಟಾರ್‌ ಮನೆಯಲ್ಲಿ ಕಿಚ್ಚ, ದಚ್ಚು.! ಎಲ್ಲೆಡೆ ವೈರಲ್‌ ಆದ ಸೆಲ್ಫಿ

Darshan Sudeep Selfie : ಇತ್ತೀಚೆಗಷ್ಟೆ ದಚ್ಚು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿತ್ತು. ದರ್ಶನ್‌ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಕಿಚ್ಚ ಸುದೀಪ್‌ ಕಟುವಾಗಿ ಖಂಡಿಸಿದ್ದರು. ಸ್ಯಾಂಡಲ್‌ವುಡ್‌ನ ಕುಚಿಕುಗಳು ಮತ್ತೆ ಒಂದಾಗೋದನ್ನು ನೋಡುವುದಕ್ಕೆ ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಇದು ಸಂತೋಷ ತಂದಿತ್ತು. 

Written by - Chetana Devarmani | Last Updated : Jan 6, 2023, 07:14 PM IST
  • ದಚ್ಚು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ
  • ದರ್ಶನ್‌, ಸುದೀಪ್‌ ಮತ್ತು ರವಿಚಂದ್ರನ್‌ ಮೂವರು ಇರುವ ಸೆಲ್ಫಿ
  • ಕ್ರೇಜಿಸ್ಟಾರ್‌ ಮನೆಯಲ್ಲಿ ಕಿಚ್ಚ, ದಚ್ಚು.!
ಕ್ರೇಜಿಸ್ಟಾರ್‌ ಮನೆಯಲ್ಲಿ ಕಿಚ್ಚ, ದಚ್ಚು.! ಎಲ್ಲೆಡೆ ವೈರಲ್‌ ಆದ ಸೆಲ್ಫಿ  title=
ಸುದೀಪ್‌, ರವಿಚಂದ್ರನ್‌, ದರ್ಶನ್‌

Darshan Sudeep Selfie : ಇತ್ತೀಚೆಗಷ್ಟೆ ದಚ್ಚು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿತ್ತು. ದರ್ಶನ್‌ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಕಿಚ್ಚ ಸುದೀಪ್‌ ಕಟುವಾಗಿ ಖಂಡಿಸಿದ್ದರು. ಸ್ಯಾಂಡಲ್‌ವುಡ್‌ನ ಕುಚಿಕುಗಳು ಮತ್ತೆ ಒಂದಾಗೋದನ್ನು ನೋಡುವುದಕ್ಕೆ ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಇದು ಸಂತೋಷ ತಂದಿತ್ತು. ಆ ನಂತರ ಇಬ್ಬರೂ ಮತ್ತೆ ಮಾತನಾಡಬೇಕು, ಒಂದಾಗಬೇಕು ಎಂಬ ಬೇಡಿಕೆಗಳು ಅಭಿಮಾನಿಗಳ ಬಳಿಯಿಂದ ಕೇಳಿಬಂದಿದ್ದವು. ಈ ಬೆನ್ನಲ್ಲೇ ದರ್ಶನ್‌, ಸುದೀಪ್‌ ಮತ್ತು ರವಿಚಂದ್ರನ್‌ ಮೂವರು ಇರುವ ಸೆಲ್ಫಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : "ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ" : ಡಾಲಿ ಸೈಲೆಂಟ್‌ ಆಗಿ ವಾರ್ನ್‌ ಕೊಟ್ಟಿದ್ಯಾರಿಗೆ?

ಕ್ರೇಜಿ ಸ್ಟಾರ್‌ ಜೊತೆ ಕಿಚ್ಚ ಸುದೀಪ್‌ ಹಾಗೂ ದರ್ಶನ್‌ ಇರುವ ಫೋಟೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಕೆಲವರು ಇಬ್ಬರನ್ನೂ ಒಟ್ಟಿಗೆ ನೋಡಿ ಖುಷಿ ಪಡುತ್ತಿದ್ದಾರೆ. ರವಿಚಂದ್ರನ್ ಮನೆಯಲ್ಲಿ ಕುಚಿಕುಗಳು ಒಂದಾದರೂ ಎಂದು ಸಂಭ್ರಮಿಸುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇದು ನಿಜವಾದ ಫೋಟೋನಾ ಅಥವಾ ಎಡಿಟ್‌ ಮಾಡಿದ್ದಿರಬೇಕು ಎಂದಿದ್ದಾರೆ. 

 

 

ಅಸಲಿಗೆ ರವಿಚಂದ್ರನ್‌, ಕಿಚ್ಚ, ದಚ್ಚು ಸೆಲ್ಫಿ ರಿಯಲ್ ಅಲ್ಲ. ಅಭಿಮಾನಿಗಳು ಎಡಿಟ್ ಮಾಡಿದ ಫೋಟೋ ಇದಾಗಿದೆ. ಕೊನೆಪಕ್ಷ ಹೀಗಾದರೂ ಇಬ್ಬರನ್ನೂ ಒಟ್ಟಿಗೆ ನೋಡಿದೆವಲ್ಲ ಎಂದು ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಮುರಿದು ಬಿದ್ದ ಸ್ನೇಹ ಈಗ ಮತ್ತೆ ಒಂದಾಗುವ ಲಕ್ಷಣಗಳು ಕಾಣುತ್ತಿರುವುದು ಹಲವರಲ್ಲಿ ಆಶಾ ಭಾವ ಮೂಡಿಸಿದೆ.

ಇದನ್ನೂ ಓದಿ : "ನಿಮಗಾಗಿ ವಿಭಿನ್ನವಾಗಿರೋದೆನನ್ನೋ ತರಲಿದ್ದೇನೆ" : ಯಶ್‌ ಕೊಡಲಿರುವ ಆ ಸರ್‌ಪ್ರೈಸ್‌ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News