ಧನುಷ್‌ ʼಕ್ಯಾಪ್ಟನ್‌ ಮಿಲ್ಲರ್‌ʼ ಶೂಟಿಂಗ್‌ ಮುಗಿಸಿದ ಹ್ಯಾಟ್ರಿಕ್‌ ಹೀರೋ ಶಿವಣ್ಣ..! ಫೋಟೋ ವೈರಲ್‌

Shivarajkumar Captain Miller : ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ನಟ ಶಿವರಾಜಕುಮಾರ್ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಈ ಸಿನಿಮಾಗೆ ಸಂಬಂಧಿಸಿದ ಬಿಗ್‌ ಅಪ್‌ಡೇಟ್‌ ಒಂದು ಹೊರ ಬಿದ್ದಿದೆ.

Written by - Krishna N K | Last Updated : Jun 21, 2023, 02:58 PM IST
  • 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಟ ಶಿವರಾಜಕುಮಾರ್ ನಟಿಸುತ್ತಿದ್ದಾರೆ.
  • ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರ.
  • ಇತೀಚಿಗೆ ಈ ಚಿತ್ರದ ಕುರಿತು ಚಿತ್ರತಂಡ ಬಿಗ್‌ ಅಪ್‌ಡೇಟ್‌ ನೀಡಿದೆ.
ಧನುಷ್‌ ʼಕ್ಯಾಪ್ಟನ್‌ ಮಿಲ್ಲರ್‌ʼ ಶೂಟಿಂಗ್‌ ಮುಗಿಸಿದ ಹ್ಯಾಟ್ರಿಕ್‌ ಹೀರೋ ಶಿವಣ್ಣ..! ಫೋಟೋ ವೈರಲ್‌ title=

Dhanush Captain Miller : ತಮಿಳು ಖ್ಯಾತ ನಟ ಧನುಷ್ ಬಾಲಿವುಡ್, ಟಾಲಿವುಡ್, ಹಾಲಿವುಡ್ ಹೀಗೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡಿಗರಿಗೂ ಅವರು ತುಂಬಾ ಚಿರಪರಿಚಿತರು. ಇದೀಗ ಅವರ  ಮುಂಬರುವ ಬಹು ನಿರೀಕ್ಷಿತ ಸಿನಿಮಾ ʼಕ್ಯಾಪ್ಟನ್‌ ಮಿಲ್ಲರ್‌ʼಗೆ ಸಂಬಂಧಪಟ್ಟಂತೆ ಬಿಗ್‌ ಅಪ್‌ಡೇಟ್‌ ಒಂದು ಹೊರಬಿದ್ದಿದೆ.

ಹೌದು.. ಸೌತ್‌ ಸಿನಿ ರಂಗದ ಬಿಗ್‌ ಸ್ಟಾರ್‌ ಬಳಗ ಹೊಂದಿರುವ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ನಟ ಶಿವರಾಜಕುಮಾರ್‌ ಅವರು ನಟಿಸಿದ್ದಾರೆ. ಇತೀಚಿಗೆ ಈ ಚಿತ್ರದ ಕುರಿತು ಚಿತ್ರತಂಡ ಬಿಗ್‌ ಅಪ್‌ಡೇಟ್‌ ಒಂದು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: Parvati Nair : ಹೇಗಿದೆ ನೋಡಿ ಸೌತ್‌ ಬೆಡಗಿಯ ಡಿಫ್ರೆಂಟ್‌ ಲುಕ್‌..!

'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣ ಮುಗಿದಿದ್ದು, ಈ ನಿಟ್ಟಿನಲ್ಲಿ ಚಿತ್ರತಂಡ ಫೋಟೋ ಬಿಡುಗಡೆ ಮಾಡಿದೆ. ಈ ತಿಂಗಳ ಅಂತ್ಯದ ವೇಳೆಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸದ್ಯ ತೆಂಕಶಿ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರ 3 ಭಾಗಗಳಲ್ಲಿ ತಯಾರಾಗಲಿದೆ ಎನ್ನಲಾಗಿದೆ.

ಅರುಣ್ ಮಾಥೇಶ್ವರ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ಯಗೆ ಜೊತೆಯಾಗಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವರ್ಷ ದೀಪಾವಳಿಗೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಕಲಕ್ಕಾಡು ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ನಲ್ಲಿ ಈ ಚಿತ್ರದ ಚಿತ್ರೀಕರಣ ಬಹಳ ದಿನಗಳಿಂದ ನಡೆಯುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:  ಬೋಲ್ಡ್‌ ಲುಕ್‌ನಿಂದಲೇ ಮತ್ತೇರಿಸುವ ಹಾಟ್‌ ಬ್ಯೂಟಿ.. ಪೋಟೋಸ್‌ ನೋಡಿ

ಕ್ಯಾಪ್ಟನ್ ಮಿಲ್ಲರ್ 1930-40 ರ ದಶಕದ ಅವಧಿಯಲ್ಲಿ ನಡೆಯುವ ಘಟನೆ ಆಧಾರಿತ ಚಿತ್ರವಾಗಿದೆ. ಈ ಚಿತ್ರಕ್ಕಾಗಿ ಧನುಷ್ ಉದ್ದ ಕೂದಲು ಮತ್ತು ಗಡ್ಡದೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜುಲೈನಲ್ಲಿ 'ಕ್ಯಾಪ್ಟನ್ ಮಿಲ್ಲರ್' ಟೀಸರ್ ಕೂಡ ಬಿಡುಗಡೆಯಾಗಿದೆ. ಅಲ್ಲದೆ, ಧನುಷ್ ಹುಟ್ಟುಹಬ್ಬದ ದಿನವಾದ ಜೂನ್ 28 ರಂದು ಚಿತ್ರದ ಪ್ರಮುಖ ಅಪ್ಡೇಟ್ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News