Shivarajkumar appu : ಅಪ್ಪಾಜಿ ಹಾಡಿದ್ದಕ್ಕಿಂತಲೂ ಅಪ್ಪು ಹಾಡಿದ್ದು ಇಂದಿಗೂ ನನ್ನ ಮನದಲ್ಲಿ ಗುನುಗುತ್ತಿದೆ..!

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಮತ್ತು ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ ಅವರ ನಡುವೆ ಇದ್ದ ಪ್ರೀತಿ ಅದ್ಭುತ. ಅಣ್ಣ ತಮ್ಮಂದಿರು ಅಂದ್ರೆ ಇವರಂತಿರಬೇಕು ಅಂತ ಕರುನಾಡಿನ ಜನ ಹೇಳುವಂತಿತ್ತು. ಇಂದಿಗೂ ಅಪ್ಪು ಇಲ್ಲ ಎನ್ನುವ ಗುಂಗಿನಿಂದ ಶಿವಣ್ಣ ಹೊರ ಬಂದಿಲ್ಲ. ಇದೀಗ ಮತ್ತೆ ಅಪ್ಪು ಅವರನ್ನು ನೆನೆದು ಶಿವಣ್ಣ ಬಾವುಕರಾದ ಪ್ರಸಂಗ ಜೀ ವೇದಿಕೆಯ ಮೇಲೆ ನಡೆಯಿತು.

Written by - Krishna N K | Last Updated : Dec 13, 2022, 06:03 PM IST
  • ಅಪ್ಪು ನೆನೆದು ಶಿವಣ್ಣ ಬಾವುಕರಾದ ಪ್ರಸಂಗ ಜೀ ವೇದಿಕೆಯ ಮೇಲೆ ನಡೆಯಿತು
  • ʼನಿನ್ನ ಕಂಗಳ ಬಿಸಿಯ ಹನಿಗಳುʼ ಹಾಡನ್ನು ಕೇಳಿದ ಶಿವಣ್ಣ ಪುನೀತ್‌ ಅವರನ್ನು ನೆನೆದರು
  • ಅಲ್ಲದೆ, ಅಪ್ಪಾಜಿ ಹಾಡಿದ್ದಕ್ಕಿಂತಲೂ ಅಪ್ಪು ಹಾಡಿದ್ದು ಮನದಲ್ಲಿ ಗುನುಗುತ್ತಿದೆ ಎಂದರು
Shivarajkumar appu : ಅಪ್ಪಾಜಿ ಹಾಡಿದ್ದಕ್ಕಿಂತಲೂ ಅಪ್ಪು ಹಾಡಿದ್ದು ಇಂದಿಗೂ ನನ್ನ ಮನದಲ್ಲಿ ಗುನುಗುತ್ತಿದೆ..! title=

Shivarajkumar Puneeth rajkumar : ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಮತ್ತು ಪವರ್‌ ಸ್ಟಾರ್‌ ಪುನೀತ್‌ರಾಜಕುಮಾರ ಅವರ ನಡುವೆ ಇದ್ದ ಪ್ರೀತಿ ಅದ್ಭುತ. ಅಣ್ಣ ತಮ್ಮಂದಿರು ಅಂದ್ರೆ ಇವರಂತಿರಬೇಕು ಅಂತ ಕರುನಾಡಿನ ಜನ ಹೇಳುವಂತಿತ್ತು. ಇಂದಿಗೂ ಅಪ್ಪು ಇಲ್ಲ ಎನ್ನುವ ಗುಂಗಿನಿಂದ ಶಿವಣ್ಣ ಹೊರ ಬಂದಿಲ್ಲ. ಇದೀಗ ಮತ್ತೆ ಅಪ್ಪು ಅವರನ್ನು ನೆನೆದು ಶಿವಣ್ಣ ಬಾವುಕರಾದ ಪ್ರಸಂಗ ಜೀ ವೇದಿಕೆಯ ಮೇಲೆ ನಡೆಯಿತು.

ಜೀ ಕನ್ನಡಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ 19ನೇ ಸಂಚಿಕೆ ಇಂತಹ ಒಂದು ಅಪರೂಪ ಘಟನೆ ಸಾಕ್ಷಿಯಾಗಿದೆ. ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ ಈ ವಾರ ಸ್ಪರ್ಧಿಗಳಿಗೆ ದೊಡ್ಮನೆ ವೈಭವ ಎನ್ನುವ ಕಾನ್ಸೆಪ್ಟ್ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ ಕುಟುಂಬದ ಗೀತೆಗಳ ವೈಭವದ ಜಾತ್ರೆ ನಡೆಯಿತು. ಸ್ಪರ್ಧಿಗಳು ವರನಟ ಡಾ. ರಾಜ್‌ಕುಮಾರ್‌ ಪುನೀತ್‌ ರಾಜಕುಮಾರ್‌, ಶಿವರಾಜಕುಮಾರ್‌ ಅವರ ಸಿನಿಮಾದ ಗೀತೆಗಳನ್ನು ಹಾಡಿದರು.

ಇದನ್ನೂ ಓದಿ: Kartik Aaryan on Kantara: ʼಮಾಡಿದ್ರೆ ಇಂತ ಸಿನಿಮಾ ಮಾಡ್ಬೇಕುʼ... ʼಕಾಂತಾರʼಕ್ಕೆ ಕಾರ್ತಿಕ್‌ ಫಿದಾ

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಈ ವೇಳೆ ಪ್ರಗತಿ ಬಡಿಗೇರ್‌ ಡಾ. ರಾಜಕುಮಾರ್‌ ಅವರ ಬಡವರ ಬಂಧು ಸಿನಿಮಾದ ʼನಿನ್ನ ಕಂಗಳ ಬಿಸಿಯ ಹನಿಗಳುʼ ಹಾಡನ್ನು ಹಾಡಿದರು. ಈ ವೇಳೆ ಭಾವುಕರಾದ ಶಿವರಾಜಕುಮಾರ್‌ ಅವರು, ಈ ಹಾಡು ಯಾಕ್‌ ಸಲೆಕ್ಟ್‌ ಮಾಡಿದೆ ನೀನು. ಯಾಕಂದ್ರೆ ಈ ಹಾಡು ಕೇಳಿದ್ರೆ ಇನ್ನೂ ಮನಸ್ಸಿಗೆ ನೋವಾಗುತ್ತೆ. ನಿನ್ನ ವಾಯ್ಸ್‌ನಲ್ಲೂ ಆ ನೋವು ಇತ್ತು. ಈ ಹಾಡು ಕೇಳಿಸಿಕೊಂಡಾಗೆಲ್ಲ ಅಪ್ಪಾಜಿ ಹಾಡಿದ್ದಕ್ಕಿಂತಲೂ ಅಪ್ಪು ಹಾಡಿದ್ದು ಇಂದಿಗೂ ನನ್ನ ಮನದಲ್ಲಿ ಗುನುಗುತ್ತಿದೆ..! ಚನ್ನಾಗಿ ಹಾಡಿದೆ ಸೂಪರ್‌... ಅಂದ್ರು ಶಿವಣ್ಣ.

ಹೌದು, ಡಾ.ರಾಜ್‌ಕುಮಾರ್‌ ಅವರು ಹಾಡಿದ್ದ ಹಾಡನ್ನು ಪುನೀತ್‌ ರಾಜಕುಮಾರ್‌ ಅವರು ತಂದೆಯ ನೆನಪಿಗಾಗಿ ಹಾಡಿದ್ದರು. ಆ ಹಾಡು ಅಣ್ಣಾವ್ರ ಬಾಯಿಂದ ಎಷ್ಟು ಮಧುರವಾಗಿ ಹೊಮ್ಮಿತ್ತೋ ಅಷ್ಟೇ ಸುಮಧುರವಾಗಿ ಪುನೀತ್‌ ರಾಜಕುಮಾರ ಅವರು ಹಾಡಿದ್ದರು. ಇಂದಿಗೂ ಸಹ ಎಲ್ಲಿಯಾದರು ನಿನ್ನ ಕಂಗಳ ಬಿಸಿಯ ಹನಿಗಳು ಹಾಡು ಕೇಳಿದ್ರೆ ತಕ್ಷಣ ಕಣ್ಮುಂದೆ ಅಪ್ಪು ಮುಖ ಬರುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News