ʼಸಿಗ್ನಲ್ ಮ್ಯಾನ್ 1971ʼ ತೆರೆಯ ಬೆನ್ನಲೇ  ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಆಯ್ಕೆ..!

ಬೆಂಗಳೂರು: ಹಿಂದೂಸ್ತಾನ್ ಮುಕ್ತ ಮೀಡಿಯಾ ಎಂಟರ್ ಟೇನರ್ಸ್ ಲಾಂಛನದಲ್ಲಿ ಗಣೇಶ್ ಪ್ರಭು ನಿರ್ಮಿಸಿರುವ, ಕೆ.ಶಿವರುದ್ಯಯ್ಯ ನಿರ್ದೇಶಿಸಿರುವ, ಖ್ಯಾತ ನಟ ಪ್ರಕಾಶ್ ಬೆಳವಾಡಿ ವಿಭಿನ್ನಪಾತ್ರದಲ್ಲಿ ನಟಿಸಿರುವ "ಸಿಗ್ನಲ್‌ ಮ್ಯಾನ್" 1971" ಚಿತ್ರ ತೆರೆಗೆ ಬರಲು‌ ಸಿದ್ದವಾಗಿದೆ.

Written by - YASHODHA POOJARI | Last Updated : Mar 25, 2023, 11:21 AM IST
  • ವಿಭಿನ್ನ ಕಥೆಯ "ಸಿಗ್ನಲ್ ಮ್ಯಾನ್ 1971" ತೆರೆಗೆ
  • 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆ
  • ಈ ಚಿತ್ರ ಮಾರ್ಚ್ 26 ಹಾಗೂ 29 ರಂದು ಪ್ರದರ್ಶನ
ʼಸಿಗ್ನಲ್ ಮ್ಯಾನ್ 1971ʼ ತೆರೆಯ ಬೆನ್ನಲೇ  ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಆಯ್ಕೆ..! title=

ಬೆಂಗಳೂರು: ಹಿಂದೂಸ್ತಾನ್ ಮುಕ್ತ ಮೀಡಿಯಾ ಎಂಟರ್ ಟೇನರ್ಸ್ ಲಾಂಛನದಲ್ಲಿ ಗಣೇಶ್ ಪ್ರಭು ನಿರ್ಮಿಸಿರುವ, ಕೆ.ಶಿವರುದ್ಯಯ್ಯ ನಿರ್ದೇಶಿಸಿರುವ, ಖ್ಯಾತ ನಟ ಪ್ರಕಾಶ್ ಬೆಳವಾಡಿ ವಿಭಿನ್ನಪಾತ್ರದಲ್ಲಿ ನಟಿಸಿರುವ "ಸಿಗ್ನಲ್‌ ಮ್ಯಾನ್" 1971" ಚಿತ್ರ ತೆರೆಗೆ ಬರಲು‌ ಸಿದ್ದವಾಗಿದೆ.

ಅದಕ್ಕೂ ಮುನ್ನ ಈ ಬಾರಿಯ 14 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್ ಚಿತ್ರಗಳ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ‌‌. ಮಾರ್ಚ್ 26 ಹಾಗೂ 29 ರಂದು ಪ್ರದರ್ಶನವಾಗಲಿದೆ.  ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.ಇಂಗ್ಲೀಷ್ ಲೇಖಕ ಚಾರ್ಲ್ಸ್ ಡಿಕನ್ಸ್ ಅವರ "ಸಿಗ್ನಲ್ ಮ್ಯಾನ್" ಕಥೆಯಿಂದ ಸ್ಪೂರ್ತಿ ಪಡೆದ ನಾನು ಈ ಚಿತ್ರ ಮಾಡಬೇಕೆಂದು ಕೊಂಡೆ. ಈ ವಿಷಯವನ್ನು ಪ್ರಕಾಶ್ ಬೆಳವಾಡಿ ಅವರ ಹತ್ತಿರ ಹೇಳಿದಾಗ,   ಈ ಕಥೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಅವರು ಕಥೆ ಹೆಣೆದು ಕೊಟ್ಟರು.

ಇದನ್ನೂ ಓದಿ: The Elephant Whisperers:  ದಿ ಎಲಿಫೆಂಟ್ ವಿಸ್ಪರ್ಸ್' ಖ್ಯಾತಿ ಜೋಡಿ ಮಡಿಲಿಗೆ ಮತ್ತೊಂದು ಆನೆ ಮರಿ

1971 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಆಗಷ್ಟೇ ಭಾರತ - ಪಾಕ್ ಯುದ್ದದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂತಹ ಸಮಯದಲ್ಲಿ ನಡೆಯುವ ಕಥೆ "ಸಿಗ್ನಲ್ ಮ್ಯಾನ್ 1971". ಅದೊಂದು ಪಶ್ಚಿಮ ಘಟ್ಟದ ರೈಲ್ವೆ ನಿಲ್ದಾಣ. ಆದರೆ ಅಲ್ಲಿ ರೈಲು ನಿಲುವುದಿಲ್ಲ. ಆ ನಿಲ್ದಾಣದಲೊಬ್ಬ ಬಾಲು ಎಂಬ " ಸಿಗ್ನಲ್ ಮ್ಯಾನ್". ಅಲ್ಲಿಗೆ ಆತನೇ ಎಲ್ಲಾ. ಅಂತಹ ಸುಂದರ ಪರಿಸರದಲ್ಲಿರುವ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಫೋಟೋಗ್ರಾಫರ್ ರಾಜಶೇಖರ್ ಆಗಮನವಾಗುತ್ತದೆ. ಬಾಲುವಿನ ಒಂಟಿತನ, ತಳಮಳ, ಹಿಂದಿನ ನೆನಪುಗಳು, ಯುದ್ದದ ಭೀತಿ. ಸೈನಿಕರನ್ನು ಹೊತ್ತೊಯುವ ರೈಲುಗಳು. ಇವೆಲ್ಲವೂ ಐದು ದಿನಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ನಮ್ಮ ಚಿತ್ರ ಪ್ರದರ್ಶನವಾಗುತ್ತಿದೆ. ಸದ್ಯದಲ್ಲೇ ತೆರೆಗೆ ಬರಲಿದೆ.

ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಅದ್ದೂರಿಯಾಗಿ ಬಂದಿದೆ. ಇದು ನನ್ನ ಹನ್ನೊಂದನೇ ನಿರ್ದೇಶನದ ಚಿತ್ರ ಎಂದರು ನಿರ್ದೇಶಕ ಕೆ.ಶಿವರುದ್ರಯ್ಯ.ನನಗೆ ಶಿವರುದ್ರಯ್ಯ ಅವರು ಈ ಕಾನ್ಸೆಪ್ಟ್ ಬಗ್ಗೆ ಹೇಳಿ, ನೀವು ಅಭಿನಯಿಸಬೇಕು ಎಂದರು. ಆನಂತರ ಕಥೆಯನ್ನು ನೀವೆ ಬರೆಯಿರಿ ಎಂದು ಹೇಳಿದರು. ನಾನು ಈ ಕಥೆಯನ್ನು ಭಾರತದ ಸೊಗಡಿಗೆ ತಕ್ಕ ಹಾಗೆ ಬರೆದಿದ್ದೇನೆ.

ಇದನ್ನೂ ಓದಿ: ʼಪ್ರಣಯಂʼ ಚಿತ್ರದ ಲಿರಿಕಲ್ ಸಾಂಗ್‌ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್‌...!

ಊಟಿಯ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಕೊಟ್ಟಿಗೆಹಾರ, ಚಿಕ್ಕಮಗಳೂರು, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ಈ ಚಿತ್ರಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ರೈಲು ಈ ಚಿತ್ರದ ಒಂದು ಭಾಗವಾಗಿತ್ತು. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಸೊಗಸಾಗಿತ್ತು ಎಂದು ನಟ ಹಾಗೂ ಕಥೆಗಾರ ಪ್ರಕಾಶ್ ಬೆಳವಾಡಿ ತಿಳಿಸಿದರು.

ನಾನು ಉದ್ಯಮಿ. ಈ ಚಿತ್ರದ ಕಥೆ ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆ‌. ಮುಂದೆ ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ ಎಂದರು ನಿರ್ಮಾಪಕ ಗಣೇಶ್ ಪ್ರಭು. ಛಾಯಾಗ್ರಹಣದ ಬಗ್ಗೆ ಶೇಖರ್ ಚಂದ್ರು ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ - ನಟ ವೆಂಕಟೇಶ್ ಪ್ರಸಾದ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ರಾಜೇಶ್ ನಟರಂಗ ಈ ಚಿತ್ರದ ಕುರಿತು ಮಾತನಾಡಿದರು.

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News