Diwali 2022 ಔತಣಕೂಟದಲ್ಲಿ ಪತಿಯೊಂದಿಗೆ ಬಹಿರಂಗವಾಗಿ ಲಿಪ್ ಲಾಕ್ ಮಾಡಿದ ಶ್ರೀಯಾ ಸರನ್.. ವಿಡಿಯೋ ನೋಡಿ

Shriya Saran Video: ಬಹುಭಾಷಾ ನಟಿ ಶ್ರೀಯಾ ಸರನ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ತಲ್ಲಣ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಶ್ರೀಯಾ ತನ್ನ ಪತಿ ಆಂಡ್ರೆ ಕೊಸ್ಟೆವ್ ಅವರೊಂದಿಗೆ ಬಹಿರಂಗವಾಗಿ ಲಿಪ್ ಲಾಕ್ ಮಾಡುತ್ತಿರುವುದು ಕಂಡುಬಂದಿದೆ.  

Written by - Nitin Tabib | Last Updated : Oct 24, 2022, 06:39 PM IST
  • ವೀಡಿಯೊದಲ್ಲಿ, ಇಬ್ಬರೂ ಪಾಪರಾಜಿಗಳಿಗೆ ಪೋಸ್ ನೀಡಲು ತಲುಪುತ್ತಾರೆ.
  • ಅಷ್ಟರಲ್ಲಿಯೇ ಶ್ರೀಯಾ ಪತಿ ಶಿಯಾ ಕಿವಿಯಲ್ಲಿ ಏನೋ ಹೇಳುವುದನ್ನು ನೀವು ನೋಡಬಹುದು,
  • ಇದರಿಂದ ಶ್ರೀಯಾಗೆ ತುಂಬಾ ಸಂತೋಷವಾಗುತ್ತದೆ ಮತ್ತು ನಂತರ ಇಬ್ಬರೂ ಲಿಪ್‌ಲಾಕ್ ಮಾಡುತ್ತಾರೆ.
Diwali 2022 ಔತಣಕೂಟದಲ್ಲಿ ಪತಿಯೊಂದಿಗೆ ಬಹಿರಂಗವಾಗಿ ಲಿಪ್ ಲಾಕ್ ಮಾಡಿದ ಶ್ರೀಯಾ ಸರನ್.. ವಿಡಿಯೋ ನೋಡಿ title=
Shriya Liplock Video

Shriya Saran Kiss Video: ಬಹುಭಾಷಾ ನಟಿ ಶ್ರೀಯಾ ಸರನ್, ಇತ್ತೀಚಿನ ದಿನಗಳಲ್ಲಿ ತನ್ನ ಚಲನಚಿತ್ರದ ಜೊತೆಗೆ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆಯೂ ಕೂಡ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಬಾಲಿವುಡ್ ನಲ್ಲಿ ಆಯೋಜಿಸಲಾಗುತ್ತಿರುವ ದೀಪಾವಳಿ ಔತಣಕೂಟಗಳಲ್ಲಿ ಶ್ರೀಯಾ ತನ್ನ ಪತಿ ಆಂಡ್ರೆ ಕೊಸ್ಟಿವ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾಳೆ.

ಮೊದಲು ತಾಪ್ಸಿ ಪನ್ನು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡ ಮಾರನೆಯ ದಿನ ಕಿಶನ್ ಕುಮಾರ್ ಅವರ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಔತಣಕೂಟಗಳಲ್ಲಿನ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶ್ರೀಯಾ ಪಾಪರಾಜಿಗಳ ಮುಂದೆಯೇ ತನ್ನ ಪತಿಯೊಂದಿಗೆ ಬಹಿರಂಗವಾಗಿ ಲಿಪ್ ಲಾಕ್ ಮಾಡುತ್ತಿದ್ದಾಳೆ. 

ಶ್ರೀಯಾಳ ಈ ಲಿಪ್ ಲಾಕ್ ವಿಡಿಯೋ ವೈರಲ್ ಆಗಿದೆ
ವಾಸ್ತವದಲ್ಲಿ, ಶ್ರಿಯಾ ಸರಣ್ ತನ್ನ ಪತಿಯೊಂದಿಗೆ ಯಾವುದೇ ದೀಪಾವಳಿ ಪಾರ್ಟಿಗೆ ಹೋದರು ಕೂಡ ಅಲ್ಲಿ ಕ್ಯಾಮರಾ ಮುಂದೆಯೇ ತನ್ನ ಪತಿಯನ್ನು ಬಹಿರಂಗವಾಗಿ ಚುಂಬಿಸುತ್ತಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶ್ರೀಯಾ ಪಿಂಕ್ ಕಲರ್ ಮಿನುಗುವ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಇದೇ ವೇಳೆ, ಆಕೆಯ ಪತಿ ಸೂಟ್-ಬೂಟಿನಲ್ಲಿ ಕಾಣಿಸಿಕೊಂಡಿದ್ದಾರೆ.

ವೀಡಿಯೊದಲ್ಲಿ, ಇಬ್ಬರೂ ಪಾಪರಾಜಿಗಳಿಗೆ ಪೋಸ್ ನೀಡಲು ತಲುಪುತ್ತಾರೆ. ಅಷ್ಟರಲ್ಲಿಯೇ ಶ್ರೀಯಾ ಪತಿ ಶಿಯಾ ಕಿವಿಯಲ್ಲಿ ಏನೋ ಹೇಳುವುದನ್ನು ನೀವು ನೋಡಬಹುದು, ಇದರಿಂದ ಶ್ರೀಯಾಗೆ ತುಂಬಾ ಸಂತೋಷವಾಗುತ್ತದೆ ಮತ್ತು ನಂತರ ಇಬ್ಬರೂ ಲಿಪ್‌ಲಾಕ್ ಮಾಡುತ್ತಾರೆ. ವೈರಲ್ ಆಗುತ್ತಿರುವ ಈ ವೀಡಿಯೊವನ್ನು ನಟಿ ಈಗ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾಳೆ.

 
 
 
 

 
 
 
 
 
 
 
 
 
 
 

A post shared by TAHIR JASUS007 (@tahirjasus)

ಇದನ್ನೂ ಓದಿ-ಇದೆಂಥಾ ಸಂಸ್ಕೃತಿ : ಬಟ್ಟೆ ಬಿಟ್ಟು, ಲಡ್ಡು ತಿಂದು ದೀಪಾವಳಿ ಶುಭ ಕೋರಿದ ಉರ್ಫಿ..!

ಬಳಕೆದಾರರ ಪ್ರತಿಕ್ರಿಯೆ ಏನು?
ಶ್ರೀಯಾ ಹಂಚಿಕೊಂಡಿರುವ ಈ ವಿಡಿಯೋಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಅದನ್ನು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಓರ್ವ ಬಳಕೆದಾರರು 'ಇವರನ್ನು ನಾನು ಯಾವಾಗಲು ಪರಸ್ಪರ ಕಿಸ್ ಮಾಡುವುದನ್ನು ನೋಡುತ್ತಿದ್ದೇನೆ' ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಮತ್ತೋರ್ವ ಬಳಕೆದಾರ 'ನಿಜವಾಗಿಯೂ ಹೌದು, ಹೀಗೇಕೆ?' ಎಂದು ಪ್ರಶ್ನಿಸಿದ್ದಾರೆ. ಮೂರನೇ ವ್ಯಕ್ತಿ 'ಇವರು ಮತ್ತೆ ಶುರು ಮಾಡಿದ್ರು, 'ಇದು ದೀಪಾವಳಿ ಪಾರ್ಟಿ, ರಿಸೆಪ್ಶನ್ ಪಾರ್ಟಿ ಅಲ್ಲ' ಎಂದಿದ್ದಾರೆ.

ಇದನ್ನೂ ಓದಿ-ಮೆಗಾಸ್ಟಾರ್‌ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌ : ಚಿರಂಜೀವಿ 154ನೇ ಸಿನಿಮಾ ಟೀಸರ್‌ ರಿಲೀಸ್‌

ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಶ್ರೀಯಾ ಶೀಘ್ರದಲ್ಲಿಯೇ ಅಜಯ್ ದೇವಗನ್ ಅವರೊಂದಿಗೆ ದೃಶ್ಯಂ-2 ರಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರದ ಫಸ್ಟ್ ಲುಕ್ ವಿಡಿಯೋ ಈಗಾಗಲೇ ಬಿಡುಗಡೆಯಾಗಿದೆ. ಇದಲ್ಲದೆ ಶ್ರೀಯಾ ಹಲವು ದಕ್ಷಿಣದ ಚಿತ್ರಗಳಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾಳೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News