ಹೀರೋ ಆಗಬೇಕಿದ್ದ ಪುತ್ರ ಆತ್ಮಹತ್ಯೆ; ಎಂಪಿ ಶಂಕರ್ ದುರಂತ ಅಂತ್ಯ ಹೇಗಾಯ್ತು?

MP Shankar Life Story: ಎಂಪಿ ಶಂಕರ್ ಬದುಕಿನಲ್ಲಿ ಬಂದೂಕು ಹಾಗೂ ರಿವಾಲ್ವರ್ ಒಂದು ರೀತಿ ವಿಲನ್‌ಗಳಾಗಿದ್ದವು. 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಶಂಕರ್ ಅವರ ಬಂದೂಕಿನಿಂದ ಸಿಡಿದ ಗುಂಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದು ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ಅಂತರ ಬೆಳೆಯಲು ಸಹ ಕಾರಣವಾಗಿತ್ತು. ಇಬ್ಬರ ಅಭಿಮಾನಿಗಳ ನಡುವೆ ಬಹುದೊಡ್ಡ ಸಂಘರ್ಷ ಏರ್ಪಡುವಂತೆ ಮಾಡಿತ್ತು.

Written by - Puttaraj K Alur | Last Updated : Aug 29, 2024, 06:17 PM IST
  • ಎಂಪಿ ಶಂಕರ್ ಬದುಕಿನಲ್ಲಿ ವಿಲನ್‌ ಆದ ಬಂದೂಕು ಹಾಗೂ ರಿವಾಲ್ವರ್
  • ಹೀರೋ ಆಗಬೇಕಿದ್ದ ಪುತ್ರ ವಿರೂಪಾಕ್ಷ ಆತ್ಮಹತ್ಯೆ ಮಾಡಿಕೊಂಡರು
  • ಕೊನೆಯಲ್ಲಿ ಸಿನಿಮಾಗಳಿಂದ ನಷ್ಟ ಅನುಭವಿಸಿ ನೊಂದಿದ್ದ ಎಂಪಿ ಶಂಕರ್‌
ಹೀರೋ ಆಗಬೇಕಿದ್ದ ಪುತ್ರ ಆತ್ಮಹತ್ಯೆ; ಎಂಪಿ ಶಂಕರ್ ದುರಂತ ಅಂತ್ಯ ಹೇಗಾಯ್ತು? title=
ಎಂಪಿ ಶಂಕರ್‌ ದುರಂತ ಕಥೆ!

MP Shankar Sad Life Story: ಕನ್ನಡ ಚಿತ್ರರಂಗ ಕಂಡ ಅದ್ಭುತ ಸಿನಿಕರ್ಮಿ ಎಂಪಿ ಶಂಕರ್. ನಟ, ನಿರ್ದೇಶಕ ಮತ್ತು ನಿರ್ಮಾಪಕರನಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. 1935ರ ಆಗಸ್ಟ್ 20ರಂದು ಮೈಸೂರಿನಲ್ಲಿ ಜನಿಸಿದ ಶಂಕರ್ ತಮ್ಮ 72ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ವಿಧಿವಶರಾದರು. ಹೀರೋ ಆಗಬೇಕಿದ್ದ ಪುತ್ರನ ಆತ್ಮಹತ್ಯೆ, ನಿರ್ಮಿಸಿದ ಸಿನಿಮಾಗಳಿಂದ ಉಂಟಾದ ನಷ್ಟ ಕೊನೆಯ ದಿನಗಳಲ್ಲಿ ಎಂಪಿ ಶಂಕರ್‌ರನ್ನು ಬಹಳ ಕಾಡಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 2008ರ ಜುಲೈ 17ಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದರು. 'ಭೂತಯ್ಯನ ಮಗ ಅಯ್ಯು' ಚಿತ್ರದ ಭೂತಯ್ಯನ ಪಾತ್ರದ ಅವರ ಅಭಿನಯವನ್ನು ಕನ್ನಡ ಸಿನಿರಸಿರಕು ಮರೆಯಲು ಸಾಧ್ಯವೇ ಇಲ್ಲ. 

ಗರಡಿಯಲ್ಲಿ ತಾಲೀಮು ನಡೆಸಿ ಹುರಿಗಟ್ಟಿದ ದೇಹ ಎಂಪಿ ಶಂಕರ್‌ ಅವರಿಗೆ ವರವಾಗಿತ್ತು. 1962ರಲ್ಲಿ ಬಂದ 'ರತ್ನಮಂಜರಿ' ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಕೊನೆಗೆ 'ಕಾಡಿನ ರಹಸ್ಯ' ಚಿತ್ರದಿಂದ ನಿರ್ಮಾಪಕರಾದರು. ಪ್ರಾಣಿ-ಪಕ್ಷಿ, ವನ್ಯ ಸಂಪತ್ತಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಎಂಪಿ ಶಂಕರ್‌ ಅವರು ತಮ್ಮ ಸಿನಿಮಾಗಳಲ್ಲಿ ಅದರ ರಕ್ಷಣೆ ಬಗ್ಗೆ ಉತ್ತಮ ಸಂದೇಶ ಸಾರುತ್ತಿದ್ದರು.
'ಗಂಧದಗುಡಿ', 'ಮೃಗಾಲಯ', 'ರಾಮ-ಲಕ್ಷ್ಮಣ', 'ಕಾಡಿನ ರಾಜ' ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಕಥೆಗಳಿದ್ದವು. ಈ ಚಿತ್ರಗಳಿಗೆ ಸ್ವತಃ ಎಂಪಿ ಶಂಕರ್‌ ಅವರೇ ಕಥೆ ಒದಗಿಸಿದ್ದರು. ನಟನೆಯ ವಿಚಾರಕ್ಕೆ ಬಂದರೆ 'ಸತ್ಯಹರಿಶ್ಚಂದ್ರ' ಚಿತ್ರದ ವೀರಬಾಹು, 'ನಾಗರಹಾವು' ಚಿತ್ರದ ಪೈಲ್ವಾನ್ ಬಸಣ್ಣ, 'ಹುಲಿಯ ಹಾಲಿನಮೇವು' ಚಿತ್ರದ ಪಾತ್ರಗಳನ್ನು ಪ್ರೇಕ್ಷಕರು ಎಂದಿಗೂ ಮರೆಯೋದಿಲ್ಲ.

ಇದನ್ನೂ ಓದಿ: ʼಅಂಥಹʼ ಕೆಲಸ ಮಾಡಿ ಅಭಿಷೇಕ್ ಬಚ್ಚನ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಶ್ವರ್ಯ..! ಇಲ್ಲಿಂದಲೇ ಶುರುವಾಗಿದ್ದಾ ಬಚ್ಚನ್ ಕುಟುಂಬದಲ್ಲಿ ಮನಸ್ತಾಪ?!

ಎಂಪಿ ಶಂಕರ್ ಬದುಕಿನಲ್ಲಿ ಬಂದೂಕು ಹಾಗೂ ರಿವಾಲ್ವರ್ ಒಂದು ರೀತಿ ವಿಲನ್‌ಗಳಾಗಿದ್ದವು. 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಶಂಕರ್ ಅವರ ಬಂದೂಕಿನಿಂದ ಸಿಡಿದ ಗುಂಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದು ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ಅಂತರ ಬೆಳೆಯಲು ಸಹ ಕಾರಣವಾಗಿತ್ತು. ಇಬ್ಬರ ಅಭಿಮಾನಿಗಳ ನಡುವೆ ಬಹುದೊಡ್ಡ ಸಂಘರ್ಷ ಏರ್ಪಡುವಂತೆ ಮಾಡಿತ್ತು.

ಅಂದು ಚಿತ್ರೀಕರಣದ ವೇಳೆ ಬಂದೂಕಿನಿಂದ ಯಾಕೆ ಗುಂಡು ಹಾರಿತು? ಆಗ ಯಾರ ಕೈಯಲ್ಲಿ ಬಂದೂಕು ಇತ್ತು? ಅಪವಾದ ಯಾಕೆ ವಿಷ್ಣುವರ್ಧನ್ ಮೇಲೆ ಬಂತು? ಅನ್ನೋದರ ಬಗ್ಗೆ ಒಬ್ಬೊಬ್ಬರು ಒಂದು ಕಥೆ ಹೇಳುತ್ತಾರೆ. ಆದರೆ ವಿಷ್ಣು ತನ್ನದಲ್ಲದ ತಪ್ಪಿಗೆ ದಶಕಗಳ ಕಾಲ ಸಂಕಷ್ಟ ಎದುರಿಸುವಂತಾಯಿತು. ಇದಲ್ಲದೆ ಎಂಪಿ ಶಂಕರ್ ಅವರ ರಿವಾಲ್ವರ್‌ನಿಂದಲೇ ಅವರ ಪುತ್ರ ವಿರೂಪಾಕ್ಷ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ನಿರ್ಮಾಪಕರಾದ ಎಂಪಿ ಶಂಕರ್ ತಮ್ಮ ಪುತ್ರ ವಿರೂಪಾಕ್ಷನನ್ನು ಹೀರೋ ಮಾಡುವ ಕನಸು ಕಂಡಿದ್ದರು. ಅದಕ್ಕಾಗಿ 'ಹಳ್ಳಿ ರಂಭೆ ಬೆಳ್ಳಿ ಬೊಂಬೆ' ಚಿತ್ರಕ್ಕೆ ಕೈ ಹಾಕಿದ್ದರು. ಕಥೆ ಸಿದ್ಧಪಡಿಸಿ ಮಾಲಾಶ್ರೀ ನಾಯಕಿಯಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಚಿ.ಉದಯಶಂಕರ್ ತಮ್ಮ ಮಗ ಚಿ.ಗುರುದತ್‌ನನ್ನು ಈ ಚಿತ್ರದಲ್ಲಿ ಹೀರೋ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಅವರು ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಫಾರೆಸ್ಟ್ ನಲ್ಲಿ ಜಮ್ಮು-ಕಾಶ್ಮೀರದ ನಟ ಸುನೀಲ್ ಕುಮಾರ್ :ತಮ್ಮ ಎತ್ತರದಿಂದಲೇ ಎಲ್ಲರ ಗಮನ ಸೆಳೆದಿರುವ ಕಲಾವಿದ

ವಿರೂಪಾಕ್ಷನಿಗೆ ಕಥೆ ಮಾಡಿದ್ದು ಎನ್ನುವುದು ಚಿ.ಉದಯಶಂಕರ್‌ಗೆ ಗೊತ್ತಿರಲಿಲ್ಲ. ಆದರೆ ಮಗನನ್ನು ಹೀರೋ ಮಾಡಲು ಸಾಧ್ಯವಾಗಲಿಲ್ಲವೆನ್ನುವ ನೋವು ಎಂಪಿ ಶಂಕರ್ ಅವರಿಗಿತ್ತು. ಹೀರೋ ಆಗಬೇಕೆನ್ನುವ ಕನಸು ನನಸಾಗದೇ ವಿರೂಪಾಕ್ಷ ಸಹ ಖಿನ್ನತೆಗೆ ತುತ್ತಾಗಿದ್ದ ಎನ್ನಲಾಗಿದೆ. ಇದೇ ಆಘಾತದಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಕೊನೆಗೆ ಸಿನಿಮಾಗಳಿಂದ ನಷ್ಟ ಅನುಭವಿಸಿ ಶಂಕರ್‌ ಅವರು ತಮ್ಮ ಮನೆಯನ್ನು ಮಾರಿಕೊಳ್ಳುವಂತಾಯಿತು.

ಪುತ್ರಶೋಕ ನಿರಂತರ ಎನ್ನುವಂತೆ ಪುತ್ರನ ಅಗಲಿಕೆಯ ನೋವು ಶಂಕರ್ ಅವರನ್ನು ಬಹಳ ಕಾಡಿತು. ಆ ಬಳಿಕ ಅವರ ಮಡದಿಯನ್ನು ಆ ನೋವು ಭಾದಿಸಿತ್ತು. ಅನಾರೋಗ್ಯಕ್ಕೆ ತುತ್ತಾದಾಗ ಹಣಕ್ಕಾಗಿ ಕಮ್ಮಿ ಬೆಲೆಗೆ ತಮ್ಮ ಕೆಲವು ಸಿನಿಮಾಗಳ ರೈಟ್ಸ್‌ಅನ್ನು ಮಾಡಿಬಿಟ್ಟರು. ಸಿನಿಮಾ ಚಿತ್ರೀಕರಣದ ಸಾಮಗ್ರಿಗಳನ್ನು ಸಹ ಮಾರುವಂತಾಗಿತ್ತು. ಕೊನೆಗೆ ಎಲ್ಲಾ ಸಾಲಗಳನ್ನು ತೀರಿಸಿದ ಶಂಕರ್‌ ಅವರು ಉಳಿದ ಹಣದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News