ವೈರಲ್ ಆಯ್ತು, ಸೋನಮ್ ಕಪೂರ್ ಲಗ್ನ ಪತ್ರಿಕೆ, ಪ್ರತಿ ಇವೆಂಟಿಗೂ ಇದೇ ಡ್ರೆಸ್ ಕೋಡ್!

ಮೆಹಂದಿ ಸಂಪ್ರದಾಯದೊಂದಿಗೆ ಮೇ 7 ರಂದು ವಿವಾಹ ಸಮಾರಂಭವು ಪ್ರಾರಂಭವಾಗುತ್ತದೆ. ಲಗ್ನ ಪತ್ರಿಕೆ ಪ್ರಕಾರ, ಈ ಕಾರ್ಯಕ್ರಮದ ಡ್ರೆಸ್ ಕೋಡ್ ಬಿಳಿ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಬಿಳಿ ಬಟ್ಟೆಗಳನ್ನೇ ತೊಡಬೇಕು.

Last Updated : May 3, 2018, 03:57 PM IST
ವೈರಲ್ ಆಯ್ತು, ಸೋನಮ್ ಕಪೂರ್ ಲಗ್ನ ಪತ್ರಿಕೆ, ಪ್ರತಿ ಇವೆಂಟಿಗೂ ಇದೇ ಡ್ರೆಸ್ ಕೋಡ್! title=
Pic@bollywoodgems/ Instagram

ನವದೆಹಲಿ: ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಆಕೆಯ ಗೆಳೆಯ ಆನಂದ್ ಅಹುಜಾ ಮೇ 8 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಧಿಕೃತ ಘೋಷಣೆ ಮಾಡುವ ಮೊದಲು ಕೆಲವು ಕುಟುಂಬ ಸದಸ್ಯರು ಈ ಸುದ್ದಿವನ್ನು ಸ್ವಲ್ಪ ಸಮಯದವರೆಗೆ ಖಚಿತಪಡಿಸಿದ್ದರು. ಸೋನಮ್ ಅವರ ಮದುವೆಯ ಸಿದ್ಧತೆಗಳು ಜೋರಾಗಿ ಇವೆ. ಇವರ ಮದುವೆಯ ಲಗ್ನ ಪತ್ರಿಕೆ ಬಹಳ ಸರಳವಾಗಿದೆ. ಇವರ ಲಗ್ನ ಪತ್ರಿಕೆಯಲ್ಲಿ ನೇಚರ್ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಬಳಸಲಾದ ಫಾಂಟ್ ಗಳು ಕೂಡಾ ಉತ್ತಮವಾಗಿವೆ.

ಮೆಹಂದಿ ಸಂಪ್ರದಾಯದೊಂದಿಗೆ ಮೇ 7 ರಂದು ವಿವಾಹ ಸಮಾರಂಭವು ಪ್ರಾರಂಭವಾಗುತ್ತದೆ. ಲಗ್ನ ಪತ್ರಿಕೆ ಪ್ರಕಾರ, ಈ ಕಾರ್ಯಕ್ರಮದ ಡ್ರೆಸ್ ಕೋಡ್ ಬಿಳಿ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಬಿಳಿ ಬಟ್ಟೆಗಳನ್ನೇ ತೊಡಬೇಕು. ಇದರ ನಂತರ ಮೇ 8 ರಂದು ಬೆಳಿಗ್ಗೆ 11:00 ಗಂಟೆಯಿಂದ 12:30ರ ನಡುವಿನ ಶುಭಲಗ್ನದಲ್ಲಿ ವಿವಾಹ ಜರುಗಲಿದೆ. ಅದೇ ದಿನ ರಾತ್ರಿ 08:00ಗಂಟೆಗೆ ಮುಂಬೈನಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಬಾಲಿವುಡ್ ನ ಪ್ರಸಿದ್ದ ವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲಾ ಸಮಾರಂಭಕ್ಕೂ ಡ್ರೆಸ್ ಕೋಡ್ ಇರಿಸಿರುವುದು ವಿಶೇಷವಾಗಿದೆ.

Trending News