Spandana Vijay : ಈ ತಪ್ಪುಗಳೇ ಸ್ಪಂದನ ಅವರ ನಿಧನಕ್ಕೆ ಕಾರಣವಾಯ್ತಾ..?

Spandana Death Reason : ಎಲ್ಲರಲ್ಲೂ ಆತಂಕ ಹೆಚ್ಚಿಸಿದ ಸ್ಪಂದನ ಅವರ ದಿಢೀರ್ ಸಾವು ಇಡೀ ಚಿತ್ರರಂಗವನ್ನೇ ಮೌನವಾಗಿಸಿದೆ. ಸದ್ಯ ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ ಸ್ಪಂದನ ಅವರು ಮರಣ ಹೊಂದಲು ಕಾರಣ ಏನು ಎನ್ನುವ ಕುರಿತು ಮಾಹಿತಿ ಲಭಿಸಿದೆ.  

Written by - Savita M B | Last Updated : Aug 8, 2023, 01:48 PM IST
  • ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ.
  • ಸ್ಪಂದನ ಅಕಾಲಿಕ ಮರಣಕ್ಕೆ ಚಿತ್ರರಂಗದವರು ಸೇರಿದಂತೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
  • ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಸಾವಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.
Spandana Vijay : ಈ ತಪ್ಪುಗಳೇ ಸ್ಪಂದನ ಅವರ ನಿಧನಕ್ಕೆ ಕಾರಣವಾಯ್ತಾ..? title=

Spandana Vijayraghavendra : ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಅಗಲಿಕೆಯ ನೋವಿನಲ್ಲಿದ್ದಾರೆ. ಸ್ಪಂದನ ಅಕಾಲಿಕ ಮರಣಕ್ಕೆ ಚಿತ್ರರಂಗದವರು ಸೇರಿದಂತೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಪ್ರೆಂಡ್ಸ್‌ ಜೊತೆ ಬ್ಯಾಂಕಾಕ್‌ ಗೆ ತೆರಳಿದ್ದ ಸ್ಪಂದನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ಮೊನ್ನೆ ಸಂಜೆ ವಿಜಯ್‌ ಪತ್ನಿ ಸ್ಪಂದನಾ ಅವರಿಗೆ ಲೋ BP ಆಗಿದ್ದು, ಅವರು ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಚಿಕಿತ್ಸೆ ಪಡೆದು ರಾತ್ರಿ ಊಟ ಮಾಡಿ ಮಲಗಿದ್ದಾಗ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. 

ಹಾಗಾದರೇ ಈ ದಿಢೀರ್‌ ಹೃದಯಾಘಾತಕ್ಕೆ ಕಾರಣವೇನು..?
ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಸಾವಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅಷ್ಟಕ್ಕೂ ಸ್ಪಂದನ ಅವರಿಗೆ ಹೃದಯಾಘಾತ ಯಾವ ಕಾರಣಕ್ಕೆ ಸಂಭವಿಸಿರಬಹುದು..? ಆರೋಗ್ಯವಾಗಿ ಇದ್ದ ಸ್ಪಂದನ ಅವರ ಅಕಾಲಿಕ ಮರಣ ಎಲ್ಲರಿಗೂ ಘಾಸಿಯನ್ನುಂಟು ಮಾಡಿದೆ. ಸದ್ಯ ಸ್ಪಂದನ ಸಾವಿನ ಹಿಂದಿನ ಘಟನೆಯ ಬಗ್ಗೆ ಮಾಹಿತಿ ತಿಳಿಯಲು ಎಲ್ಲರೂ ಕಾಯುತ್ತಿದ್ದಾರೆ. 

ಇದನ್ನೂ ಓದಿ-ತಮನ್ನಾ ಮತ್ತೊಂದು ವಿಡಿಯೋ ವೈರಲ್ ! ಈ ಬಾರಿ ಸದ್ದು ಮಾಡುತ್ತಿರುವುದು ಅಭಿಮಾನಿ ಜೊತೆಗಿನ Video

ತೂಕ ಇಳಿಕೆಯೇ ಸ್ಪಂದನಾ ನಿಧನಕ್ಕೆ ಕಾರಣವಾಯ್ತಾ.?
ವಿಜಯ್‌ ಅವರ ಪತ್ನಿ ಸ್ಪಂದನಾ ಅವರಿಗೆ ಹೃದಯಾಘಾತ ಹೇಗೆ ಸಂಭವಿಸಿರಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ವಿಜಯ್‌ ಪತ್ನಿ ತೂಕ ಇಳಿಸಿಕೊಳ್ಳಲು ಜಿಮ್‌ ಮಾಡುತ್ತಿದ್ದರು ಎನ್ನುವುದು ಕೆಲವು ವರದಿಗಳಿಂದ ತಿಳಿದು ಬಂದಿದೆ.

ಹೌದು ಲಾಕ್‌ಡೌನ್‌ ಸಮಯದಲ್ಲಿ ದಪ್ಪಗಾಗಿದ್ದ ಸ್ಪಂದನಾ ಅವರು ತೂಕ ಇಳಿಸಿಕೊಳ್ಳಲು ಜಿಮ್‌, ಡಯೆಟ್‌ ಮಾಡುತ್ತಿದ್ದರು. ಈ ಮೂಲಕವೇ 16 ಕೆಜಿ ತೂಕ ಕಡಿಮೆಮಾಡಿಕೊಂಡಿದ್ದರು. ಇದೇ ಅವರ ಹೃದಯಾಘತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. 

ಇದನ್ನೂ ಓದಿ-ಈ ಫೋಟೋದಲ್ಲಿರುವ ಬಾಲಕಿ ಈಗ ಖ್ಯಾತ ಬಹುಭಾಷಾ ನಾಯಕಿ: ಶಿವಣ್ಣನ ಜೊತೆ ನಟಿಸಿದ್ದ ಈಕೆ ಬಾಲಿವುಡ್ ಹೀರೋನ ಮಡದಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News