'ಗುಂಟೂರು ಖಾರಂ' ಇವೆಂಟ್‌ನಲ್ಲಿ ಶ್ರೀಲೀಲಾ ಸೀರೆಯೇ ಹೈಲೈಟ್!‌ ಬೆಲೆ ಗೊತ್ತೇ?

Sreeleela In Gunturu Kaaram Pre-release Event: ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಗುಂಟೂರು ಖಾರಂ' ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ನಟಿ ಶ್ರೀಲೀಲಾ ಧರಿಸಿದ್ದ ಸೀರೆಯ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದ್ದು, ಇದರ ಬೆಲೆ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಾದ್ರೆ ಸೀರೆಯ ಬೆಲೆಯೆಷ್ಟು? ಅದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Jan 11, 2024, 09:39 AM IST
  • 'ಗುಂಟೂರು ಖಾರಂ' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಹೇಗೆ ತಮ್ಮ ಅಭಿಮಾನಿಗಳನ್ನು ಸೆಳೆದರೋ , ಅದೇ ರೀತಿ ನಟಿ ಶ್ರೀಲೀಲಾ ಕೂಡ ಫ್ಯಾನ್ಸ್‌ಗೆ ಇಷ್ಟ ಆಗಿದ್ದರು.
  • ನಟಿ ಶ್ರೀಲೀಲಾ ಸೀರೆಯುಟ್ಟು ಮುದ್ದುಮುದ್ದಾಗಿ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ನೆಟ್ಟಿಗರ ಕಣ್ಣು ಈಕೆ ಧರಿಸಿದ್ದ ಸೀರೆ ಮೇಲೆ ಬಿದ್ದಿದೆ.
  • ನೆಟ್ಟಿಗರು ಶ್ರೀಲೀಲಾ ಸೀರೆಯ ಬೆಲೆ ಕಂಡು ಶಾಕ್ ಆಗಿದ್ದಿ, ಈ ಸೀರೆಯ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
'ಗುಂಟೂರು ಖಾರಂ' ಇವೆಂಟ್‌ನಲ್ಲಿ ಶ್ರೀಲೀಲಾ ಸೀರೆಯೇ ಹೈಲೈಟ್!‌ ಬೆಲೆ ಗೊತ್ತೇ? title=

Sreeleela Saree In Gunturu Kaaram Event: ಟಾಲಿವುಡ್‌ ಸ್ಟಾರ್‌ ಪ್ರಿನ್ಸ್‌ ಮಹೇಶ್‌ ಬಾಬು ಹಾಗೂ ನಟಿ ಶ್ರೀಲೀಲಾ ನಟನೆಯ ಬಹನಿರೀಕಷಿತ ಚಿತ್ರ 'ಗುಂಟೂರು ಖಾರಂ' ಇದೇ ಜನವರಿ 12ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ಗುಂಟೂರಿನಲ್ಲಿಯೇ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಇವೆಂಟ್‌ನಲ್ಲಿ ಮಹೇಶ್ ಬಾಬು ಹೇಗೆ ತಮ್ಮ ಅಭಿಮಾನಿಗಳನ್ನು ಸೆಳೆದರೋ , ಅದೇ ರೀತಿ ನಟಿ ಶ್ರೀಲೀಲಾ ಕೂಡ ಫ್ಯಾನ್ಸ್‌ಗೆ ಇಷ್ಟ ಆಗಿದ್ದರು. 
 
ನಟಿ ಶ್ರೀಲೀಲಾ ಸೀರೆಯುಟ್ಟು ಮುದ್ದುಮುದ್ದಾಗಿ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ನೆಟ್ಟಿಗರ ಕಣ್ಣು ಈಕೆ ಧರಿಸಿದ್ದ ಸೀರೆ ಮೇಲೆ ಬಿದ್ದಿದೆ. ಸದ್ಯಕ್ಕೀಗ ಈ ಸೀರೆಯ ಬೆಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾ ಸ್ಟಾರ್‌ಗಳು ತೆರೆಮೇಲೆ ತೆರೆಮೇಲೆ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ಗಮನಿಸುತ್ತಾರೋ, ಹಾಗೇ ಅವರ ತೆರೆಯ ಹಿಂದೆ ಹೇಗಿದ್ದಾರೆ ಅಂತಾನೂ ಫಾಲೋ ಮಾಡುತ್ತಿರುತ್ತಾರೆ. ಅದರಲ್ಲೂ ನಟಿಯರ ಫ್ಯಾಷನ್ ಬ್ರ್ಯಾಂಡ್‌ಗಳ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. 

ಇದನ್ನೂ ಓದಿ: ಟಾಕ್ಸಿಕ್‌ ಚಿತ್ರದಲ್ಲಿ ಬಾಲಿವುಡ್‌ ಬೆಡಗಿ: ಏನ್ಹೇಳಿದ್ರು ಕರೀನಾ ಕಪೂರ್!

ಹೀಗಾಗಿ ನಟಿಯರು ಕೂಡ ತಮ್ಮ ಕಾಸ್ಟ್ಯೂಮ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, 'ಗುಂಟೂರು ಖಾರಂ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೂ ಶ್ರೀಲೀಲಾ ಸಿಂಪಲ್ ಆಗಿ ಸೀರೆಯುಟ್ಟು ಬಂದಿದ್ದರು. ಆದರೆ, ಆ ಸೀರೆಯ ಬೆಲೆ  ಧರಿಸಿದ್ದಷ್ಟು ಸಿಂಪಲ್ ಆಗಿಲ್ಲ ಅನ್ನೋದನ್ನು ನೆಟ್ಟಿಗರು ಕಂಡುಗೊಂಡಿದ್ದಾರೆ. ಚಿತ್ರದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಶ್ರೀಲೀಲಾ ನೋಡಿ ಮಹಿಳೆಯ ಥ್ರಿಲ್ ಆಗಿ, ಅದರಲ್ಲೂ ಅವರ ಕಣ್ಣು ಶ್ರೀಲೀಲಾ ಸೀರೆಯ ಮೇಲೆ ಬಿದ್ದಿದೆ. ಹೀಗಾಗಿ ಸೀರೆಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. 

ಇದೀಗ ನೆಟ್ಟಿಗರು ಶ್ರೀಲೀಲಾ ಸೀರೆಯ ಬೆಲೆ ಕಂಡು ಶಾಕ್ ಆಗಿದ್ದಿ, ಈ ಸೀರೆಯ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ನಟಿ ಶ್ರೀಲೀಲಾ ಧರಿಸಿದ್ದ ಸೀರೆಯ ಹೆಸರಿನ ಬಗ್ಗೆನೂ ಚರ್ಚೆಯಾಗುತ್ತಿದ್ದು, ಇದು 'ಬಾಟಲ್ ಗ್ರೀನ್ ಕಟ್ ವರ್ಕ್ ಸೀರೆ' ಎನ್ನುತ್ತಾರೆ. ಈ ಸೀರೆ ನೋಡುವುದಕ್ಕೆ ತೀರ ಸರಳವಾಗಿದ್ದರೂ, ಬಾರ್ಡರ್‌ ಹಾಗೂ ಅದರ ವಿನ್ಯಾಸ ವಿಭಿನ್ನವಾಗಿದ್ಯಂತೆ. ಈ ಸೀರೆಯ ವಿನ್ಯಾಸಕ್ಕೆ ಹೆಚ್ಚು ಖರ್ಷು ತಗುಲಿದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News