Ajay Devgn: ಬರ್ಥ್ ಡೇ ಸಂಭ್ರಮದಲ್ಲಿರುವ ಅಜಯ್ ದೇವ್ಗನ್ ರಾಜಮೌಳಿಯಿಂದ 'ಬಂಪರ್ ಗಿಫ್ಟ್'! 

ಸೂಪರ್ ಡೈರೆಕ್ಟ್ರ್ ರಾಜಮೌಳಿ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾ 

Last Updated : Apr 2, 2021, 03:14 PM IST
  • 52 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಜಯ್ ದೇವ್‌ಗನ್
  • ಸೂಪರ್ ಡೈರೆಕ್ಟ್ರ್ ರಾಜಮೌಳಿ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾ
  • 'ಆರ್‌ಆರ್‌ಆರ್' ತಂಡದಿಂದ ಅಜಯ್ ಪಾತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಿಡುಗ
Ajay Devgn: ಬರ್ಥ್ ಡೇ ಸಂಭ್ರಮದಲ್ಲಿರುವ ಅಜಯ್ ದೇವ್ಗನ್ ರಾಜಮೌಳಿಯಿಂದ 'ಬಂಪರ್ ಗಿಫ್ಟ್'!  title=

ಮುಂಬೈ: ಇಂದು 52 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಜಯ್ ದೇವ್‌ಗನ್ ಪ್ಯಾನ್ ಇಂಡಿಯಾ   'ಆರ್‌ಆರ್‌ಆರ್' ಚಿತ್ರದಿಂದ 'ಬಂಪರ್ ಗಿಫ್ಟ್' ಸಿಕ್ಕಿದೆ. 

ಸೂಪರ್ ಡೈರೆಕ್ಟ್ರ್ ರಾಜಮೌಳಿ(SS Rajamouli) ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾ ತಂಡದಿಂದ ಅಜಯ್ ಪಾತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.  

ಅಜಯ್(Ajay Devgn) ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮೋಷನ್ ಪೋಸ್ಟರ್ ಅನ್ನು ಪೋಸ್ಟ್ ಮಾಡಿ, 'ಲೋಡ್ ಏಮ್, ಶೂಟ್.. ಇಂತಹ ರೋಮಾಂಚನಕಾರಿ ಮತ್ತು ಶಕ್ತಿಯುತ ಪಾತ್ರದಲ್ಲಿ ನನ್ನನ್ನು ಕಲ್ಪಿಸಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ಬರೆದು ಕೊಂಡಿದ್ದಾರೆ.  

 
 
 
 

 
 
 
 
 
 
 
 
 
 
 

A post shared by Ajay Devgn (@ajaydevgn)

ವೀಡಿಯೊ(Video) ಒಂದು ನಿಮಿಷ 05 ಸೆಕೆಂಡ್ ಇದ್ದು, ವಿಡಿಯೋದಲ್ಲಿ, ಯುದ್ಧಭೂಮಿಯಲ್ಲಿ ಅಜಯ್ ದೇವ್‌ಗನ್ ಅವರನ್ನ ಜನರ ಗುಂಪು ಒಂದು ಸುತ್ತುವರೆದು ನಿಂತಿದ್ದು, ಹಿಂದೆಯಿಂದ 'ಲೋಡ್, ಏಮ್, ಶೂಟ್' ಎಂದು ಜಪಿಸುತ್ತಿರುವ ಧ್ವನಿ ಕೇಳಬಹುದು. ವೀಡಿಯೊದ ಕೊನೆಯಲ್ಲಿ, ಅಜಯ್ ಮೈ ಮೇಲಿದ್ದ ಶಾಲು ಒಂದು ಹಾರಿ ಹೋಗುತ್ತದೆ. ನಂತ್ರ ಅವರ ಫೇಸ್ ಕಾಣಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News