ಸೂಚನ್ ಶೆಟ್ಟಿಯ ʼಒಂದು ತಾತ್ಕಾಲಿಕ ಪಯಣʼ! ಆಂಥಾಲಜಿ ಬಗೆಯ ಸಿನಿಮಾಗೆ ರವಿ ಬಸ್ರೂರು ಚೊಚ್ಚಲ ನಿರ್ಮಾಣ

ಮೂಲತಃ ಕುಂದಾಪುರದವರಾದ ಸೂಚನ್ ಶೆಟ್ಟಿ ಸರಿಸುಮಾರು ಹನ್ನೆರಡು ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ. ಕನಸಿನ ಹಾದಿಯಲ್ಲಿ ಅವುಡುಗಚ್ಚಿ ಮುಂದುವರೆದು ಬಂದಿದ್ದಾರೆ. ಇಂಥಾ ಸುದೀರ್ಘ ಯಾನವೊಂದು `ಒಂದು ತಾತ್ಕಾಲಿಕ ಪಯಣ'ದ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ತುಂಬು ನಂಬಿಕೆ ಅವರಲ್ಲಿದೆ.  

Written by - YASHODHA POOJARI | Last Updated : Oct 17, 2024, 09:31 PM IST
    • `ಒಂದು ತಾತ್ಕಾಲಿಕ ಪಯಣ' ಚಿತ್ರದ ಟ್ರೈಲರ್ ಚರ್ಚೆಗೆ ಗ್ರಾಸವಾಗಿದೆ
    • ಸೂಚನ್ ಶೆಟ್ಟಿ ಸುಮಾರು ಹನ್ನೆರಡು ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ
    • ಇದೊಂದು ಆಂಥಾಲಜಿ ಬಗೆಯ ಸಿನಿಮಾ.
ಸೂಚನ್ ಶೆಟ್ಟಿಯ ʼಒಂದು ತಾತ್ಕಾಲಿಕ ಪಯಣʼ! ಆಂಥಾಲಜಿ ಬಗೆಯ ಸಿನಿಮಾಗೆ ರವಿ ಬಸ್ರೂರು ಚೊಚ್ಚಲ ನಿರ್ಮಾಣ title=
File Photo

`ಒಂದು ತಾತ್ಕಾಲಿಕ ಪಯಣ' (ಒಟಿಪಿ) ಚಿತ್ರದ ಟ್ರೈಲರ್ ಈಗ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ರಂಗದಲ್ಲಿ ಸಾಧಿಸಬೇಕೆಂಬ ಕನಸು ಹೊತ್ತ ಜೀವಗಳ ನೋವು, ನಿರಾಸೆಗಳ ಕಥನ ನೋಡುಗರಿಗೆಲ್ಲ ನಾಟಿಕೊಂಡಿದೆ. ಒಂದು ವಿಶಿಷ್ಟ ಕಥೆಯ ಸುಳಿವಿನೊಂದಿಗೆ ಗಮನ ಸೆಳೆದಿರುವ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಯುವ ನಟ ಸೂಚನ್ ಶೆಟ್ಟಿ ನಟಿಸಿದ್ದಾರೆ. ಸ್ಕ್ರೀನ್ ಪ್ಲೇನಲ್ಲಿಯೇ ವೈಶಿಷ್ಟ್ಯ ಹೊಂದಿರೋ ಸದರಿ ಸಿನಿಮಾದ ಆತ್ಮದಂತಿರೋ ಪಾತ್ರಕ್ಕೆ ಸೂಚನ್ ಶೆಟ್ಟಿ ಜೀವ ತುಂಬಿದ್ದಾರೆ. ಅದರ ಒಂದಷ್ಟು ಚಹರೆಗಳು ಈ ಟ್ರೈಲರಿನಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ: ನಿಂಗಿದು ಬೇಕಿತ್ತಾ? ಮಂಗನ ಜೊತೆಯೇ ಮಂಗನಾಟ ಮಾಡಿದ್ರೇ...! ಈ ವಿಡಿಯೋ ನೋಡಿ ನಕ್ಕು ಸುಸ್ತಾಗ್ತೀರಾ

ಮೂಲತಃ ಕುಂದಾಪುರದವರಾದ ಸೂಚನ್ ಶೆಟ್ಟಿ ಸರಿಸುಮಾರು ಹನ್ನೆರಡು ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ. ಕನಸಿನ ಹಾದಿಯಲ್ಲಿ ಅವುಡುಗಚ್ಚಿ ಮುಂದುವರೆದು ಬಂದಿದ್ದಾರೆ. ಇಂಥಾ ಸುದೀರ್ಘ ಯಾನವೊಂದು `ಒಂದು ತಾತ್ಕಾಲಿಕ ಪಯಣ'ದ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ತುಂಬು ನಂಬಿಕೆ ಅವರಲ್ಲಿದೆ.

ಇದೊಂದು ಆಂಥಾಲಜಿ ಬಗೆಯ ಸಿನಿಮಾ. ಸೂಚನ್ ಶೆಟ್ಟಿ ಅವರ ಸ್ನೇಹಿತರೂ ಆಗಿರುವ ಕಾರ್ತಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದರ ಲೀಡ್ ಪಾತ್ರಗಳಲ್ಲೊಂದನ್ನು ಆವಾಹಿಸಿಕೊಳ್ಳುವ ಅವಕಾಶವನ್ನು ಸೂಚನ್ ಸವಾಲಾಗಿ ಸ್ವೀಕರಿಸಿ ನಟಿಸಿದ್ದಾರಂತೆ. ಈ ಮೂಲಕ ಒಂದೊಳ್ಳೆ ಅನುಭವ ಪಡೆದುಕೊಂಡಿರುವ ಸೂಚನ್ ಪಾಲಿಗೆ ಒಟಿಪಿ ಮೂಲಕ ಓರ್ವ ನಟನಾಗಿ ಬ್ರೇಕ್ ಸಿಗುವ ನಿರೀಕ್ಷೆಗಳಿವೆ.

ಕುಂದಾಪುರವನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ರವಿ ಬಸ್ರೂರು ನಿರ್ಮಾಣ ಮಾಡಿರುವ ಚೊಚ್ಚಲ ಚಿತ್ರವಿದು. ಆರು ವರ್ಷಗಳ ಕಾಲ ಸೂಚನ್ ಶೆಟ್ಟಿ ರವಿ ಬಸ್ರೂರು ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದರು. ಅವರು ನಿರ್ದೇಶನ ಮಾಡಿದ್ದ `ಕಡಲ್' ಎಂಬ ಚಿತ್ರದಲ್ಲಿ ಒಂದು ನೆಗೆಟಿವ್ ರೋಲ್ ಮಾಡಿದ್ದರು. ಅದು ಸೂಚನ್ ಪಾಲಿಗೆ ನಟನಾಗಿ ಮೊದಲ ಚಿತ್ರ. ಆ ಪಾತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಮೂಡಿಕೊಂಡಿತ್ತು. ಅದಾದ ಬಳಿಕ ನಟನೆ ಮತ್ತು ನಿರ್ದೇಶನವನ್ನು ಸರಿದೂಗಿಸಿಕೊಂಡು ಹೋಗುವ ತೀರ್ಮಾನಕ್ಕೆ ಸೂಚನ್ ಬಂದಿದ್ದರು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಕನ್ನಡಿಯಿಟ್ಟು ಮುಖ ನೋಡಿದರೆ ಅದೃಷ್ಟವನ್ನೇ ನೋಡಿದಂತೆ: ತ್ರಿಮೂರ್ತಿಗಳ ದೈವಬಲದಿಂದ ಕುಬೇರ ಸಂಪತ್ತೇ ಒಲಿಯುವುದು!

ಈ ನಡುವೆ ರಿಷಭ್ ಶೆಟ್ಟಿ ನಿರ್ದೇಸನದ ಕಾಂತಾರಾ ಚಿತ್ರದಲ್ಲೊಂದು ಪಾತ್ರವೂ ಸೂಚನ್ ಪಾಲಿಗೆ ಒಲಿದು ಬಂದಿತ್ತು. ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಬದುಕಿಗಾಗಿ ಬೇರೆ ಕೆಲಸ ನೋಡಿಕೊಳ್ಳುವ ಸಂದರ್ಭ ಬಂದಾಗಲೂ ಸಿನಿಮಾ ಸಂಬಂಧಿತ ರಹದಾರಿಗಳನ್ನು ಹುಡುಕಿಕೊಂಡಿದ್ದವರು ಸೂಚನ್. ಒಂದು ಸೀರಿಯಲ್ಲಿನಲ್ಲಿಯೂ ನಟಿಸಿದ್ದ ಅವರು, `ಒಂದು ತಾತ್ಕಾಲಿಕ ಪಯಣ'ದಲ್ಲಿ ಮಹತ್ವದ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ. ಎಲ್ಲರನ್ನೂ ಕಾಡಬಲ್ಲ ಆ ಪಾತ್ರಕ್ಕೆ ಒಂದಷ್ಟು ತಯಾರಿ ನಡೆಸಿಯೇ ಅವರು ಜೀವ ತುಂಬಿದ್ದಾರೆ. ತಮ್ಮ ಇಷ್ಟೂ ವರ್ಷಗಳ ಪಯಣ ಒಟಿಪಿ ಮೂಲಕ ಸಾರ್ಥಕ್ಯ ಕಾಣುತ್ತದೆಂಬ ನಂಬಿಕೆ ಸೂಚನ್ ಅವರಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News