ವಿಶ್ವಾದ್ಯಂತ ಅಖಾಡಕ್ಕಿಳಿದ 'ಪೈಲ್ವಾನ್'; ಅಭಿಮಾನಿಗಳು ಫುಲ್ ಖುಷ್

ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿರುವ ಈ ಬಹುಕೋಟಿ ವೆಚ್ಚದ ಸಿನಿಮಾ ಭರ್ಜರಿ ಸೌಂಡ್ ಮಾಡ್ತಿದೆ.

Last Updated : Sep 12, 2019, 06:39 PM IST
ವಿಶ್ವಾದ್ಯಂತ ಅಖಾಡಕ್ಕಿಳಿದ 'ಪೈಲ್ವಾನ್'; ಅಭಿಮಾನಿಗಳು ಫುಲ್ ಖುಷ್ title=

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೈಲ್ವಾನ್' ಇಂದು ದೇಶಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಸುಮಾರು 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ ವೀಕ್ಷಣೆಗೆ ರಾತ್ರಿಯೆಲ್ಲ ಕಾದು ಟಿಕೆಟ್ ಪಡೆದು  ಅಭಿಮಾನಿಗಳು ಚಿತ್ರ ವೀಕ್ಷಿಸಿದ್ದಾರೆ.

ಮುಂಜಾನೆ 5 ಗಂಟೆಯಿಂದಲೇ ಶೋ ಆರಂಭವಾಗಿದ್ದು, ಎಲ್ಲೆಡೆ ಕಿಚ್ಚ ಸುದೀಪ್ ಕಟೌಟ್ ರಾರಾಜಿಸುತ್ತಿದೆ. ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಜಮಾಯಿಸಿದ್ದು ಪೈಲ್ವಾನ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿರುವ ಈ ಬಹುಕೋಟಿ ವೆಚ್ಚದ ಸಿನಿಮಾ ಭರ್ಜರಿ ಸೌಂಡ್ ಮಾಡ್ತಿದೆ.

'ಬಲ ಇದೆ ಅಂತ ಹೊಡೆದೋನು ರೌಡಿ, ಬಲವಾದ ಕಾರಣಕ್ಕೆ ಹೊಡೆಯೋನು ಯೋಧ' ಎಂಬ ಈ ಚಿತ್ರದ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪಕ್ಕಾ ಕುಸ್ತಿ ಪಟು ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಕಿಚ್ಚಾ ಸುದೀಪ್ ಮೈಕಟ್ಟಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

ಕಿಚ್ಚ ಸುದೀಪ್ ಗೆ ಜೋಡಿಯಾಗಿ ಆಕಾಂಕ್ಷ ಸಿಂಗ್ ಅಭಿನಯಿಸಿದ್ದು, ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್ ಮುಖ್ಯ ಪಾತ್ರದಲ್ಲಿದ್ದಾರೆ. ಎಸ್.ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಆರ್.ಆರ್.ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ವಪ್ನಾ ಕೃಷ್ಣ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು, ಎಲ್ಲಾ ಹಾಡುಗಳೂ ಈಗಾಗಲೇ ಸೂಪರ್ ಹಿಟ್ ಆಗಿವೆ.

Trending News