'ದಿಲ್ ಬೆಚರಾ' ಚಿತ್ರಕ್ಕಾಗಿ ಅರ್ಧದಷ್ಟು ಹಣ ಪಡೆದಿದ್ದ ಸುಶಾಂತ್, 1 ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು?

ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಯಿತು.

Last Updated : Aug 25, 2020, 02:15 PM IST
  • ಸುಶಾಂತ್ ಸಿಂಗ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು
  • ಚಿತ್ರ ಬಿಡುಗಡೆಯೊಂದಿಗೆ ಹಲವಾರು ದಾಖಲೆಗಳನ್ನು ಮಾಡಿದೆ
  • ಸುಶಾಂತ್ ಈ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು ಅರ್ಧದಷ್ಟು ಕಡಿಮೆ ಮಾಡಿದ್ದರು.
'ದಿಲ್ ಬೆಚರಾ' ಚಿತ್ರಕ್ಕಾಗಿ ಅರ್ಧದಷ್ಟು ಹಣ ಪಡೆದಿದ್ದ ಸುಶಾಂತ್, 1 ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು? title=

ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' (Dil Bechara) ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಚಿತ್ರ ಬಿಡುಗಡೆಯೊಂದಿಗೆ ಹಲವಾರು ದಾಖಲೆಗಳನ್ನು ಮಾಡಿದೆ. ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಈ ಚಿತ್ರದ ಮೂಲಕ ನಿರ್ದೇಶನ ಮಾಡಿದರು ಮತ್ತು ಸಂಜನಾ ಸಂಘಿ ಅವರ ಮೊದಲ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ಒಂದು ತಿಂಗಳ ನಂತರ ಅದು ಮತ್ತೊಮ್ಮೆ ಸುದ್ದಿಯಲ್ಲಿದೆ. ವರದಿಯ ಪ್ರಕಾರ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಈ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು ಅರ್ಧದಷ್ಟು ಕಡಿಮೆ ಮಾಡಿದ್ದಾರೆ.

ನಮ್ಮ ಅಂಗಸಂಸ್ಥೆ ವೆಬ್‌ಸೈಟ್ ಡಿಎನ್‌ಎ ಪ್ರಕಟಿಸಿದ ಸುದ್ದಿಯ ಪ್ರಕಾರ ಈ ಕುರಿತು ಮಾತನಾಡಿದ ದಿವಂಗತ ನಟನ ಸ್ನೇಹಿತ, 'ಸುಶಾಂತ್ ಸಾಮಾನ್ಯವಾಗಿ ಪ್ರತಿ ಚಿತ್ರಕ್ಕೂ 6-8 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ' ದಿಲ್ ಬೆಚರಾ' ಚಿತ್ರಕ್ಕೆ ಅವರು ಅರ್ಧದಷ್ಟು ಹಣವನ್ನು ಮಾತ್ರ ತೆಗೆದುಕೊಂಡರು. ಅಂದರೆ ಅವರು ಚಿತ್ರಕ್ಕಾಗಿ 3 ಕೋಟಿ ರೂ. ಮಾತ್ರ ಸಂಭಾವನೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಇದು ಮುಖೇಶ್ ಛಾಬ್ರಾ (Mukesh Chhabra) ನಿರ್ದೇಶಿಸಿದ ಮೊದಲ ಚಿತ್ರ ಮತ್ತು ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಹಾಗಾಗಿ ಸುಶಾಂತ್ ಅವರ ಮೊದಲ ಚಿತ್ರದಲ್ಲಿ ಅಭಿನಯಿಸುವುದಾಗಿ ಮುಖೇಶ್ ಅವರಿಗೆ ಭರವಸೆ ನೀಡಿದ್ದರಂತೆ. 'ದಿಲ್ ಬೆಚರಾ' ಶೀರ್ಷಿಕೆ ಈ ಮೊದಲು 'ಕೆ.ಜಿ ಮತ್ತು ಮೈನಿ' ಎಂದು ಹೆಸರಿಸಲಾಗಿತ್ತು. 

ಸುಶಾಂತ್ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಾಗ ಚಿತ್ರ ತಂಡದ ಸವಾಲುಗಳನ್ನು ಕಣ್ಣಾರೆ ಕಂಡ ಅವರು ತಮ್ಮ ಸಂಭಾವನೆಯಲ್ಲಿ ಅರ್ಧದಷ್ಟು ಸಂಭಾವನೆಯನ್ನು ಕಡಿತಗೊಳಿಸಿದರು. ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋಸ್‌ನೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದರು ಮತ್ತು ಇನ್ನೂ ಕೆಲವು ಚಿತ್ರಗಳಿಗಾಗಿ ಬ್ಯಾನರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಹಾಗಾಗಿ ತಮ್ಮ ಸಂಭಾವನೆಯನ್ನು ಕಡಿಮೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಹಾಯ ಮಾಡಿದ್ದರು ಎಂದು ಸುಶಾಂತ್ ಅವರ ಸ್ನೇಹಿತ ತಿಳಿಸಿದ್ದಾರೆ.

Trending News