ಇನ್ಸ್ಟಾಗ್ರಾಮ್ ನ ಕೊನೆ ಪೋಸ್ಟ್ ನಲ್ಲಿ ತಾಯಿಯನ್ನು ಸ್ಮರಿಸಿದ್ದ ಸುಶಾಂತ್ ಸಿಂಗ್ ರಜಪೂತ್...!

ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ಮನೆಯಲ್ಲಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಅವರ ಹಠಾತ್ ನಿಧನವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.

Last Updated : Jun 14, 2020, 05:02 PM IST
ಇನ್ಸ್ಟಾಗ್ರಾಮ್ ನ ಕೊನೆ ಪೋಸ್ಟ್ ನಲ್ಲಿ ತಾಯಿಯನ್ನು ಸ್ಮರಿಸಿದ್ದ ಸುಶಾಂತ್ ಸಿಂಗ್ ರಜಪೂತ್...! title=
Photo Courtsey : Instagram

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ಮನೆಯಲ್ಲಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಅವರ ಹಠಾತ್ ನಿಧನವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್  ತಮ್ಮ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಜೂನ್ 3 ರಂದು ಹಂಚಿಕೊಂಡಿದ್ದಾರೆ, ಇದನ್ನು 2002 ರಲ್ಲಿ ನಿಧನರಾದ ಅವರ ತಾಯಿಗೆ ಸಮರ್ಪಿಸಿ ಹೃತ್ಪೂರ್ವಕ ಕವಿತೆ ಬರೆದಿದ್ದಾರೆ.

 
 
 
 

 
 
 
 
 
 
 
 
 

Blurred past evaporating from teardrops Unending dreams carving an arc of smile And a fleeting life, negotiating between the two... #माँ ❤️

A post shared by Sushant Singh Rajput (@sushantsinghrajput) on

ಸುಶಾಂತ್ ತನ್ನ ತಾಯಿಯ ಕೊಲಾಜ್ ಚಿತ್ರವನ್ನು ಹಂಚಿಕೊಂಡಿದ್ದಾನೆ ಮತ್ತು "ಕಣ್ಣೀರಿನ ಹನಿಗಳಿಂದ ಆವಿಯಾಗುವ ಹಿಂದಿನ ಮಸುಕಾದ ಕನಸುಗಳು ನಗುವನ್ನು ಕೆತ್ತನೆ ಮಾಡುವ ಕನಸುಗಳು ಮತ್ತು ಕ್ಷಣಿಕ ಜೀವನ, ಇಬ್ಬರ ನಡುವೆ ಮಾತುಕತೆ ... ಮಾ ' ಎಂದು ಭಾವಪೂರ್ಣ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣು 

ಸುಶಾಂತ್ ಸಿಂಗ್ ರಜಪೂತ್ ಅವರ ತಾಯಿಯ ನಿಧನದ ನಂತರ ಅವರ ಕುಟುಂಬ ಪಾಟ್ನಾದಿಂದ ದೆಹಲಿಗೆ ಸ್ಥಳಾಂತರಗೊಂಡಿತು.

ಸುಶಾಂತ್ ಸಿಂಗ್ ರಜಪೂತ್ ಕೊನೆಯ ಬಾರಿಗೆ ಚಿಚೋರ್ನಲ್ಲಿ ಶ್ರದ್ಧಾ ಕಪೂರ್ ಎದುರು ಕಾಣಿಸಿಕೊಂಡರು. ಕರೋನವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಇದ್ದುದ್ದರಿಂದ ಶೂಟಿಂಗ್ ನಿಲ್ಲಿಸುವ ಮೊದಲು ಅವರು ಮುಖೇಶ್ ಛಬ್ರಾ ಅವರ ದಿಲ್ ಬೆಚರಾದಲ್ಲಿ ಕೆಲಸ ಮಾಡುತ್ತಿದ್ದರು. 

Trending News