ಬಿಗ್ ಬಾಸ್‌ಗೆ ಎಂಟ್ರಿಕೊಟ್ಟ ರಿಲ್ಸ್‌ ಸ್ಟಾರ್‌ ಕಿಲಿ ಪಾಲ್..!

ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಕಿಲಿ ಪೌಲ್ ತನ್ನ ಬಿಗ್‌ ಬಾಸ್‌ ಹಿಂದಿ 16ನೇ ಸೀಸನ್‌ ಪ್ರವೇಶಿಸಿದ್ದಾರೆ. ಕಿಲಿ ತನ್ನ ಸಹೋದರಿ ನೀಮಾಳೊಂದಿಗೆ ಭಾರತೀಯ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಹೆಸರುವಾಸಿಯಾಗಿದ್ದಾನೆ.

Written by - Krishna N K | Last Updated : Oct 5, 2022, 04:04 PM IST
  • ಬಿಗ್‌ ಬಾಸ್‌ ಹಿಂದಿ 16ನೇ ಸೀಸನ್‌ ಪ್ರವೇಶಿಸಿದ ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಕಿಲಿ ಪೌಲ್
  • ಕಿಲಿ ತನ್ನ ಸಹೋದರಿ ನೀಮಾಳೊಂದಿಗೆ ಭಾರತೀಯ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಹೆಸರುವಾಸಿ
  • ಇನ್ಸ್ಟಾಗ್ರಾಮ್‌ ಮತ್ತು ಟಿಕ್‌ಟಾಕ್‌ನಲ್ಲಿ ಭಾರತೀಯ ಚಿತ್ರ ಗೀತೆಗಳಿಗೆ ರೀಲ್ಸ್‌ ಮಾಡುವ ಮೂಲಕ ದೇಶಾದ್ಯಂತ ಚಿರಪರಿಚಿತ
ಬಿಗ್ ಬಾಸ್‌ಗೆ ಎಂಟ್ರಿಕೊಟ್ಟ ರಿಲ್ಸ್‌ ಸ್ಟಾರ್‌ ಕಿಲಿ ಪಾಲ್..! title=

ಮುಂಬೈ : ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಕಿಲಿ ಪೌಲ್ ತನ್ನ ಬಿಗ್‌ ಬಾಸ್‌ ಹಿಂದಿ 16ನೇ ಸೀಸನ್‌ ಪ್ರವೇಶಿಸಿದ್ದಾರೆ. ಕಿಲಿ ತನ್ನ ಸಹೋದರಿ ನೀಮಾಳೊಂದಿಗೆ ಭಾರತೀಯ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕ ಹೆಸರುವಾಸಿಯಾಗಿದ್ದಾನೆ.

ಇನ್ಸ್ಟಾಗ್ರಾಮ್‌ ಮತ್ತು ಟಿಕ್‌ಟಾಕ್‌ನಲ್ಲಿ ಭಾರತೀಯ ಚಿತ್ರ ಗೀತೆಗಳಿಗೆ ರೀಲ್ಸ್‌ ಮಾಡುವ ಮೂಲಕ ದೇಶಾದ್ಯಂತ ಚಿರಪರಿಚಿತವಾಗಿರುವ ಕಿಲಿ ಪೌಲ್‌ ಸಧ್ಯ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾನೆ. ಇತ್ತೀಚೆಗೆ ಕಿಲಿ ಬಿಗ್‌ಹೌಸ್‌ನಲ್ಲಿ ಅಬ್ದು ರೋಜಿಕ್ ಮತ್ತು ಎಂಸಿ ಸ್ಟಾನ್ ಅವರೊಂದಿಗೆ ವೀಡಿಯೊ ಮಾಡಿದ್ದನು. ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಲ್ಮಾನ್ ಖಾನ್ ಅವರ "ಪ್ಯಾರ್ ಕಿಯಾ ತೋ ಡರ್ನಾ ಕ್ಯಾ" ಚಿತ್ರದ "ಓ ಓ ಜಾನೆ ಜಾನಾ" ಹಾಡಿಗೆ ರೀಲ್ಸ್‌ ಮಾಡಿದ್ದರು.

ಇದನ್ನೂ ಓದಿ: ಹಿಂದೂ ಯುವಕನಿಗೆ ಬಲವಂತದ ʼಕತ್ನಾʼ : ಮಾಜಿ ಕಾರ್ಪೋರೇಟರ್‌ ವಿರುದ್ಧ ಗಂಭೀರ ಆರೋಪ..!

ಈ ಮಧ್ಯೆ, ಕಾರ್ಯಕ್ರಮದ ಮುಂಬರುವ ಸಂಚಿಕೆಯಲ್ಲಿ, ನಾಯಕಿ ನಿಮೃತ್ ಕೌರ್ ಅಹ್ಲುವಾಲಿಯಾ ಅವರು ಬಿಗ್ ಬಾಸ್‌ನಿಂದ ವಿಶೇಷ ಅಧಿಕಾರವನ್ನು ಪಡೆಯಲಿದ್ದಾರೆ, ಅದರ ಮೂಲಕ ಅವರು ಟೀನಾ ದತ್ತಾ, ಮಾನ್ಯ ಸಿಂಗ್ ಮತ್ತು ಸೌಂದರ್ಯ ಶರ್ಮಾ ಅವರಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಕೆಲಸ ಮಾಡುವ ಶಿಕ್ಷೆಯಿಂದ ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News