ಸೆಪ್ಟೆಂಬರ್ 29ಕ್ಕೆ ಅಭಿಮಾನಿಗಳಿಗೆ ದೊರೆಯಲಿದೆ 'ತಾರಕ್' ದರ್ಶನ

ಸುಮಾರು 300 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ 'ತಾರಕ್'

Last Updated : Sep 27, 2017, 05:06 PM IST
ಸೆಪ್ಟೆಂಬರ್ 29ಕ್ಕೆ ಅಭಿಮಾನಿಗಳಿಗೆ ದೊರೆಯಲಿದೆ 'ತಾರಕ್' ದರ್ಶನ  title=
Pic: Youtube

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಬಹು ನಿರೀಕ್ಷಿತ 'ತಾರಕ್' ಸಿನಿಮಾ ಇದೇ ಶುಕ್ರವಾರ ಅಂದರ ಸೆ.29 ಕ್ಕೆ ತೆರೆಕಾಣಲಿದೆ. ಒಟ್ಟು 300 ಚಿತ್ರಮಂದಿರಗಳಲ್ಲಿ ತೆರೆ ಕಾಣಲು ತಾರಕ್ ಸಿದ್ದವಾಗಿದೆ. 

ಟೀಸರ್ ನೋಡಿ ಈಗಾಗಲೇ ಫುಲ್ ಖುಷಿಯಾಗಿರುವ ದರ್ಶನ್ ಅಭಿಮಾನಿಗಳಿಗೆ ಈ ವರ್ಷದ ಆಯುಧ ಪೂಜೆ, ದಸರಾ ಹಬ್ಬವು ಉತ್ತಮ ಮನರಂಜನೆ ನೀಡಲಿದೆ. ಅಭಿಮಾನಿಗಳಲ್ಲಿ ಚಿತ್ರದ ಬಗೆಗೆ ಬಹಳ ನಿರೀಕ್ಷೆ ಇದ್ದು, ಚಿತ್ರ ತಂಡ ಮಾತ್ರ ಹೆಚ್ಚು ಸದ್ದು ಮಾಡುತ್ತಿಲ್ಲ. 

ದರ್ಶನ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ್ ನಾಯಕಿಯರಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ದರ್ಶನ್ ತಾತನ ಪಾತ್ರದಲ್ಲಿ ನಟಿಸಿದ್ದಾರೆ. ಸದಾ ಫ್ಯಾಮಿಲಿ ಒರಿಯೆಂಟ್ಟೆಡ್ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಇದು ದರ್ಶನ್ ಮತ್ತು ಪ್ರಕಾಶ್ ಕಾಂಬಿನೇಶನ್ ಮೊದಲ ಚಿತ್ರ. 

Trending News