ಬಾಲಿವುಡ್ ನಟಿ ಸೋನಂ ಕಪೂರ್ ಕ್ಷಮೆ ಯಾಚಿಸಿದ ನಟ ರಾಣಾ ದಗ್ಗುಬಾಟಿ!

ಈ ಸಂದರ್ಭದಲ್ಲಿ ನನ್ನ ಸ್ನೇಹಿತ ದುಲ್ಕರ್ ಸಲ್ಮಾನ್ ಮತ್ತು ಸೋನಮ್ ಕಪೂರ್ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಈ ಸ್ಪಷ್ಟನೆ ಊಹಾಪೋಹ ಮತ್ತು ತಪ್ಪು ತಿಳುವಳಿಕೆಯನ್ನು ಇಲ್ಲಿಗೆ ಅಂತ್ಯಗೊಳಿಸುತ್ತದೆ ಅಂತಾ ನಾನು ಭಾವಿಸಿದ್ದೇನೆ ಎಂದು ರಾಣಾ ಟ್ವೀಟ್ ಮಾಡಿದ್ದಾರೆ.  

Written by - Puttaraj K Alur | Last Updated : Aug 16, 2023, 08:22 PM IST
  • ಬಾಲಿವುಡ್ ನಟಿ ಸೋನಮ್ ಕಪೂರ್ ಬಳಿ ಕ್ಷಮೆಯಾಚಿಸಿದ ರಾಣಾ ದಗ್ಗುಬಾಟಿ
  • ‘ಕಿಂಗ್ ಆಫ್ ಕೋಥಾ’ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೆ ನೀಡಿದ್ದ ರಾಣಾ
  • ದುಲ್ಕರ್ ಸಲ್ಮಾನ್ ಮತ್ತು ಸೋನಮ್ ಕಪೂರ್ ಬಳಿ ಕ್ಷಮೆಯಾಚಿಸಿ ಸ್ಪಷ್ಟನೆ
ಬಾಲಿವುಡ್ ನಟಿ ಸೋನಂ ಕಪೂರ್ ಕ್ಷಮೆ ಯಾಚಿಸಿದ ನಟ ರಾಣಾ ದಗ್ಗುಬಾಟಿ! title=
ಕ್ಷಮೆಯಾಚಿಸಿದ ರಾಣಾ ದಗ್ಗುಬಾಟಿ

ನವದೆಹಲಿ: ತಮ್ಮ ಹೇಳಿಕೆಗಾಗಿ ತೆಲುಗು ನಟ ರಾಣಾ ದಗ್ಗುಬಾಟಿ ಅವರು ಬಾಲಿವುಡ್ ನಟಿ ಸೋನಮ್ ಕಪೂರ್ ಬಳಿ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನಲ್ಲಿ ಆಯೋಜಿಸಿದ್ದ‘ಕಿಂಗ್ ಆಫ್ ಕೋಥಾ’ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿಯವರು ಮಲಯಾಳಂ ನಟ ದುಲ್ಕರ್ ಸಲ್ಮಾನ್ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದರು.

ಈ ವೇಳೆ ರಾಣಾ ಅವರು ಪರೋಕ್ಷವಾಗಿ ಬಾಲಿವುಡ್ ನಟಿ ಸೋನಮ್ ಕಪೂರ್ ವಿರುದ್ಧ ಹೇಳಿಕೆಯೊಂದನ್ನು ನೀಡದ್ದರು. ‘ದುಲ್ಕರ್ ಮತ್ತು ನಾನು ಆತ್ಮೀಯ ಸ್ನೇಹಿತರು. ದುಲ್ಕರ್ ಹಿಂದಿ ಸಿನಿಮಾವೊಂದನ್ನು ಮಾಡುತ್ತಿದ್ದು, ನಮ್ಮ ಮನೆಯ ಬಳಿಯೇ ಚಿತ್ರೀಕರಣ ನಡೆಯುತ್ತಿತ್ತು. ನಾನು ದುಲ್ಕರ್ ಭೇಟಿಗೆ ಶೂಟಿಂಗ್ ಸ್ಥಳಕ್ಕೆ ಹೋಗಿದ್ದೆ. ಶೂಟಿಂಗ್ ವೇಳೆ ದುಲ್ಕರ್ ಮೂಲೆಯೊಂದರಲ್ಲಿ ಕುಳಿತಿದ್ದರೆ, ಬಾಲಿವುಡ್‍ನ ದೊಡ್ಡ ನಟಿ ಲಂಡನ್‍ನಲ್ಲಿರುವ ತಮ್ಮ ಗಂಡನ ಜೊತೆಗೆ ಮಾತನಾಡುತ್ತಾ ದುಲ್ಕರ್ ಅವರ ಸಮಯ ಹಾಳು ಮಾಡುತ್ತಿದ್ದರು’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: Vijay Devarkonda : ಸಮಂತಾ ನನ್ನ ಕ್ರಷ್‌ ಎಂದ ರೌಡಿಬಾಯ್‌; ಹಾಗಿದ್ರೆ ನ್ಯಾಷನಲ್‌ ಕ್ರಷ್ ಕಥೆ ಏನು ಎಂದ ನೆಟಿಜನ್ಸ್‌!‌

ಈ ವೇಳೆ ನಟ ರಾಣಾ ಯಾರ ಹೆಸರನ್ನು ಉಲ್ಲೇಖಿಸದಿದ್ದರೂ, ಅವರು ನಟಿ ಸೋನಂ ಅವರ ವಿರುದ್ಧವೇ ಮಾತನಾಡಿದ್ದಾರೆ ಮತ್ತು ಈ ಘಟನೆಯು ‘ದಿ ಝೋಯಾ ಫ್ಯಾಕ್ಟರ್‌’ನ ಚಿತ್ರೀಕರಣದ ವೇಳೆ ಸಂಭವಿಸಿದೆ ಎಂದು ನೆಟಿಜನ್‌ಗಳು ಚರ್ಚಿಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ರಾಣಾ ಹೇಳಿಕೆ ಸಖತ್ ಸೌಂಡ್ ಮಾಡಿತ್ತು.

ಇದೀಗ ತಮ್ಮ ಹೇಳಿಕೆಗೆ ಬಗ್ಗೆ ರಾಣಾ ಟ್ವೀಟ್ ಮೂಲಕ ಸ್ಪಷ್ಟನೆ ನೀಡುವ ಮೂಲಕ ನಟಿ ಬಳಿ ಕ್ಷಮೆಯಾಚಿಸಿದ್ದಾರೆ. ‘ನನ್ನ ಹೇಳಿಕೆಯು ನಟಿ ಸೋನಮ್ ಕಪೂರ್ ಅವರ ವ್ಯಕ್ತಿತ್ವವನ್ನು ನಕಾರಾತ್ಮಕ ರೀತಿಯಲ್ಲಿ ಚಿತ್ರಿಸುವ ಸಾಧ್ಯತೆಯಿದೆ. ನನ್ನ ಈ ಹೇಳಿಕೆಯಿಂದ ತುಂಬಾ ನೊಂದಿದ್ದೇನೆ. ನಾನು ಏನು ಹೇಳಿದ್ದೇನೋ ಅದು ಅಸತ್ಯ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಲ್ಲಾ ಸ್ನೇಹಿತರಂತೆ ನಾವು ಸಹ ತಮಾಷೆ ಮಾಡಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನನ್ನ ಸ್ನೇಹಿತ ದುಲ್ಕರ್ ಸಲ್ಮಾನ್ ಮತ್ತು ಸೋನಮ್ ಕಪೂರ್ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಈ ಸ್ಪಷ್ಟನೆ ಊಹಾಪೋಹ ಮತ್ತು ತಪ್ಪು ತಿಳುವಳಿಕೆಯನ್ನು ಇಲ್ಲಿಗೆ ಅಂತ್ಯಗೊಳಿಸುತ್ತದೆ ಅಂತಾ ನಾನು ಭಾವಿಸಿದ್ದೇನೆ’ ಎಂದು ರಾಣಾ ಟ್ವೀಟ್ ಮಾಡಿದ್ದಾರೆ.  

ಇದನ್ನೂ ಓದಿ: Jailer collection : ಜೈಲರ್‌ ಹೊಸ ದಾಖಲೆ, ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್‌! ಒಟ್ಟು ಕಲೆಕ್ಷನ್‌ ಎಷ್ಟು ಕೋಟಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News