KicchaSudeep: ಸುದೀಪ್ ಗೆ ಬೆದರಿಕೆ ಪತ್ರ ಹಿನ್ನಲೆ ಅದೊಂದು ಪೋಸ್ಟ್‌ ಆಫೀಸ್‌ನಿಂದ ಅಪರಾಧಿಯ ಸುಳಿವು!

Threat Letter To Sudeep: ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಬಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಿದೆ. ಈಗಾಗಲೇ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ. ಪ್ರಕರಣದ ಹಿನ್ನಲೆ ಲೆಟರ್‌ ಪೋಸ್ಟ್‌ ಮಾಡಿದ ಪೋಸ್ಟ್ ​ಆಫೀಸ್​ ಪತ್ತೆಯಾಗಿದೆ.

Written by - Zee Kannada News Desk | Last Updated : Apr 7, 2023, 10:29 AM IST

    ನಟ ಸುದೀಪ್ ಗೆ ಬಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆ ತನಿಖೆ ಚುರುಕು

    ಪತ್ರ ಪ್ರಕರಣದ ಹಿನ್ನಲೆ ಲೆಟರ್‌ ಪೋಸ್ಟ್‌ ಮಾಡಿದ ಪೋಸ್ಟ್ ​ಆಫೀಸ್​ ಪತ್ತೆ

    ಪತ್ರ ಬರೆದ ವ್ಯಕ್ತಿಗಾಗಿ ಸಿಸಿಬಿ ಜಾಲಾಟ

KicchaSudeep: ಸುದೀಪ್ ಗೆ ಬೆದರಿಕೆ ಪತ್ರ ಹಿನ್ನಲೆ ಅದೊಂದು ಪೋಸ್ಟ್‌ ಆಫೀಸ್‌ನಿಂದ ಅಪರಾಧಿಯ ಸುಳಿವು! title=

ಬೆಂಗಳೂರು : ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಬಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಚುರುಕಾಗಿದೆ. ಈಗಾಗಲೇ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾರಂಗ ಎರಡೂ ಆಯಾಮದಲ್ಲೂ ತನಿಖೆ ಬಿಗಿ ಗೊಳಿಸಿದ್ದಾರೆ. ಈ ನಡುವೆ ಸಿನಿಮಾರಂಗದ ಕೆಲ ವಿರೋಧಿಗಳ‌ ಜೊತೆ ಸೇರಿ ವ್ಯಕ್ತಿಯೋರ್ವ ಈ  ಕೃತ್ಯ ನಡೆಸಿರಬಹುದು ಎನ್ನುವ ಸಂದೇಹ ವ್ಯಕ್ತವಾಗಿದೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅವಾಚ್ಯ ಶಬ್ದಗಳನ್ನು ಬಳಸಿ, ನಿಂದನೀಯ ಪದಗಳನ್ನು ಉಪಯೋಗಿಸಿ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿ ಬೆಂಗಳೂರಿನಲ್ಲಿರುವ ಸುದೀಪ್ ನಿವಾಸಕ್ಕೆ ಈ ಪತ್ರವನ್ನು ಪೋಸ್ಟ್‌ ಮಾಡಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಯಾರು ಈ ಕೃತ್ಯ ಮಾಡಿದ್ದಾರೆ ಅನ್ನೋದು ಗೊತ್ತಿದೆ ನಾನು ಯಾವುದಕ್ಕೂ ಹೆದರುವವನಲ್ಲ, ಸರಿಯಾದ ಉತ್ತರ ಕೊಡದೇ ಬಿಡುವವನೂ ಅಲ್ಲ ಎಂದಿದ್ದರು.

ಇದನ್ನೂ ಓದಿ: Kannada Actor: ಪೈಲೇಟ್‌ ಆಗಬೇಕು ಎಂದಕೊಂಡವನು ನಟ ಆದ ಜಯ್‌ ಡಿಸೋಜಾ! ಇನ್ಟ್ರಸ್ಟಿಂಗ್ ಕಥೆ ಇಲ್ಲಿದೆ 

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಕಾರು ಚಾಲಕನ ಮೇಲೆ ಅನುಮಾನ  ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕಾರು ಚಾಲಕನೊಬ್ಬನನ್ನು ಸುದೀಪ್ ಕೆಲಸದಿಂದ ತೆಗೆಡು ಹಾಕಿದ್ದರಿಂದ  ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದುಕೊಂದಿರಬಹುದು ಎನ್ನುವ ಅನುಮಾನ ಹೊರ ಬಿದ್ದಿತ್ತು ಇದೀಗ ಮತ್ತೊಂದು ಸುಳಿವು ಸಿಕ್ಕಿದೆ..

ಕಿಚ್ಚನಿಗೆ ಬೆದರಿಕೆ ಪತ್ರ ಪ್ರಕರಣದ ಹಿನ್ನಲೆ ಲೆಟರ್‌ ದೊಮ್ಮಲೂರಿನ ಪೋಸ್ಟ್‌ ಆಫೀಸ್​ನಿಂದ ಮಾಡಲಾದ ಬೆದರಿಕೆ ಪತ್ರಗಳು ಎಂದು ತಿಳಿದು  ಬಂದಿದೆ.  ಲೆಟರ್ ಹಾಕಿದ ಪೋಸ್ಟ್ ಬಾಕ್ಸ್ ಬಳಿ ಇರೋ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗಿದೆ. ಪತ್ರ ಬರೆದ ವ್ಯಕ್ತಿಗಾಗಿ ಸಿಸಿಬಿ ಜಾಲಾಟ ನಡೆಸಲಾಗುತ್ತಿದೆ. ಬೆದರಿಕೆ ಪತ್ರದ ಒಂದೊಂದೆ ಸುಳಿವು ತನಿಖೆಗೆ ಸುಲಭ ಮಾರ್ಗಪಾಯ ಮಾಡಿಕೊಡುತ್ತಿದೆ. 

ಇದನ್ನೂ ಓದಿ: Sumalatha Met Modi: ಪುತ್ರನ ಜೊತೆ ಪಿಎಂ ಮೋದಿ ಭೇಟಿಯಾದ ಸುಮಲತಾ ! ಕಾರಣವೇನು ಗೊತ್ತಾ?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News